ತಲಕಾಡು ಎಸ್ಐ ಅಮಾನತಿಗೆ ಆಗ್ರಹ
ಟಿ. ನರಸೀಪುರ: ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ತಲಕಾಡು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್. ಆನಂದ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸುವಂತೆ ಟಿಪ್ಪರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ. ಪರಶಿವಮೂರ್ತಿ ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದಂತಹ ಜವಾಬ್ದಾರಿಯುವ ಪೊಲೀಸ್ ಅಧಿಕಾರಿ ಆನಂದ್ ಅವರು ಮಾತನಾಡಿದರೆ, ಬಾಯಲ್ಲಿ ಬರೀ ಕೆಟ್ಟ ಶಬ್ದಗಳೇ ಕೇಳಿ ಬರುತ್ತವೆ. ದೂರು ನೀಡಲು ಬರುವ ಜನರೊಂದಿಗೆ ತಾತ್ಸಾರತೆಯಿಂದ ನಡೆದುಕೊಳ್ಳುತ್ತಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಮಾ.13 ರಂದು ಪರಿಣಾಮಿಪುರ ಮರಳು ಯಾರ್ಡ್ನಲ್ಲಿ ಪರ್ಮಿಟ್ ಪಡೆದು ಮರಳು ಸಾಗಣೆ ಮಾಡಲು ಅಣಿಯಾಗಿದ್ದ ಲಾರಿಗಳಿಗೆ ಕಿಡಿಗೇಡಿಯೊಬ್ಬ ಲಾರಿಯೊಂದನ್ನು ಅಡ್ಡಲಾಗಿ ನಿಲ್ಲಿಸಿ, ಅಡಚಣೆ ಮಾಡಿರುವ ಬಗ್ಗೆ ಮಾರನೇ ದಿನ ತಾವೇ ಗಮನಕ್ಕೆ ತಂದಾಗ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಬದಲಿಗೆ ಅಸಭ್ಯವಾಗಿ ವರ್ತಿಸಿದರು. ಸ್ಥಳೀಯರನ್ನು ಎತ್ತಿಕಟ್ಟಿ ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟರು ಎಂದು ದೂರಿದರು.
ಮಾ.28 ರಿಂದ ಧರಣಿ: ತಲಕಾಡು ಪೊಲೀಸ್ ಠಾಣೆ ಎದುರು ಮಾ.28 ರಿಂದ ಪಿಎಸ್ಐ ಎಸ್.ಆನಂದ್ ಅಮಾನತಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರೊಡಗೂಡಿ ಪ್ರತಿಭಟನಾ ಧರಣಿಯನ್ನು ಪ್ರಾರಂಭಿಸಲಾಗುವುದು ಎಂದು ಪರಶಿವಮೂರ್ತಿ ತಿಳಿಸಿದರು.
ಪದಾಧಿಕಾರಿಗಳಾದ ಎಲ್.ರವಿ, ಆಸಿಫ್, ಮುರುಗ, ಶಂಭುದೇವನಪುರ ಸುರೇಶ್, ಗಿರಿ, ಹುಣಸೂರು ಜಿ. ಸತೀಶ್, ತಲಕಾಡು ನಾಗೇಂದ್ರ, ಕುಕ್ಕೂರು ಮಹೇಶ, ಕುಮಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

