ಮೈಸೂರು

ಹುಲಿ ಚರ್ಮ, ಮೂಳೆ ಮಾರಾಟಗಾರನ ಸೆರೆ

Published On :

ಪಿರಿಯಾಪಟ್ಟಣ: ಹುಲಿ ಚರ್ಮ, ಕಡವೆ ಚರ್ಮ ಹಾಗೂ ಹುಲಿ ತಲೆಬುರುಡೆ ಸೇರಿದಂತೆ ಇತರೆ ಮೂಳೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಪೊಲೀಸರು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮುತ್ತೂರು ಗ್ರಾಮದ ನಿವಾಸಿ ಸುರೇಶ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಸುರೇಶನ ಬಳಿ ಹುಲಿ ಚರ್ಮ, ಕಡವೆ ಚರ್ಮ ಹಾಗೂ ಹುಲಿಯ ತಲೆ ಬುರುಡೆ ಸೇರಿದಂತೆ ಹುಲಿಯ ಇತರೆ ಮೂಳೆಗಳಿರುವ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಸಿಐಡಿ ಅರಣ್ಯ ಘಟಕದ ಪೊಲೀಸರು ಮಾಲನ್ನು ಖರೀದಿಸುವ ಸೋಗಿನಲ್ಲಿ ಬಂದು ಮೂತ್ತೂರು ಗ್ರಾಮದ ಉರ್ದು ಶಾಲೆಯ ಬಳಿ ಸುರೇಶನನ್ನು ಭೇಟಿಯಾಗಿ ಆತನಿಂದ ಮಾರಾಟಕ್ಕೆ ತಂದಿದ್ದ ಹುಲಿ ಮತ್ತು ಕಡವೆ ಚರ್ಮ ಹಾಗೂ ಹುಲಿ ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುರೇಶ ತನಗೆ ಲಿಂಗಾಪುರ ಗ್ರಾಮದ ರಾಮಚಂದ್ರು ಹಾಗೂ ಕಾಟಿ ಎಂಬ ವ್ಯಕ್ತಿಗಳು ಈ ಮಾಲನ್ನು ಮಾರಾಟಕ್ಕೆ ನೀಡಿದ್ದಾರೆ ಎಂದು ಸಿಐಡಿ ಪೊಲೀಸರಿಗೆ ತಿಳಿಸಿದ್ದಾನೆ. ಸಿಐಡಿ ಅರಣ್ಯ ಘಟಕದ ಬೆಂಗಳೂರು ಕೇಂದ್ರದ ಐಜಿ ಅರುಣ್ ಚಕ್ರವರ್ತಿ, ಡಿವೈಎಸ್‌ಪಿ ಬಿ.ಎನ್. ಶಾಮಣ್ಣ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಶೆಟ್ಟಿ, ಎಸ್‌ಐ ಲಕ್ಷ್ಮಿನರಸಿಂಹಯ್ಯ, ಸಿಬ್ಬಂದಿ ಎಂ.ಎಸ್. ರಾಮಮೂರ್ತಿ, ಮುಕುಂದ, ರಾಜಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.