22 ಅಭ್ಯರ್ಥಿಗಳಿಂದ 33 ನಾಮಪತ್ರ ಸಲ್ಲಿಕೆ
ಮೈಸೂರು: ಲೋಕಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬುಧವಾರ 9 ಅಭ್ಯರ್ಥಿಗಳಿಂದ 11 ನಾಮಪತ್ರ ಸಲ್ಲಿಕೆಯಾಗಿದ್ದು, ಇದುವರೆಗೆ 22 ಮಂದಿ ಅಭ್ಯರ್ಥಿಗಳಿಂದ 33 ನಾಮಪತ್ರ ಸಲ್ಲಿಕೆ ಆಗಿದೆ. ಅಶೋಕಪುರಂನ ಜಿ. ಲಿಂಗಯ್ಯ ಪಕ್ಷೇತರರಾಗಿ 1 ನಾಮಪತ್ರ, ವಿದ್ಯಾರಣ್ಯಪುರಂನ ಸಿ. ಮೋಹನ್ಕುಮಾರ್ ಬಿಎಸ್ಪಿಯಿಂದ 2 ನಾಮಪತ್ರ, ಸರಸ್ವತಿಪುರಂನ ಗುರುಮಲ್ಲೇಶ್ ಪಕ್ಷೇತರರಾಗಿ 1 ನಾಮಪತ್ರ, ಮೈಸೂರು ತಿಲಕ್ನಗರದ ಅಖೀಲ್ ಅಹ್ಮದ್ ಪಕ್ಷೇತರರಾಗಿ 1 ನಾಮಪತ್ರ, ಬೋಗಾದಿಯ ಎಂ.ವಿ. ಪದ್ಮಮ್ಮ ಆಮ್ ಆದ್ಮಿ ಪಕ್ಷದಿಂದ 1 ನಾಮಪತ್ರ, ನಂಜನಗೂಡು ತಾಲೂಕಿನ ಡಿ. ಈಶ್ವರ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದಿಂದ 1 ನಾಮಪತ್ರ, ಸೋಮವಾರಪೇಟೆಯ ಡಿ.ಎಸ್. ನಿರ್ವಾಣಪ್ಪ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ರೆಡ್ಸ್ಟಾರ್ ಪಕ್ಷದಿಂದ 1 ನಾಮಪತ್ರ, ಬೆಂಗಳೂರಿನ ಬನಶಂಕರಿಯ ಚಂದ್ರಶೇಖರಯ್ಯ ಜೆಡಿಎಸ್ನಿಂದ 2 ನಾಮಪತ್ರ ಹಾಗೂ ಮೈಸೂರು ಗಾಯತ್ರಿಪುರಂನ ಆರ್. ವಿಶ್ವನಾಥ್ ಪಕ್ಷೇತರರಾಗಿ 1 ನಾಮಪತ್ರ ಸಲ್ಲಿಸಿದ್ದಾರೆ.
ಪದ್ಮಮ್ಮ ನಾಮಪತ್ರ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ವಿ. ಪದ್ಮಮ್ಮ ಬುಧವಾರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ.ಶಿಖಾ ಅವರಿಗೆ ನಾಮಪತ್ರ ಸಲ್ಲಿಸಿದರು. ನಗರದ ಕೋಟೆ ಆಂಜನೇಯಸ್ವಾಮಿ ಮತ್ತು ವಿಘ್ನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೆಳಗ್ಗೆ 10.30ಕ್ಕೆ ಪೂಜೆ ಸಲ್ಲಿಸಿದ ಪದ್ಮಮ್ಮ ಅವರು 11.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ರಸ್ತೆ ಉದ್ದಕ್ಕೂ ಆಮ್ ಆದ್ಮಿಯ ಚಿಹ್ನೆಯಾದ ಪೊರಕೆ ಹಿಡಿದು ಮಧ್ಯೆ ಮಧ್ಯೆ ಕಸಗುಡಿಸುತ್ತ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕೆಲವು ದಾಖಲಾತಿಗಾಗಿ ಒಂದು ಗಂಟೆಗಳ ಕಾಲ ಕಾದರು. ನಂತರ 1.45ರ ಸುಮಾರಿಗೆ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಭ್ರಷ್ಟ ಮುಕ್ತ ರಾಷ್ಟ್ರ ನಿರ್ಮಿಸುವ ಉದ್ದೇಶದಿಂದ, ಸ್ವರಾಜ್ಯ- ಅಧಿಕಾರವನ್ನು ಜನಸಾಮಾನ್ಯರ ಕೈಗೆ ಕೊಡುವುದು, ಚುನಾವಣೆ, ನ್ಯಾಯಾಂಗ, ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ಜಾರಿಗೆ ತರುವುದು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಕಾಯ್ದುಕೊಳ್ಳುವುದು ಪಕ್ಷದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

