ಮೈಸೂರು

ಕಡಿಮೆ ಹಾಜರಾತಿಗೆ ಪರೀಕ್ಷೆ ಇಲ್ಲ

Published On :

ಮೈಸೂರು: ಕಾಲೇಜಿನಲ್ಲಿ ಹಾಜರಾತಿ ಕೊರತೆ ಎದುರಾದರೆ ಮತ್ತೆ ತರಗತಿಗೆ ಹಾಜರಾಗಬೇಕೆ ಹೊರತು ಅದಕ್ಕೆ ಪರ್ಯಾಯ ಮಾರ್ಗ ಇಲ್ಲ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಶ್ರೀಜಯದೇವರಾಜೆ ಅರಸ್ ತಿಳಿಸಿದ್ದಾರೆ.
ಮೈಸೂರು ವಿವಿ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳ ಹಾಜರಾತಿ ಶೇ.75 ರಷ್ಟು ಇರಬೇಕು ಎಂಬುದು ನಿಯಮ. ಆದರೆ ಹಾಜರಾತಿಯಲ್ಲಿ ಕೊರತೆ ಉಂಟಾದರೆ ಅದಕ್ಕೆ ಪರ್ಯಾಯ ಮಾರ್ಗ ಇಲ್ಲ. ಈ ಹಿಂದೆ ಕಾಲೇಜುಗಳ ಮೂಲಕ ದಂಡ ಕಟ್ಟಿಸಿಕೊಳ್ಳಲಾಗುತ್ತಿತ್ತು. ಆದರೆ ದಂಡ ಕಟ್ಟಿಸುವ ನಿಯಮವನ್ನು ಕೈ ಬಿಡಲಾಗಿದೆ ಎಂದು ಅವರು ಸ್ಪಷ್ಪಪಡಿಸಿದರು.
ಈಗ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಬೇಕಿದ್ದಲ್ಲಿ ಮತ್ತೆ ತರಗತಿಗೆ ಬರಬೇಕು (ಮರು ವರ್ಷದಿಂದ). ಇಲ್ಲವೆ ಪರೀಕ್ಷೆ ಬರೆಯುವಂತಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶೇ.75 ರಷ್ಟು ಹಾಜರಾತಿ ಇರಲೇಬೇಕು. ಈ ಹಿಂದೆ ದಂಡ ಕಟ್ಟುವ ಅವಕಾಶ ಇದ್ದ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಹಾಜರಾತಿಯಲ್ಲಿ ಕೊರತೆ ಉಂಟಾದರೆ ದಂಡ ಪಾವತಿಸಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಮತ್ತು ವಿದ್ಯಾರ್ಥಿಗಳು ತರಗತಿಗೆ ಕಡ್ಡಾಯವಾಗಿ ಹಾಜರಾಗಲಿ ಎಂಬ ಕಾರಣಕ್ಕೆ ಮೈಸೂರು ವಿವಿ ಈ ಹೊಸ ನೀತಿ ಜಾರಿಗೊಳಿಸಿದೆ.
ಕಳೆದ ವರ್ಷ ಮಹಾಜನ ಕಾಲೇಜಿನಲ್ಲಿ ಹಾಜರಾತಿ ಕೊರತೆ ಉಂಟಾದ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಘಟನೆ ಸ್ಮರಿಸಬಹುದು.
ದಂಡ ಕಟ್ಟಿಸಿಕೊಂಡು ಹಾಜರಾತಿ: ದಂಡ ಕಟ್ಟಿಸಿಕೊಂಡು ಹಾಜರಾತಿ ನೀಡುತ್ತಿಲ್ಲ ಎಂದು ವಿಶ್ವವಿದ್ಯಾಲಯ ಹೇಳುತ್ತಿದ್ದರೂ ನಗರದ ಕೆಲವು ಖಾಸಗಿ ಕಾಲೇಜುಗಳಲ್ಲಿ ಇತರೆ ಶುಲ್ಕ ಎಂದು ಐದು ಸಾವಿರ ರು.ವರೆಗೆ ಕಟ್ಟಿಸಿಕೊಂಡು ಹಾಜರಾತಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲವಾರು ವಿದ್ಯಾರ್ಥಿಗಳು ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ಹೇಳಿ ಎಂದು ಶಾಸಕರೊಬ್ಬರ ಬಳಿ ತೆರಳಿದ್ದು ಖಚಿತಪಟ್ಟಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಣ ಮಂಡಳಿಯ ಪ್ರಾದೇಶಿಕ ನಿರ್ದೇಶಕರು ಗಮನಹರಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.