ಮೈಸೂರು

ಮುಖ್ಯ ವಾಹಿನಿಗೆ ಗಿರಿಜನರು ಬರಲಿ

Published On :

ಕ.ಪ್ರ.ವಾರ್ತೆ    ಎಚ್.ಡಿ.ಕೋಟೆ    ಮೇ 13
ತಾಲೂಕಿನ ಅಂತರಸಂತೆ ಗ್ರಾಮದಲ್ಲಿ ಮೈಸೂರಿನ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ವತಿಯಿಂದ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳು ಹಾಗೂ ಬುಡಕಟ್ಟು ಜನಾಂಗದವರನ್ನು ಮದ್ಯಪಾನ ಮುಕ್ತರನ್ನಾಗಿ ಮಾಡುವ ಕುರಿತ ಅರಿವು ಮೂಡಿಸುವ ಶಿಬಿರ ಏರ್ಪಡಿಸಲಾಗಿತ್ತು.
ಶಾಸಕ ಎಸ್.ಚಿಕ್ಕಮಾದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿರಿಜನರಲ್ಲಿ ನಾಗರಿಕತೆ ಮೂಡಿಸಬೇಕಿದೆ. ಗಿರಿಜನರನ್ನು ಮುಖ್ಯವಾಹಿನಿಗೆ ತರುವುದು ಸರ್ಕಾರದ ಜವಾಬ್ದಾರಿ ಆಗಿದೆ. ಗಿರಿಜನರನ್ನು ಕಾಡಿನಲ್ಲಿ ಉಳಿಸಲು ಸಾಧ್ಯವಿಲ್ಲ. ಸರ್ಕಾರವು ನೀಡುವ ಸವಲತ್ತು ದುರುಪಯೋಗ ಆಗದ ರೀತಿಯಲ್ಲಿ ಅರಿವು ಮೂಡಿಸಬೇಕು. ಗಿರಿಜನರು ಕಾಡಿನಿಂದ ಹೊರಗೆ ಬಂದು ರಾಷ್ಟ್ರದ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬರೂ ಸವಲತ್ತಿನ ಬಗ್ಗೆ ಹೋರಾಟ ನಡೆಸೋಣ, ತಾಲೂಕಿನ ಬಿ.ಮಟಕೆರೆ ಗ್ರಾಮದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳ ಕೊರತೆ ಇದ್ದು ಅದನ್ನು ಸಂಪೂರ್ಣವಾಗಿ ಮುಚ್ಚಲು ತೀರ್ಮಾನಿಸಲಾಗಿದೆ ಎಂದರು.
ಸಂಸ್ಥೆ ನಿರ್ದೇಶಕ ಟಿ.ಟಿ. ಬಸವನಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ತಾಪಂ ಪ್ರಭಾರ ಅಧ್ಯಕ್ಷ ರವಿಕುಮಾರ್, ಅಂತರಸಂತೆ ಗ್ರಾಪಂ ಉಪಾಧ್ಯಕ್ಷೆ ಲಕ್ಷಮ್ಮ, ಡಾ.ಬಿ.ಎನ್. ರವೀಶ್, ಡಾ.ಎಂ.ಎ. ಬಾಲಸುಬ್ರಮಣ್ಯಂ, ನಾಗೇಂದ್ರ, ಗಿರಿಜನ ಮುಖಂಡರಾದ ಕಾವೇರ, ಕೃಷ್ಣಯ್ಯ, ಸಂಶೋಧನಾಧಿಕಾರಿ ಎನ್. ಪ್ರತಿಭಾ, ಕ್ಯಾತನಹಳ್ಳಿ ನಾಗರಾಜು, ಶಿವಯ್ಯ, ಚಿಕ್ಕಬೊಮ್ಮ, ತಾಲೂಕು ಸಮಾಜಕಲ್ಯಾಣಾಧಿಕಾರಿ ಬಿಂದ್ಯಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.