ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ
ಮೈಸೂರು: ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಹೋಬಳಿಯ ಬಸವಟ್ಟಿಗೆ ಗ್ರಾಮದ ರಾಜಪ್ಪ ಎಂಬವರ ಮಗ ರಘು ಎಂಬವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ಆಗ್ರಹಿಸಿದರು.
ಇದೇ ಗ್ರಾಮದ ಜಯಪ್ಪ ಎಂಬವರು ತಮ್ಮ ಕಬ್ಬಿನ ಗದ್ದೆಗೆ ಅಕ್ರಮವಾಗಿ ಬಿಟ್ಟಿದ್ದ ವಿದ್ಯುತ್ ತಂತಿಗೆ ಸಿಕ್ಕಿಕೊಂಡು ರಾಘವೇಂದ್ರ ಅರೆ ಪ್ರಜ್ಞಾವಸ್ಥೆಯಲ್ಲಿ ಒದ್ದಾಡುತ್ತಿದಾಗ, ಜಮೀನಿನಲ್ಲಿದ್ದ ಜಯಪ್ಪ ಅವರ ಮಗ ಮಹೇಶ್ ಮನೆಯಲ್ಲಿದ್ದ ತಂದೆಗೆ ವಿಷಯ ತಿಳಿಸಿದ್ದು, ಆತ ಬದುಕಿದ್ದರೆ ತೊಂದರೆಯಾಗಲಿದೆ ಎಂದು ಜಯಪ್ಪ ಹಾಗೂ ಅವರ ಮಕ್ಕಳಾದ ಮಹೇಶ್, ಮೂರ್ತಿ ಹಾಗೂ ರವಿ ಎಂಬವರು ಸೇರಿ ರಘುವಿನ ಕೈ ಕಾಲು ಕಟ್ಟುಹಾಕಿ ಜಮೀನಿನಲ್ಲಿರುವ ಹುಣಸೇ ಮರಕ್ಕೆ ನೇತು ಹಾಕಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಾರನೇ ದಿನ ಮೃತನ ಕುಟುಂಬದವರಿಗೆ ಈ ವಿಷಯ ತಿಳಿದು ಬದನವಾಳು ಠಾಣೆಯಲ್ಲಿ ಲಿಖಿತವಾಗಿ ದೂರೂ ನೀಡಿ ನಾಲ್ವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ, ಈವರೆಗೆ ಯಾವ ಕ್ರಮಕ್ಕೂ ಮುಂದಾಗಿಲ್ಲ. ಅಲ್ಲದೆ ರಾಜಪ್ಪ ಕುಟುಂಬಕ್ಕೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಅಧಿಕಾರಿಗಳು ಕೂಡಲೇ ಆರೋಪಿಗಳನ್ನು ಬಂಧಿಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ವಿವಿಧ ಪ್ರಗತಿ ಪರ ಸಂಘಟನೆಗಳೊಂದಿಗೆ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಿತಿಯ ಖಚಾಂಚಿ ನಾರಾಯಣ ಮೆಲ್ಲಹಳ್ಳಿ, ಮೃತನ ತಂದೆ ರಾಜಪ್ಪ, ತಾಯಿ ರಾಜಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

