ಅಮೆರಿಕ ಒಕ್ಕೂಟ ಮಾದರಿ ಭಾರತಕ್ಕೂ ಬೇಕಿತ್ತು: ದೇಜಗೌ
ಮೈಸೂರು: ಭಾರತವು ಅಮೆರಿಕದಂತೆ ಒಕ್ಕೂಟ ರಾಷ್ಟ್ರದ ವ್ಯವಸ್ಥೆ ಹೊಂದಬೇಕಿತ್ತು ಎಂದು ಹಿರಿಯ ಸಾಹಿತಿ ಡಾ.ದೇಜಗೌ ಅಭಿಪ್ರಾಯಪಟ್ಟರು. ನಗರದ ಜಗನ್ಮೋಹನ ಅರಮನೆಯಲ್ಲಿ ಬೆಂಗಳೂರಿನ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನವು ಆಯೋಜಿಸಿದ್ದ ಕುವೆಂಪು ಸಾಂಸ್ಕೃತಿಕ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನದ ಬಗ್ಗೆ ನನಗೆ ಹೆಚ್ಚು ಒಲವು ಇರಲಿಲ್ಲ. ಈಗ ಒಬ್ಬೊಬ್ಬರಾಗಿ ನಮ್ಮ ಸಂವಿಧಾನದ ವ್ಯವಸ್ಥೆಯ ಬಗ್ಗೆ ಟೀಕಿಸುತ್ತಿದ್ದಾರೆ. ನನಗೂ ಒಮ್ಮೊಮ್ಮೆ ಹಾಗೆಯೇ ಅನ್ನಿಸುತ್ತದೆ. ಭಾರತದಲ್ಲಿಯೂ ಅಮೆರಿಕ ಮಾದರಿಯ ಒಕ್ಕೂಟ ವ್ಯವಸ್ಥೆ ಜಾರಿಗೊಳಿಸಿದ್ದರೆ, ದೇಶಕ್ಕೆ ಒಳ್ಳೆಯದಾಗುತ್ತಿತ್ತು ಎಂದರು. ಭಾರತದಲ್ಲಿ ಭಾಷಾವಾರು ಪ್ರಾಂತ್ಯ ರಚಿಸಿದ ಮೇಲೆ ಆಯಾ ಸ್ಥಳೀಯ ಭಾಷೆಗೆ ಪ್ರಾಧಾನ್ಯತೆ ನೀಡಬೇಕಿತ್ತು. ಆ ಕೆಲಸ ಆಗಿಲ್ಲ. ಕರ್ನಾಟಕ ಏಕೀಕರಣಕ್ಕೆ ಸಾಕಷ್ಟು ಮಂದಿ ಹೋರಾಟ ಮಾಡಿದ್ದಾರೆ. ಆ ಪೈಕಿ ಕುವೆಂಪು ಕೂಡ ಒಬ್ಬರು. ಅವರೊಬ್ಬ ಜಗತ್ತಿನ ಅತಿದೊಡ್ಡ ಮೇಧಾಶಕ್ತಿ ಎಂದು ಅವರು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ರಾಂತ ಕುಲಪತಿ ಪ್ರೊ. ಲಕ್ಕಪ್ಪಗೌಡ, ನಿವೃತ್ತ ನ್ಯಾ. ಚಂದ್ರಶೇಖರಯ್ಯ, ಲೇಖಕರಾದ ಡಾ.ಮಳಲಿ ವಸಂತಕುಮಾರ್, ಪ್ರೊ. ವಿಜಯಕುಮಾರ್ ಭಟ್, ಪ್ರೊ. ಬೈರವಮೂರ್ತಿ, ನಾಗತಿಹಳ್ಳಿ ರಮೇಶ್, ರಾಜಶೇಖರ ಕದಂಬ, ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಪುತ್ರಿ ಪ್ರತಿಭಾದೇವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

