ಅಲಹಾಬಾದ್ ಬ್ಯಾಂಕ್ ವಿರುದ್ಧ ಧರಣಿ
ಮೈಸೂರು: ಅಲಹಾಬಾದ್ ಬ್ಯಾಂಕ್ ಕುವೆಂಪುನಗರ ಶಾಖೆಯಲ್ಲಿ ಖಾತೆ ಹೊಂದಿ ಸಾಲ ಪಡೆದಿರುವ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ಖಾತೆಯಿಂದ ಹಣ ಕಡಿತಗೊಳಿಸಿರುವುದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆಯವರು ಗುರುವಾರ ಪ್ರತಿಭಟಿಸಿದರು.
ಕುವೆಂಪುನಗರ ಶಾಖೆ ಎದುರು ಪ್ರತಿಭಟಿಸಿದ ಅವರು, ಹಿಂದಿನ ವ್ಯವಸ್ಥಾಪಕರಿದ್ದಾಗ ಯಾವುದೇ ಸಮಸ್ಯೆಗಳು ಇರಲಿಲ್ಲ. ಹೊಸ ವ್ಯವಸ್ಥಾಪಕರು ಬಂದ ಮೇಲೆ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಸಂಬಂಧಪಟ್ಟವರು ಮಧ್ಯಪ್ರವೇಶಿಸಿ ಈಗಿನ ವ್ಯವಸ್ಥಾಪಕರನ್ನು ವರ್ಗಾಯಿಸಬೇಕು. ಗ್ರಾಹಕರ ಸಮಸ್ಯೆ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಭಾನುಮೋಹನ್, ಮಂಜು ನಾಥ್ ರಾವ್ ಬೋಪಡೆ, ಅರವಿಂದ ಶರ್ಮ, ಗೋಪಿ, ಎಚ್.ಎಸ್.ಆರ್. ಪ್ರಕಾಶ್, ಸುರೇಶಬಾಬು, ಗುರು, ಮಹದೇವಸ್ವಾಮಿ, ಚಂದ್ರ, ಬೋಗಾದಿ ಸಿದ್ದೇಗೌಡ, ಕುಮಾರ, ವೆಂಕಟೇಶ್, ಗಿರೀಶ, ಚನ್ನಕೇಶವ, ಸಿದ್ದೇಗೌಡ, ಯೋಗೇಶ್, ಭರತ ಇದ್ದರು.
ರೇಲ್ವೆ ಕಾರ್ಯಾಗಾರ ಎದುರು
ದಸಂಸ ಸದಸ್ಯರ ಪ್ರತಿಭಟನೆ
ಮೈಸೂರು: ಎಸ್‌ಡಬ್ಲ್ಯೂಆರ್‌ಎಂಯು ಯೂನಿಯನ್ ಮೈಸೂರು ವಿಭಾಗೀಯ ಅಧ್ಯಕ್ಷರಾದ ಎಂ.ರಾಜಕುಮಾರ್ ಅವರನ್ನು ಯೂನಿಯನ್ ಚಟುವಟಿಕೆಯಿಂದ ದೂರವಿಟ್ಟು ಸಭೆ ನಡೆಸಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಸದಸ್ಯರು ಅಶೋಕಪುರಂನಲ್ಲಿರುವ ರೇಲ್ವೆ ಕಾರ್ಯಾಗಾರದ ಎದುರು ಗುರುವಾರ ಪ್ರತಿಭಟಿಸಿದರು. ಮಂಗಳವಾರ ಯೂನಿಯನ್ ಸಭೆ ನಡೆಸುವ ಮೂಲಕ ದಲಿತ ಕೋಮಿಗೆ ಸೇರಿದ ಯೂನಿಯನ್ ವಿಭಾಗೀಯ ಅಧ್ಯಕ್ಷರನ್ನು ಅವಮಾನಿಸಲಾಗಿದೆ ಎಂದು ಅವರು ಆರೋಪಿಸಿದರು. ದಸಂಸ ಜಿಲ್ಲಾ ಸಂಚಾಲಕ ಶಿವರಾಜ್ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

