90ರ ತುಂಬು ಬಾಳಲಿ ಅಲಿ
ಮೈಸೂರು: ವಿಧಾನಸಭಾ ಸದಸ್ಯ ಹಾಗೂ ಚುಟುಕು ರತ್ನ ಡಾ.ಎಂ.ಅಕಬರ ಅಲಿ ಅವರ ತೊಂಬತ್ತನೆ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಎಂಜಿನಿಯರಗಳ ಸಂಸ್ಥೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಚುಟುಕು ಸಾಹಿತ್ಯ ಪರಿಷತ್ ಹಾಗೂ ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ. ವೆಂಕಟೇಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಅಕಬರ ಅಲಿ ಅವರ ಸರಳತೆ ಹಾಗೂ ಸಜ್ಜನಿಕೆ ಇಂದಿನ ಯುವ ಬರಹಗಾರರಿಗೆ ಆದರ್ಶ. ಬರವಣಿಗೆಯ ಜತೆಗೆ ಸಜ್ಜನಿಕೆಯೂ ಅವಶ್ಯಕ. ಆಗ ಸಮಾಜದ ಪುರಸ್ಕಾರವೂ ದೊರೆಯಲಿದೆ. ಸಾಹಿತ್ಯ ಕೃಷಿ ಮೂಲಕ ವಿವಿಧ ವಿಷಯಗಳ ಸೂಕ್ಷ್ಮತೆ ಅರಿತಿರುವ ಬಹುದೊಡ್ಡ ವ್ಯಕ್ತಿತ್ವ ಎಂದರು.
ಮೇಡಿವೆವ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ.ಸಿ. ಶರತ್ಕುಮಾರ್ ಡಾ. ಅಕಬರ ಅಲಿ ಅವರನ್ನು ಸನ್ಮಾನಿಸಿದರು. ದಾಸ್ತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಡಿ. ತಿಮ್ಮಯ್ಯ ಅಭಿನಂದಿತರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮೈಸೂರು ವಿವಿಯಿಂದ ಪಿಎಚ್ಡಿ ಪದವಿ ಗಳಿಸಿರುವ ಡಾ.ಸಿ. ಶರತ್ಕುಮಾರ್, ಅಕಬರ ಅಲಿ ಬದುಕು ಮತ್ತು ಬರಹ ಎಂಬ ವಿಷಯ ಕುರಿತು ಪಿಎಚ್ಡಿ ಮಂಡಿಸಿರುವ ಹಲಿಯಾಳ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ಎಂಜಿನಿಯರಗಳ ಸಂಸ್ಥೆಯ ಅಧ್ಯಕ್ಷ ಡಾ.ಟಿ. ಅನಂತ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್. ಸತೀಶ್, ಲೇಖಕ ಏಜಾಜ್ ಪಾಷಾ ಮುಖ್ಯ ಅತಿಥಿಯಾಗಿದ್ದರು. ಪ್ರೊ.ಕೆರೊಡಿ ಎಂ. ಲೋಲಾಕ್ಷಿ ಸ್ವಾಗತಿಸಿದರು. ಪರಿಷತ್ ಸಂಚಾಲಕ ಡಾ. ಎಂ.ಜಿ.ಆರ್ ಅರಸ್ ನಿರೂಪಿಸಿದರು. ನಂತರ ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

