ಯಾವ ಬ್ರಿಗೇಡ್ ಬೇಕೋ ನಿರ್ಧರಿಸಿ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ. 21
ನಮೋ ಬ್ರಿಗೇಡ್ ಬೇಕೋ ಅಥವಾ ಸೆಕ್ಯೂಲರ್ ಬ್ರಿಗೇಡ್ ಬೇಕೋ ಎಂಬುದನ್ನು ನೀವೆ (ಮತದಾರರು) ನಿರ್ಧರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಕೆಯ ಪೂರ್ವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಮಮಂದಿರ ಆಯಿತು, ರಥಯಾತ್ರೆ ಆಯಿತು. ಈಗ ನಮೋ ಬ್ರಿಗೇಡ್ ಆರಂಭಿಸಿದ್ದಾರೆ. ಅಂದರೆ ನರೇಂದ್ರ ಮೋದಿ ಬ್ರಿಗೇಡ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ಮತದಾರರು ತಮಗೆ ನಮೋ ಬ್ರಿಗೇಡ್ ಬೇಕೋ ಅಥವಾ ಕಾಂಗ್ರೆಸ್ನ ಸೆಕ್ಯುಲರ್ ಬ್ರಿಗೇಡ್ ಬೇಕೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ನ ನಾವೆಲ್ಲರೂ ಸೇರಿ ಸೆಕ್ಯೂಲರ್ ಬ್ರಿಗೇಡ್ ಕಟ್ಟಬೇಕು. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸೋಣ. ದೇಶದ 110 ಕೋಟಿ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಾವು ಕೇಂದ್ರದ ಯುಪಿಎ ಸರ್ಕಾರದ 10 ವರ್ಷಗಳ ಆಡಳಿತ ಮತ್ತು ರಾಜ್ಯ ಕಾಂಗ್ರೆಸ್ನ 10 ತಿಂಗಳ ಆಡಳಿತವನ್ನು ಜನರಿಗೆ ತಿಳಿಸಿಬೇಕು ಎಂದು ಹೇಳಿದರು.
ನಮಗೆ ರಾಜಕೀಯದಲ್ಲಿ ಯಾರೊಬ್ಬರೂ ವೈರಿಗಳಿಲ್ಲ. ಪ್ರತಿಸ್ಪರ್ಧಿಗಳು ಮಾತ್ರ. ಭಾರತದ ಈ ಚುನಾವಣೆಯನ್ನು ಇಡೀ ವಿಶ್ವ ನೋಡುತ್ತಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ ಚುನಾವಣೆಗೆ ಅಂತಹ ಮಹತ್ವ ಇದೆ.
ಇಂತಹ ಚುನಾವಣೆಗೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಕಾಂಗ್ರೆಸ್ನ ಎಚ್.ವಿಶ್ವನಾಥ್ ಅತ್ಯುತ್ತಮ ಸಂಸದೀಯ ಪಟು. ಆದ್ದರಿಂದ ಅವರ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.
ಸಂಸದ ಹಾಗೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಮಾತನಾಡಿ, ತಲೆ ತೆಗಿ, ತಲೆ ಚಚ್ಚು ಎಂಬ ಸಂಸ್ಕೃತಿ ನಮ್ಮದಲ್ಲ. ಅದು ಕೋಮುವಾದಿಗಳ ಸಂಸ್ಕೃತಿ ಎಂದರು.
ಮತ ಕೇಳಲು ಸಂಕೋಚ ಬೇಡ: ಕಾಂಗ್ರೆಸ್ ಮತ ಕೇಳಲು ಸಂಕೋಚ ಪಡಬೇಕಾದ ಅಗತ್ಯವಿಲ್ಲ. ಏಕೆಂದರೆ ಕೇಂದ್ರದಲ್ಲಿನ ಯುಪಿಎ ಸರ್ಕಾರ ಹತ್ತು ವರ್ಷ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ 10 ತಿಂಗಳು ಅತ್ಯುತ್ತಮ ಆಡಳಿತ ನೀಡಿದೆ. ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿ ಮಾಡಲಾಗಿದೆ. ಆದ್ದರಿಂದ ಮತ ಕೇಳಲು ಸಂಕೋಚ ಪಡುವ ಅಗತ್ಯವಿಲ್ಲ ಎಂದರು.
ಸುಂದರವಾದ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಸಂತೋಷವಾಗುತ್ತದೆ. ಒಂದುಕಡೆ ನಾಡದೇವತೆ ಚಾಮುಂಡೇಶ್ವರಿ, ಮತ್ತೊಂದೆಡೆ ಜೀವನದಿ ಕಾವರಿ ಮಾತೆ ಎಂದು ಬಣ್ಣಿಸಿದರು.
ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿದರು. ಮಾಜಿ ಸಚಿವ ಟಿ. ಜಾನ್, ಶಾಸಕರಾದ ತನ್ವೀರ್ಸೇಠ್, ವಾಸು, ಎಂ.ಕೆ. ಸೋಮಶೇಖರ್, ಎಚ್.ಪಿ. ಮಂಜುನಾಥ್, ಮಾಜಿ ಶಾಸಕ ಎಂ. ಸತ್ಯನಾರಾಯಣ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ, ಮುಖಂಡರಾದ ನಾಣಯ್ಯ, ಬಿ.ಟಿ. ಪ್ರದೀಪ್, ರೇವಣಸಿದ್ದಯ್ಯ, ಚೆಂಗಪ್ಪ, ಚಂದ್ರಕಲಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

