ಪಿಡಿಒ ವರ್ಗಾವಣೆ ಕೈಬಿಡಲು ಮನವಿ
ಭೇರ್ಯ: ಇಲ್ಲಿನ ಗ್ರಾಪಂನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ರಾಜ್‌ಕುಮಾರ್ ಅವರ ವರ್ಗಾವಣೆ ರದ್ದುಪಡಿಸಿ, ಇಲ್ಲಿಯೇ ಮುಂದುವರಿಸುವಂತೆ ಗ್ರಾಪಂ ಸದಸ್ಯ ಸೋಮು ಮನವಿ ಮಾಡಿದ್ದಾರೆ. ಏಳು ಗ್ರಾಮಗಳಿಗೆ ಒಳಪಟ್ಟಿರುವ ಭೇರ್ಯ ಗ್ರಾಪಂನಲ್ಲಿ ಯಾವ ಸಮಸ್ಯೆ ಇಲ್ಲದಂತೆ ಜನರಿಗೆ ಸ್ಪಂದಿಸುತ್ತಿರುವ ಪಿಡಿಒ ರಾಜ್‌ಕುಮಾರ್ ವಸತಿ ಯೋಜನೆಯಡಿ ಮಂಜೂರು ಆಗಿರುವ 400ಕ್ಕೂ ಹೆಚ್ಚು ಮನೆಗಳನ್ನು ಜಿಪಿಎಸ್ ಮಾಡುತ್ತಾ ಜೊತೆಗೆ ಗ್ರಾಮಗಳಲ್ಲಿ ಹೆಚ್ಚು ಶೌಚಾಲಯ ನಿರ್ಮಾಣಗೊಳ್ಳಲು ಕಾರಣರಾಗಿದ್ದರು. ಇನ್ನೂ ಹಲವು ಶೌಚಾಲಯಗಳು ಪ್ರಗತಿಯಲ್ಲಿವೆ. ಆದ್ದರಿಂದ ಇವರನ್ನೇ ಮುಂದುವರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಇವರ ಪತ್ರಕ್ಕೆ ಗ್ರಾಪಂ ಸದಸ್ಯ ಬಿ.ಎಂ. ಕೃಷ್ಣೇಗೌಡ, ರಾಜಮ್ಮ ಚಂದ್ರೇಗೌಡ, ಸಾಭಿರಖಾನ್ ನೆಮತ್, ಸೋಮು, ಗ್ರಾಮಸ್ಥರಾದ ಬಿ.ಟಿ. ಮೋಹನ್ ಕುಮಾರ್, ಬಿ.ಎಸ್. ನಟರಾಜ್, ಬಿ.ಪಿ. ಯೋಗೇಶ್, ಶಿವಣ್ಣ ನಟೇಶ್ ಸಹಿ ಮಾಡಿದ್ದಾರೆ.
ಮಾಕೋಡಿನಲ್ಲಿ ನಾಳೆ ಜಾತ್ರೆ
ಪಿರಿಯಾಪಟ್ಟಣ: ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಮಾಕೋಡು ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ಹಾಗೂ ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಮಾ.25 ರಂದು ನಡೆಯಲಿದೆ. ದೇವಾಲಯ ಚೋಳರ ಕಾಲದ್ದಾಗಿದ್ದು ಅಂದಿನಿಂದಲೂ ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು ಸೇರಿ ರಥೋತ್ಸವ ಆಚರಿಸುತ್ತಿದ್ದಾರೆ. ರಥೋತ್ಸವದ ಮತ್ತೊಂದು ವಿಶೇಷವೆಂದರೆ ಬಸವೇಶ್ವರ ಹಾಗೂ ಚನ್ನಕೇಶವಸ್ವಾಮಿಯ 2 ಉತ್ಸವ ಮೂರ್ತಿಗಳನ್ನೂ ರಥದಲ್ಲಿರಿಸಿ ರಥ ಎಳೆಯಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

