ಮೈಸೂರು

ಕನ್ನಡ ಶಾಲೆ ಮುಚ್ಚಬಾರದು ಹೇಳಿಕೆ ವಾಪಸ್: ಸಾಹಿತಿ ಸಿಪಿಕೆ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 24
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನಾನು ನೀಡಿದ್ದ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಹೇಳಿದರು.
ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಯುವ ಕೇಂದ್ರ ಸಂಬಂಧ ಶತಮಾನದ ಇತಿಹಾಸ ಇರುವ ಎನ್‌ಟಿಎಂಎಸ್ ಶಾಲೆಯನ್ನು ದೇವರಾಜ ಅರಸು ಶಾಲೆಯೊಂದಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರ ಮತ್ತು ಯುವ ಕೇಂದ್ರ ನಿರ್ಮಾಣದ ಪರ ಹೇಳಿಕೆ ನೀಡುತ್ತಿರುವ ಡಾ. ಸಿಪಿಕೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯುವುದಾಗಿ ಒಪ್ಪಿಕೊಂಡರು.
ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ವೇಳೆ ಸರ್ಕಾರಿ ಕನ್ನಡ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚಬಾರದು ಎಂದು ಸಿಪಿಕೆ ಹೇಳಿಕೆ ನೀಡಿದ್ದರು. ಆದರೆ ಈಗ ಎನ್‌ಟಿಎಂಎಸ್ ಶಾಲೆಯನ್ನು ದೇವರಾಜ ಅರಸು ಶಾಲೆಯಲ್ಲಿ ವಿಲೀನಗೊಳಿಸುತ್ತಿರುವುದನ್ನು ಪ್ರೋತ್ಸಾಹಿಸಿ, ಯುವ ಕೇಂದ್ರ ನಿರ್ಮಾಣಕ್ಕೆ ಬೆಂಬಲಿಸಿರುವ ಅವರು, ಒಂದೇ ನಿಲುವಿಗೆ ಅಂಟಿಕೊಂಡರೆ ಸಣ್ಣ ಮನಸ್ಸಿನ ಸಂಕೇತವಾಗುತ್ತದೆ. ಕೆಲವೊಂದು ವೇಳೆ ನಿಲುವು ಬದಲಿಸಬೇಕಾಗುತ್ತದೆ. ಸಮ್ಮೇಳನ ಅಧ್ಯಕ್ಷನಾಗಿ ನಾನು ನೀಡಿದ್ದ ಹೇಳಿಕೆ ಹಿಂದಕ್ಕೆ ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೆ ಒತ್ತಡ ಇಲ್ಲ. ಬಹುಶ- ಇದಕ್ಕೆ ವಿವೇಕ ಪ್ರೇರಣೆ ಇರಬಹುದು ಎಂದರು.
ವಿವೇಕಾನಂದ ಸ್ಮಾರಕ ನಿರ್ಮಾಣ ಸಂಬಂಧ ಕರೆದಿದ್ದ ಪತ್ರಿಕಾಗೋಷ್ಠಿ ಹಲವು ಗೊಂದಲಕ್ಕೆ ಕಾರಣವಾಯಿತು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಡಿ. ಮಾದೇಗೌಡ ಮತ್ತು ಪತ್ರಕರ್ತರ ನಡುವೆ ಅನೇಕ ವಾದವಿವಾದ ನಡೆಯಿತು. ಈ ವೇಳೆ ಡಿ. ಮಾದೇಗೌಡರು, ಈ ಹಿಂದೆ ಪಾಳುಬಿದ್ದಿದ್ದ ಜಾಗವನ್ನು ಹಸ್ತಾಂತರಿಸಿರಲಿಲ್ಲ. ಈಗ ಸರ್ಕಾರ ಆಶ್ರಮಕ್ಕೆ ಜಾಗ ನೀಡಿಯೆ ಇಷ್ಟೆಲ್ಲ ವಿರೋಧ ಇದೆ. ಇನ್ನೂ ಈ ಮುಂಚೆಯೆ ಸ್ಮಾರಕ ನಿರ್ಮಿಸಲು ನಮ್ಮಿಂದ ಸಾಧ್ಯವಿತ್ತೆ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.