ಪ್ರತಾಪ್ಗೆ ಮೈಸೂರು ಸಿಂಹಾಸನ
ಕ.ಪ್ರ.ವಾರ್ತೆ ಮೈಸೂರು ಮೇ 16
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪತ್ರಕರ್ತ, ಅಂಕಣಕಾರ ಪ್ರತಾಪ್ ಸಿಂಹ ಅವರು ರಾಜಕೀಯ ಪ್ರವೇಶದ ಪ್ರಥಮ ಪ್ರಯತ್ನದಲ್ಲೇ ವಿಜಯ ಮಾಲೆ ತಮ್ಮದಾಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಾಲಿ ಸಂಸದ ಎಚ್. ವಿಶ್ವನಾಥ್ ಅವರು 31,608 ಮತಗಳ ಅಂತರಿಂದ ಪ್ರತಾಪ್ ಸಿಂಹ ಎದುರು ಸೋಲು ಅನುಭವಿಸಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಅವರು ಮೂರನೇ ಸ್ಥಾನ ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ.
ಇನ್ನು ಬಿಎಸ್ಪಿ ಅಭ್ಯರ್ಥಿ ಸಿ.ಮೋಹನ್ಕುಮಾರ್ ಅವರು 13,637 ಮತ ಪಡೆದು ನಾಲ್ಕನೇ ಸ್ಥಾನ, ಎಎಪಿ ಅಭ್ಯರ್ಥಿ ಎಂ.ವಿ. ಪದ್ಮಮ್ಮ ಅವರು 5,650 ಮತ ಪಡೆದು 5ನೇ ಸ್ಥಾನದಲ್ಲಿದ್ದಾರೆ. ಉಳಿದವರು 10 ಅಭ್ಯರ್ಥಿಗಳು ಯಾರು ಸಹ 5 ಸಾವಿರ ಗಡಿಯನ್ನು ದಾಟಿಲ್ಲ.
ಪ್ರತಾಪ್ ಪ್ರಥಮ: ಮೈಸೂರು ಲೋಕಸಭಾ ಚುನಾವಣಾ ಮತ ಎಣಿಕೆಯು ಒಟ್ಟು 23 ಸುತ್ತಿನಲ್ಲಿ ನಡೆಯಿತು. ಮೊದಲನೇ ಸುತ್ತಿನಿಂದ ಆರಂಭವಾಗಿ 23ನೇ ಸುತ್ತಿನ ಅಂತ್ಯದವರೆಗೂ ಪ್ರತಾಪ್ ಸಿಂಹ ಅವರು ಮುನ್ನಡೆ ಸಾಧಿಸಿ ಜಯ ತಮ್ಮದಾಗಿಸಿಕೊಂಡರು. ಕೆಲವು ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಅವರು ಹೆಚ್ಚಿನ ಮತಗಳನ್ನು ಪಡೆದರು ಸಹ ಪ್ರತಾಪ್ ಸಿಂಹ ಅವರನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.
ಅಂತರದಲ್ಲಿ ಸಂಖ್ಯೆಯಲ್ಲಿ ಹೆಚ್ಚುಕಮ್ಮಿಯಾದರು ಎಲ್ಲೂ ಸಹ ಪ್ರತಾಪ್ ಸಿಂಹ ಅವರಿಗೆ ಹಿನ್ನಡೆ ಉಂಟಾಗಿಲ್ಲ. ಮೊದಲನೇ ಸುತ್ತಿನಲ್ಲಿ 28 ಮತಗಳಿಂದ ಮುನ್ನಡೆ ಸಾಧಿಸಿದ ಪ್ರತಾಪ್, 23ನೇ ಸುತ್ತಿನಲ್ಲೂ ಒಟ್ಟಾರೆ 31,608 ಮತಗಳ ಅಂತರಿಂದ ಎಚ್.ವಿಶ್ವನಾಥ್ ಅವರನ್ನು ಮಣಿಸಿದರು.
34 ಮತಗಳು ತಿರಸ್ಕೃತ: ಮೈಸೂರು- ಕೊಡಗು ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟಾರೆ 17,21,197 ಮತದಾರರಿದ್ದು, 11,50,670 ಮಂದಿ ಮತ ಚಲಾಯಿಸಿದ್ದರು. ಇವರಲ್ಲಿ 8,924 ಮಂದಿ ಯಾವ ಅಭ್ಯರ್ಥಿಗೂ ಮತ ನೀಡದೇ ನೋಟಾ ಬಟನ್ ಒತ್ತಿದ್ದರು. ಇನ್ನು 2,282 ಮಂದಿ ಅಂಚೆ ಮೂಲಕ ಮತದಾನ ಮಾಡಿದ್ದು, ಇದರಲ್ಲಿ 34 ಮತಗಳು ತಿರಸ್ಕೃತಗೊಂಡರೇ, 27 ಮತಗಳನ್ನು ಟೆಂಡರ್ಡ್ ಆಗಿದ್ದವು.
ಒಟ್ಟು ನಡೆದಿದ್ದು 23 ಸುತ್ತಿನ ಎಣಿಕೆ; ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಪ್ರತಾಪ್
ಅಭ್ಯರ್ಥಿಗಳ ಪಡೆದ ಮತಗಳು...
1. ಪ್ರತಾಪ್ ಸಿಂಹ (ಬಿಜೆಪಿ) 5,03,908
2. ಎಚ್. ವಿಶ್ವನಾಥ್ (ಕಾಂಗ್ರೆಸ್) 4,72,300
3. ಚಂದ್ರಶೇಖರಯ್ಯ (ಜೆಡಿಎಸ್) 1,38,587
4. ಸಿ. ಮೋಹನ್ಕುಮಾರ್ (ಬಿಎಸ್ಪಿ) 13,637
5. ಎಂ.ವಿ. ಪದ್ಮಮ್ಮ (ಎಎಪಿ) 5,650
6. ರತಿ ಪೂವಯ್ಯ (ಕರುನಾಡ ಪಕ್ಷ) 3,726
7. ಎನ್. ಸಂಪತು (ಪಕ್ಷೇತರ) 2,078
8. ಬೋಜಣ್ಣ ಎನ್. ಸೋಮಯ್ಯ (ಪಕ್ಷೇತರ) 2,032
9. ತಿಮ್ಮೇಗೌಡ (ಎಸ್ಜೆಪಿ) 1,516
10. ಎಂ.ಎಸ್. ಪ್ರವೀಣ್ (ಪಕ್ಷೇತರ) 1,439
11. ಹುಣಸೂರು ಕೆ. ಚಂದ್ರಶೇಖರ್ (ಡಿಪಿಪಿಎಸ್) 1,342
12. ಡಿ. ಈಶ್ವರ್ ತೋರೆಮಾವು (ಪಕ್ಷೇತರ) 1,246
13. ಬನ್ನೂರು ಕುಮಾರ್ (ಪಕ್ಷೇತರ) 1,215
14. ಎಸ್.ಪಿ. ಮಹದೇವಪ್ಪ (ಜೆಡಿಯು) 1,016
15. ಡಿ.ಎಸ್. ನಿರ್ವಾಣಪ್ಪ (ಸಿಪಿಐಎಂಎಲ್) 978
ಒಟ್ಟು ಮತದಾರರು 17,21,197
ಒಟ್ಟು ಮತದಾನ 11,50,670
ನೋಟಾ 8,924
ತಿರಸ್ಕೃತ ಮತ 34
ಟೆಂಡರ್ಡ್ ಮತ 27
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

