ಮೈಸೂರು

ಬಸ್ ಡಿಕ್ಕಿ, ವಿದ್ಯಾರ್ಥಿ ಸಾವು: ಗ್ರಾಮಸ್ಥರ ಧರಣಿ

Published On :

ಹುಣಸೂರು: ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಐಟಿಐ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ತಾಲೂಕಿನ ಕಟ್ಟೆಮಳಲವಾಡಿ ಬಳಿ ಬುಧವಾರ ನಡೆದಿದೆ.
ಕಟ್ಟೆಮಳಲವಾಡಿಯ ನಂದಿ ವೃತ್ತದ ಬಳಿ ಬುಧವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ಹುಣಸೂರು ತಾಲೂಕಿನ ಅಗ್ರಹಾರ ಗ್ರಾಮದ ಮಹದೇವಯ್ಯ ಅವರ ಪುತ್ರ ಪ್ರಕಾಶ್ (23) ಮೃತಪಟ್ಟ ಐಟಿಐ ವಿದ್ಯಾರ್ಥಿ. ಈತ ಮೈಸೂರಿನ ಸೂರ್ಯೋದಯ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಂಗಳವಾರ ಗ್ರಾಮದೇವತೆ ಬನ್ನಂತಮ್ಮ ದೇವಿಯ ಹಬ್ಬದ ಅಂಗವಾಗಿ ಸಾಮಗ್ರಿ ತರಲು ತನ್ನ ಪಲ್ಸರ್ ಬೈಕ್ನಲ್ಲಿ ಹುಣಸೂರಿಗೆ ಬರುತ್ತಿದ್ದ ವೇಳೆ ಕಟ್ಟೆಮಳಲವಾಡಿ ತಿರುವಿನಲ್ಲಿ ಅತಿವೇಗದಿಂದ ಬಂದ ಸಾರಿಗೆ ಬಸ್ ಮೃತ ಪ್ರಕಾಶನ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಘಟನೆ ನಡೆದು 2 ಗಂಟೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ. ಆಗ ಗ್ರಾಮಸ್ಥರು ಪ್ರಕಾಶ್ನ ಕುಟುಂಬದವರು ರಸ್ತೆ ತಡೆ ನಡೆಸಿದರು. ನಂತರ ಅಧಿಕಾರಿಗಳ ಮನವೊಲಿಕೆಯಿಂದ ಪ್ರತಿಭಟನಾಕಾರರು ಮಧ್ಯಾಹ್ನದ ನಂತರ ಪ್ರತಿಭಟನೆ ಕೈಬಿಟ್ಟು ಶವ ಸಂಸ್ಕಾರಕ್ಕೆ ಮುಂದಾದರು. ಸ್ಥಳಕ್ಕೆ ತಹಸೀಲ್ದಾರ್ ವೆಂಕಟಚಲಾಪ್ಪ, ಡಿವೈಎಸ್ಪಿ ಧನಂಜಯ, ಗ್ರಾಮಾಂತರ ಠಾಣೆ ಎಸ್ಐ ರಾಘವೇಂದ್ರಗೌಡ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.