ಮೈಸೂರು

ಎಚ್.ಡಿ. ಕೋಟೆ: ಬಿಜೆಪಿ ವಿಜಯೋತ್ಸವ

Published On :

ಸರಗೂರು: ನರೇಂದ್ರಮೋದಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಸರಗೂರಿನಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಂತೆ ಮಾಸ್ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಸಂತೆ ಮಾಳದಿಂದ ಮೆರವಣಿಗೆ ಹೊರಟು, ನೃಪತುಂಗ ವೃತ್ತ, ಬಸವೇಶ್ವರ ರಸ್ತೆ, ಚಿಕ್ಕದೇವಮ್ಮ ವೃತ್ತ, ಮಹಾವೀರ ವೃತ್ತ ಮುಖಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಂದರಾಜು, ಸದಸ್ಯ ಜಯರಾಮ, ರೂಪಾನೇಮೀಶ್, ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ ನಿಂಗರಾಜು,  ಮುಖಂಡರಾದ ಎಸ್.ಎನ್. ಸತ್ಯನಾರಾಯಣ, ರವಿಕುಮಾರ್, ಎಸ್.ಎಚ್. ಹನುಮನಾಯಕ, ರಾಮು, ಚನ್ನಪ್ಪ, ಎಸ್.ಎನ್. ದೇಂದ್ರಯ್ಯ, ಎಸ್. ನಾರಾಯಣ್, ಎನ್.ಎಸ್. ಪ್ರತಾಪ್, ಸುರೇಶ್‌ಜೈನ್, ಕುಮಾರ್, ಪ್ರಕಾಶ್, ಎಪಿಎಂಸಿ ಸದಸ್ಯ ಮಹದೇವ, ನೂರಾಳಸ್ವಾಮಿ, ಮಹೇಂದ್ರಕುಮಾರ್, ರವಿಗೌಡ, ನರಸಿಂಹ, ಭರತ್, ರಾಜು ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.