ಮೈಸೂರು

ಎಲ್ಲೆಂದರಲ್ಲಿ ವಾಹನ ನಿಲ್ಲಿಸಬೇಡಿ

Published On :

ಮೈಸೂರು: ಮೈಸೂರು ಲೋಕಸಭಾ ಚುನಾವಣೆ ಮತ ಎಣಿಕೆಯು ಎಸ್‌ಜೆಸಿಇ ಕಾಲೇಜಿನ ಸುವರ್ಣ ಮಹೋತ್ಸವ ಭವನದಲ್ಲಿ ಮೇ 16 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಸ್‌ಜೆಸಿಇ ಚದುರಂಗ ರಸ್ತೆಯಲ್ಲಿ ಯಾವುದೇ ರೀತಿಯ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ಎಸ್‌ಜೆಸಿಇ ಬಳಿ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ಈ ಕೆಳಕಂಡತೆ ಮಾಡಲಾಗಿದೆ. ಪೊಲಿಂಗ್ ಏಜೆಂಟರ ವಾಹನಗಳು ಎಸ್‌ಜೆಸಿಇ ಕಾಲೇಜಿನ ಮುಖ್ಯದ್ವಾರ ಗೇಟ್- 1 ಮುಖ್ಯದ್ವಾರದಿಂದ ಮುಂದೆ ಇರುವ ಧ್ವಜಸ್ತಂಭದ ಎಡಭಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ.
ಮತ ಎಣಿಕೆ ಸಿಬ್ಬಂದಿ ವಾಹನಗಳು ಎಸ್‌ಜೆಸಿಇ ಮುಖ್ಯ ದ್ವಾರದಿಂದ ಮುಂದೆ ಇರುವ ಧ್ವಜಸ್ತಂಭದಿಂದ ಮುಂದೆ ಸಾಗಿ ಬಲತಿರುವು ಪಡೆದು ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಬೇಕು.
ಪತ್ರಿಕಾ ಮತ್ತು ಟಿವಿ ಮಾಧ್ಯಮದವರ ವಾಹನಗಳು ಎಸ್‌ಜೆಸಿಇ ಮುಖ್ಯದ್ವಾರದಿಂದ ಮುಂದೆ ಇರುವ ಧ್ವಜ ಸ್ತಂಭದ ಬಳಿ ಬಲ ತಿರುವು ಪಡೆದು ಸ್ಟ್ರಾಂಗ್ ರೂಂನ ದಕ್ಷಿಣ ಭಾಗದ ಖಾಲಿ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರಿ ಹಿರಿಯ ಅಧಿಕಾರಿಗಳ ವಾಹನಗಳಿಗೆ ಎಸ್‌ಜೆಸಿಇ ಫುಟ್‌ಬಾಲ್ ಮೈದಾನದಲ್ಲಿ ವ್ಯವಸ್ಥೆಗೊಳಿಸಲಾಗಿದೆ.
ಸಾರ್ವಜನಿಕರ ವಾಹನಗಳನ್ನು ಎಸ್‌ಜೆಸಿಇ (ಚದುರಂಗ) ರಸ್ತೆ ಮೂಲಕ ಕಾಲೇಜಿನ ಮುಖ್ಯದ್ವಾರದಿಂದ ಪೂರ್ವಕ್ಕೆ ಸಾಗಿರುವ ರಸ್ತೆಯಲ್ಲಿ ಕ್ಯಾಂಟೀನ್ ಜಂಕ್ಷನ್‌ನಿಂದ ಸೆನೆಟ್ ಭವನದವರೆಗೆ ರಸ್ತೆಯ ಒಂದು ಪಾರ್ಶ್ವದಲ್ಲಿ, ಬಯಲು ರಂಗಮಂದಿರದ ಪಶ್ಚಿಮಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ಹಾಗೂ ಮಾನಸ ಗಂಗೋತ್ರಿಯ ಕ್ರಿಕೆಟ್ ಮೈದಾನ ಬಳಿ ಇರುವ ಖಾಲಿ ಸ್ಥಳದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಎಸ್‌ಜೆಸಿಇ ಕಾಲೇಜು ರಸ್ತೆಯಲ್ಲಿ (ಚದುರಂಗ) ಹುಣಸೂರು ರಸ್ತೆ ಜಂಕ್ಷನ್‌ನಿಂದ ಬೋಗಾದಿ ರಸ್ತೆ ಜಂಕ್ಷನ್‌ವರೆಗೆ ಯಾವುದೇ ರೀತಿಯ ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ವಾಹನಗಳ ನಿಲುಗಡೆಗೆ ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲ್ಲಿಸಿ, ಸುಗಮ ಸಂಚಾರಕ್ಕೆ ಸಹಕರಿಸುವಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.