ಪಕ್ಷ ನಿಷ್ಠೆ ಸಡಿಲಿಸದ ಮತದಾರರು ಚಾಮರಾಜನಗರದಲ್ಲಿ ಇದುವರೆಗೂ ಮೇಲು'ಕೈ'
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ 1952ರಿಂದ ಇಲ್ಲಿಯವರೆಗೆ ಹತ್ತಾರು ಪಕ್ಷಗಳು ಸ್ಪರ್ಧೆ ಮಾಡಿವೆ. ಆದರೆ ಯಶಸ್ಸು ಸಿಕ್ಕಿರುವುದು ಕೇವಲ ಪ್ರಮುಖ ಪಕ್ಷಗಳಿಗೆ ಮಾತ್ರ.
ಮೈಸೂರಿನಲ್ಲಿ ಕಾಂಗ್ರೆಸ್, ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ (ಕೆಎಂಪಿಪಿ), ಬಿಜೆಪಿ ಮಾತ್ರ ಗೆದ್ದಿದ್ದರೆ, ಚಾಮರಾಜನಗರದಲ್ಲಿ ಕಾಂಗ್ರೆಸ್, ಜನತಾದಳ, ಜೆಡಿಯು, ಜೆಡಿಎಸ್ ಮಾತ್ರ ಗೆದ್ದಿವೆ. ಮೈಸೂರಿನಲ್ಲಿ ಜನತಾ ಪರಿವಾರ, ಚಾಮರಾಜನಗರದಲ್ಲಿ ಬಿಜೆಪಿ- ಬಿಎಸ್ಪಿ ಆಟ ನಡೆದಿಲ್ಲ. 1952ರಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಹಾಗೂ ಕೆಎಂಪಿಪಿ ಸ್ಪರ್ಧೆ ಮಾಡಿದ್ದವು. ದ್ವಿಸದಸ್ಯ ಕ್ಷೇತ್ರವಾದ್ದರಿಂದ ತಲಾ ಒಂದೊಂದು ಸ್ಥಾನಗಳಲ್ಲಿ ಜಯ ಗಳಿಸಿದವು. 1957ರಲ್ಲೂ ದ್ವಿಸದಸ್ಯ ಕ್ಷೇತ್ರವಾಗಿತ್ತು. ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾದವು. ಆಗ ಪ್ರಜಾಸೋಷಲಿಸ್ಟ್ ಪಕ್ಷದ ಅಭ್ಯರ್ಥಿಗಳು ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿದ್ದರು.
1962ರಲ್ಲಿ ಮೈಸೂರು ಏಕಸದಸ್ಯ ಕ್ಷೇತ್ರವಾಯಿತು. 1962, 1967, 1971, 1977, 1980, 1984, 1989, 1991, 1996ರಲ್ಲಿ ಕಾಂಗ್ರೆಸ್ ಜಯ ಗಳಿಸಿತು. 1998ರಲ್ಲಿ ಬಿಜೆಪಿ, 1999ರಲ್ಲಿ ಮತ್ತೆ ಕಾಂಗ್ರೆಸ್, 2004ರಲ್ಲಿ ಮತ್ತೆ ಬಿಜೆಪಿ, 2009ರಲ್ಲಿ ಮತ್ತೆ ಕಾಂಗ್ರೆಸ್ ಗೆದ್ದಿತು. ಚಾಮರಾಜನಗರದಲ್ಲಿ 1962, 1967, 1971, 1977, 1980, 1984, 1989, 1991ರಲ್ಲಿ ಕಾಂಗ್ರೆಸ್, 1996, 1998ರಲ್ಲಿ ಜನತಾದಳ, 1999ರಲ್ಲಿ ಜೆಡಿಯು, 2004ರಲ್ಲಿ ಜೆಡಿಎಸ್, 2009ರಲ್ಲಿ ಕಾಂಗ್ರೆಸ್ ಗೆದ್ದಿವೆ. 1962ರಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ಗೆ ವಿರುದ್ಧವಾಗಿ ಸ್ವತಂತ್ರ ಪಕ್ಷ, ಪಿಎಸ್ಪಿ, ಜನಸಂಘ ಹಾಗೂ ಪಕ್ಷೇತರರು ಕಣದಲ್ಲಿದ್ದರು. ಚಾಮರಾಜನಗರದಲ್ಲಿ ಪಿಎಸ್ಪಿ ಹಾಗೂ ಪಕ್ಷೇತರರು ಕಣದಲ್ಲಿದ್ದರು. 1967ರಲ್ಲಿ ಮೈಸೂರಿನಿಂದ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಎಸ್ಎಸ್ಪಿ, ಭಾರತೀಯ ಜನಸಂಘ ಹಾಗೂ ಪಕ್ಷೇತರರು ಕಣದಲ್ಲಿದ್ದರು. ಚಾಮರಾಜನಗರದಿಂದ ಸ್ಪತಂತ್ರ ಪಕ್ಷ ಹಾಗೂ ಪಕ್ಷೇತರರು ಕಣದಲ್ಲಿದ್ದರು.
1971ರಲ್ಲಿ ಎರಡೂ ಕಡೆಯೂ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಸಂಸ್ಥಾ ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಸ್ವರ್ಧಿಸಿದ್ದರು. 1977ರಲ್ಲಿ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಎರಡೂ ಕಡೆಯ ಭಾರತೀಯ ಲೋಕದಳ ಹಾಗೂ ಪಕ್ಷೇತರರು ಕಣದಲ್ಲಿದ್ದರು. 1980ರಲ್ಲಿ ಮೈಸೂರಿನಲ್ಲಿ ಇಂದಿರಾ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಸಂಯುಕ್ತ ಕಾಂಗ್ರೆಸ್, ಜನತಾಪಕ್ಷ, ಜನತಾಪಕ್ಷ(ಎಸ್) ಹಾಗೂ ಪಕ್ಷೇತರರು, ಚಾಮರಾಜನಗರದಲ್ಲಿ ಇಂದಿರಾ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಸಂಯುಕ್ತ ಕಾಂಗ್ರೆಸ್, ಜನತಾಪಕ್ಷ ಹಾಗೂ ಪಕ್ಷೇತರರು ಸ್ಪರ್ಧಿಸಿದ್ದರು. 1984ರಲ್ಲಿ ಎರಡೂ ಕಡೆಯೂ ಕಾಂಗ್ರೆಸ್ಗೆ ಜನತಾಪಕ್ಷ ಹಾಗೂ ಪಕ್ಷೇತರರು ಎದುರಾಳಿಗಳಾಗಿದ್ದರು. 1989ರಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ಗೆ ಎದುರಾಳಿಗಳಾಗಿ ಜನತಾಪಕ್ಷ, ಜನತಾದಳ, ಬಿಜೆಪಿ, ಪಕ್ಷೇತರರು ಕಣದಲ್ಲಿದ್ದರು. ಚಾಮರಾಜನಗರದಲ್ಲಿ ಬಿಜೆಪಿ ಹೊರತುಪಡಿಸಿ ಇತರರೆಲ್ಲ ಇದ್ದರು.
1996ರಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಜನತಾದಳ, ಬಿಜೆಪಿ, ಕೆಸಿಪಿ, ಜನತಾಪಕ್ಷ, ಪಕ್ಷೇತರರು ಸ್ಪರ್ಧಿಸಿದ್ದರು. ಚಾಮರಾಜನಗರದಲ್ಲಿ ಜನತಾದಳಕ್ಕೆ ಪ್ರತಿಯಾಗಿ ಕಾಂಗ್ರೆಸ್, ಬಿಜೆಪಿ, ಪಿಎಸ್ಎಸ್ಎಸ್, ಕೆಸಿವಿಪಿ, ಪಕ್ಷೇತರರು ಸ್ಪರ್ಧಿಸಿದ್ದರು. 1998ರಲ್ಲಿ ಮೈಸೂರಿನಲ್ಲಿ ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್, ಜನತಾದಳ, ಸಿಪಿಐಎಂಎಲ್, ಪಕ್ಷೇತರರು, ಚಾಮರಾಜನಗರದಲ್ಲಿ ಜನತಾದಳಕ್ಕೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್, ಲೋಕಶಕ್ತಿ, ಕರ್ನಾಟಕ ವಿಕಾಸ ಪಕ್ಷ, ಪಿಎಸ್ಎಸ್ಎಸ್, ಪಕ್ಷೇತರರು ಸ್ಪರ್ಧಿಸಿದ್ದರು. 2009ರಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ, ಜೆಡಿಎಸ್, ಬಿಎಸ್ಪಿ, ಬಿಪಿಜೆಪಿ, ಆರ್ಡಿಎಂಪಿ, ಆರ್ಕೆಎಸ್ಪಿ, ಪಿಪಿಓಐ, ಪಕ್ಷೇತರರು ಸ್ಪರ್ಧಿಸಿದ್ದರು. ಚಾಮರಾಜನಗರದಲ್ಲಿ ಕಾಂಗ್ರೆಸ್ಗೆ ಪ್ರತಿಯಾಗಿ ಬಿಜೆಪಿ, ಬಿಎಸ್ಪಿ, ಜೆಡಿಎಸ್, ಎಸ್ಪಿ, ಸಿಪಿಐ ಎಂಎಳ್, ಜೆಡಿಯು, ಎಸ್ಪಿ, ಪಕ್ಷೇತರರು ಕಣದಲ್ಲಿದ್ದರು.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

