ನಂಜನಗೂಡಿನಲ್ಲಿ ರೋಮಾಂಚನ ಕುಸ್ತಿ
ನಂಜನಗೂಡು: ದುರ್ಗಾದೇವಿ ಹಬ್ಬದ ಅಂಗವಾಗಿ ಪಟ್ಟಣದ ಒಕ್ಕಲಗೇರಿ ಬೀದಿಯ ಯುವಕರ ಬಳಗದ ವತಿಯಿಂದ ಬುಧವಾರ 25 ಜೊತೆ ಕಾಟ ಕುಸ್ತಿ ನಡೆಯಿತು.
ಆರ್.ಪಿ. ರಸ್ತೆಯಲ್ಲಿರುವ ಅರಮನೆ ಮೈದಾನದಲ್ಲಿ ನಡೆದ ಸೋಲು-ಗೆಲವು ನಡೆಯುವವರೆಗೂ ನಡೆದ ಪಂದ್ಯಾವಳಿಯಲ್ಲಿ ಹರಿಹರದ ರಾಜು ಅವರು ಬೆಳಗಾಂನ ಸಿದ್ದಣ್ಣನವರ್ ಅವರನ್ನು 5 ನಿಮಿಷದಲ್ಲೇ ಸೋಲಿಸಿ ದುರ್ಗಾದೇವಿ ಪ್ರಶಸ್ತಿಗೆ ಭಾಜನರಾದರು.
ಪಂದ್ಯಾವಳಿಯಲ್ಲಿ ಹಿರಿಯ ಪೈಲ್ವಾನ್ಗಳು ಅಖಾಡಕ್ಕೆ ಪೂಜೆ ಸಲ್ಲಿಸುವ ಮೂಲಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಗೋಳೂರಿನ ನಾಗೇಂದ್ರ, ಗುರು ಪಂದ್ಯದಲ್ಲಿ ವಿಜೇತರಾದರು. ಹಲವು ಕುಸ್ತಿಗಳು ಸಮನಾದವು.
ಹರಿಹರದ ರಾಜು ಸಿದ್ದಣ್ಣನವರ್ ನಡುವೆ ನಡೆದ ರೋಚಕ ಕುಸ್ತಿ ಕಾಳಗದಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ ಹೆಸರಾಂತ ಪಟು ಬೆಳಗಾಂ ಸಿದ್ದಣ್ಣನವರನ್ನು ಮಣಿಸುವ ಮೂಲಕ ಕುಸ್ತಿ ಅಭಿಮಾನಿಗಳ ಮನ ಸೆಳೆದರು. ಈ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಸಾವಿರಾರು ಕುಸ್ತಿ ಪ್ರೇಮಿಗಳು ಮಳೆಯನ್ನೂ ಲೆಕ್ಕಿಸದೇ ವೀಕ್ಷಿಸಿದರು. ಕುಸ್ತಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ಎಲ್ಲ ಪೈಲ್ವಾನ್ನರಿಗೂ ಒಕ್ಕಲಗೇರಿ ಯುವಕರಬಳಗದವರು ನೆನಪಿನ ಕಾಣಿಕೆ ನೀಡಿ ಗೌರವಿಸಿತು.
ಹಿರಿಯ ಕುಸ್ತಿಪಟುಗಳಾದ ಮಹದೇವು ಶಿವಲಿಂಗು ಚಿರಾಗ್, ಹೊಸಹಳ್ಳಿ ಶಿವು, ಬನ್ನೂರು ರವಿ, ಧರ್ಮದರ್ಶಿ ಎನ್.ಎಸ್. ಶಿವನಾಗಪ್ಪ, ಪೈಲ್ವಾನ್ ಸಿದ್ದರಾಜು, ಜಿಲ್ಲಾ ಕರವೇ ಅಧ್ಯಕ್ಷ ಪ್ರವೀಣ್ಕುಮಾರ್, ತಾಲೂಕು ಅಧ್ಯಕ್ಷ ಪರಮೇಶ್, ಪರಂಜ್ಯೋತಿ, ಭಾಸ್ಕರ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

