ಮೈಸೂರು

ಕಾಂಗ್ರೆಸ್ ಬೆಂಬಲಿಸಲು ಡಾ. ಮಹದೇವಪ್ಪ ಮನವಿ

Published On :

ಎಚ್.ಡಿ. ಕೋಟೆ: ಜನತೆಯ ಸಹಭಾಗಿತ್ವದಲ್ಲಿ ಬಲಿಷ್ಠ ದೇಶವನ್ನು ಕಟ್ಟಬೇಕಾಗಿದೆ. ಇದಕ್ಕಾಗಿ ಜನತೆಯು ಸ್ವಾವಲಂಬಿಗಳಾಗಬೇಕೆಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕರೆ ನೀಡಿದರು.
ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಸೋಮವಾರ ನಡೆದ ಭಾರತ ನಿರ್ಮಾಣ ಪಾದಯಾತ್ರೆ ಅಂಗವಾಗಿ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿ, ಭಾರತದಲ್ಲಿ ಆಡಳಿತವನ್ನು ನಡೆಸುತ್ತಿರುವ ಯುಪಿಎ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು, ದೇಶದ ಜನತೆಗೆ ನೂರಾರು ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಉತ್ತಮವಾದ ಭಾರತವನ್ನು ನಿರ್ಮಾಣ ಮಾಡಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸರ್ಕಾರದ ಸಾಧನೆಯನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾವುದೇ ನೇರ ಪ್ರತಿಸ್ಪರ್ಧಿಗಳು ಇಲ್ಲ. ರಾಜ್ಯದಲ್ಲಿ ಬಿಜೆಪಿ ಹಾಗೂ ಮೋದಿ ಅಲೆ ಇರುವುದಿಲ್ಲ. ಹಲವು ಕಡೆ ನೇರ ಹಾಗೂ ಮತ್ತೆ ಕೆಲವು ಕಡೆ ತ್ರಿಕೋಣ ಸ್ಪರ್ಧೆ ಇರುತ್ತದೆ. ಚಾಮರಾಜನಗರ ಕ್ಷೇತ್ರದ ಸಂಸದ, ಲೋಕಸಭಾ ಅಭ್ಯರ್ಥಿ ಆರ್.ಧ್ರುವನಾರಾಯಣ್ ಜಯ ಗಳಿಸುವರು ಎಂದರು. ಪಾದಯಾತ್ರೆಯಲ್ಲಿ ಸಚಿವ ಎಚ್.ಎಸ್.ಮಹದೇವಪ್ರಸಾದ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ನಂದಿನಿ ಚಂದ್ರಶೇಖರ್, ಮಂಜುನಾಥ್, ಮಾಜಿ ಶಾಸಕ ಚಿಕ್ಕಣ್ಣ, ರೇವಣ್ಣಸಿದ್ದಯ್ಯ, ಲಾಲಯ್ಯ, ಕೃಷ್ಣೇಗೌಡ, ಕಾಳೇಗೌಡ, ಮೂರ್ತಾಚಾರ್, ಭೀಮನಹಳ್ಳಿ ಮಹದೇವ, ಶರ್ಮಿಳಾ ರಾಜು, ಜಯಮಂಗಳ, ಕಾಳೇಗೌಡ, ಶಿವಪ್ಪ ಕೋಟೆ, ಸುಂದರದಾಸ್, ಏಜಾಜ್‌ಪಾಷ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.