ಮಾಸಾಶನ ನೀಡುವಂತೆ ಕನ್ನಡ ಚಳವಳಿ ಒತ್ತಾಯ
ಸಿಂಧನೂರು: ಅಂಗವಿಕಲರು, ವಿಧವೆಯರಿಗೆ ನೀಡಲಾಗುವ ಮಾಸಾಶನವನ್ನು ಇತ್ತೀಚೆಗೆ ತಿಂಗಳಿಗೆ ಸರಿಯಾಗಿ ನೀಡದೆ ವಿಳಂಬ ಮಾಡಲಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಕನ್ನಡ ಚಳವಳಿ ಸಮಿತಿ ರಾಜ್ಯ ಸಂಚಾಲಕ ಕೆ.ಬಾಳಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರತಿ ತಿಂಗಳು ನೀಡಲಾಗುತ್ತಿದ್ದ ಮಾಸಾಶನವನ್ನು ಇತ್ತೀಚೆಗೆ ಮೂರು ತಿಂಗಳಿಗೊಮ್ಮೆ ವಿತರಿಸಲಾಗುತ್ತಿದೆ. ಮಾಸಾಶನದಿಂದಲೇ ಜೀವನ ಕಂಡುಕೊಂಡಿರುವ ಹಲವರು ಪರಿತಪಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವೇತನಕ್ಕಾಗಿ ದಿನನಿತ್ಯ ಅಂಚೆ ಕಚೇರಿಗೆ ಅಲೆದಾಡಿದರೂ ಅಲ್ಲಿಯ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ, ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರಿಗೆ ಬೇಕಾಗಿರುವ ಮಾಹಿತಿಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಅಲ್ಲದೇ ಮಾಸಾಶನ ವಿತರಿಸುವ ಫೋಸ್ಟ್ ಮ್ಯಾನ್ಗಳು 100 ಕಮೀಷನ್ ಪಡೆಯುತ್ತಿದ್ದಾರೆ. ಬಡವರ ಹಣಕ್ಕೂ ಕೈಚಾಚುವ ಪ್ರವೃತ್ತಿ ಬೆಳಸಿಕೊಂಡಿರುವ ಇಂತಹ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಪ್ರತಿ ತಿಂಗಳು ನಿಗದಿತವಾಗಿ ಮಾಸಾಶನ ವಿತರಿಸಬೇಕು. ಇಲ್ಲವಾದಲ್ಲಿ ಅಂಚೆ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಸಮಿತಿಯ ಎಂ.ಯೇಸುರಾಜ, ರಡ್ಡೆಪ್ಪ ತೂಗೇಮನಿ, ಯಂಕಪ್ಪ ಹೆಡಗಿನಾಳ, ಹಸನ್ ಟೇಲರ್, ನಾಗೇಶ ಜಾಲಗಾರ, ರಮೇಶ ನಾಗಲೀಕರ, ಆಂಜನೇಯ ಗುರುಗುಂಟಾ, ವೆಂಕಟೇಶ ಕಟ್ಟಿಮನಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

