ಮೈಸೂರು

ದೇವರ ಶಕ್ತಿ ಅನನ್ಯವಾದದು: ಶರ್ಮಾ

Published On :

ಕ.ಪ್ರ.ವಾರ್ತೆ    ಮೈಸೂರು    ಮೇ 11
ದೇವರನ್ನು ತೋರಿಸಲು ಸಾಧ್ಯವಿಲ್ಲ. ಆದರೆ, ದೇವರ ಶಕ್ತಿ ಅನನ್ಯವಾದದು ಎಂದು ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಹೇಳಿದರು.
ಮಾಯಾಕಾರ ಚಾರಿಟಬಲ್ ಟ್ರಸ್ಟ್, ಮಾಯಾಕಾರ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರವು ಭಾನುವಾರ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ 11ನೇ ಜ್ಯೋತಿಷ್ಯಾಸ್ತ್ರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸೂರ್ಯ ನಮಸ್ಕಾರ ಶ್ಲೋಕ ಪಠಿಸುವುದರಿಂದ ಸತ್ಯದ ಅರಿವಾಗುತ್ತದೆ. ಜ್ಯೋತಿಷ್ಯ ತಿಳಿಯದೆ ಕಲಿಯಲು ಬಂದವರಲ್ಲಿ ಹೆಚ್ಚಿನ ಆಸಕ್ತಿ ಇರುವುದು ಗೊತ್ತಾಗಿದೆ. ಜ್ಯೋತಿಷ್ಯ ತನ್ನದೇ ಆದ ಮಹತ್ವ ಹೊಂದಿದೆ. ನಿಜವಾದ ಜ್ಯೋತಿಷಿ ಸುಳ್ಳು ಹೇಳುವುದಿಲ್ಲ. ಸುಳ್ಳು ಹೇಳುವವರು ಹೆಚ್ಚಾಗಿ ನಿಜವಾದ ಜ್ಯೋತಿಷಿಯ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ಹೀಗಾಗಿ ಜ್ಯೋತಿಷಿಗಳು ಗಣಿತ, ಸಂಸ್ಕೃತ, ವೇದಾಭ್ಯಾಸ ಮಾಡಬೇಕು ಎಂದರು.
ಮುಕ್ತ ವಿವಿ ಪ್ರವಾಸೋದ್ಯಮ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಸೆಲ್ವಪಿಳ್ಳೈ ಅಯ್ಯಂಗಾರ್ ಅವರು ಷೋಡಶ ಸಂಸ್ಕಾರಗಳ ಆಚರಣೆ ಮತ್ತು ವೈಜ್ಞಾನಿಕತೆ ಕುರಿತು ಉಪನ್ಯಾಸ ನೀಡಿದರು. ಮಾಯಾಕಾರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ಎಂ. ಮಧು ದೀಕ್ಷಿತ್ ಮೂಗೂರು ಅವರು ಮೋದಿ ಅವರ ಜಾತಕ ವಿಮರ್ಶೆ ಮಾಡಿದರು. ಸುದ್ದಿ ವಾಹಿನಿ ನಿರೂಪಕಿ ಶಿಲ್ಪಾ ಕಿರಣ್, ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.