ರಾಯಚೂರು

ಪಕ್ಷ ವಿರೋಧಿ ಚಟುವಟಿಕೆ: ಕ್ರಮಕ್ಕೆ ಒತ್ತಾಯ

Published On :

ದೇವದುರ್ಗ: ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಕ್ರಮ ಜರುಗಿಸುವಂತೆ ಪುರಸಭೆ ಮಾಜಿ ಸದಸ್ಯ ಟಿ. ಜಾಕೀರ ಹುಸೇನ್ ಒತ್ತಾಯಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಸುಭಾಷ್ಚಂದ್ರ ಪಾಟೀಲ್ ಅವರು ಪುರಸಭೆಯ ಬಿಜೆಪಿ ಪಕ್ಷದ ಸದಸ್ಯರಿಗೆ ಸನ್ಮಾನ ಸಮಾರಂಭ ಆಯೋಜಿಸಿದ್ದು, ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವ ಡಾ. ಸುಭಾಷ್‌ಚಂದ್ರ ಪಾಟೀಲ್ ಬಹಿರಂಗವಾಗಿ ಬಿಜೆಪಿ ಸದಸ್ಯರಿಗೆ ಸನ್ಮಾನ ಮಾಡುವುದರಿಂದ ಕಾಂಗ್ರೆಸ್ ಪಕ್ಷದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿದ್ದು, ಇಂತಹ ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಟಿ. ಜಾಕೀರ ಹುಸೇನ್ ಒತ್ತಾಯಿಸಿದ್ದಾರೆ.
ಮತದಾನದ ಹಕ್ಕಿನ ಜಾಗೃತಿ ಕಾರ್ಯಕ್ರಮ
ದೇವದುರ್ಗ: ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿ ವತಿಯಿಂದ ಸಾಕ್ಷರ ಭಾರತ ಪ್ರೇರಕರಿಗೆ ಮತದಾನ ಹಕ್ಕಿನ ಜಾಗೃತಿ ಸಭೆ ಶುಕ್ರವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಪಂ ಇಒ ನಾಮದೇವ್ ರಾಠೋಡ್ ಪ್ರೇರಕರಿಗೆ ಮತದಾರರ ಪ್ರತಿಜ್ಞ ವಿಧಿಯನ್ನು ಬೋಧಿಸಿದರು. ಬಿಇಒ ಎನ್. ಶ್ರೀಧರ್, ಬಸಪ್ಪ ಪೋತರಾಜ್, ಜಿಲ್ಲಾ ಸಂಯೋಜಕ ಯಂಕಪ್ಪ ಭೋಗಾಪುರ, ಮುರಿಗೆಪ್ಪ ಬಳೆ, ಯಂಕಪ್ಪ ಕಾವಲಿ, ಶಿವಪ್ಪ, ಬಂದೇನವಾಜ್ ನಾಗಡದಿನ್ನಿ, ಮಲ್ಲಮ್ಮ, ಪವಿತ್ರ, ಶಾರದಾ ಸೇರಿದಂತೆ ತಾಲೂಕಿನ ಪ್ರೇರಕರು ಭಾಗವಹಿಸಿದ್ದರು.
ಮನೆಯಲ್ಲಿ ಮಹಾಮನೆ
ರಾಯಚೂರು: ನಗರದಲ್ಲಿ ಈಚೇಗೆ ಬಸವ ಕೇಂದ್ರದಿಂದ 128ನೇ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿನ ಶರಣ ಮಹಾದೇವಪ್ಪ ಏಗನೂರು ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನವಿಯ ಡಾ.ಶಿವಯ್ಯ ಹಿರೇಮಠ ಮಾತನಾಡಿ, ಶರಣರ ವಚನಗಳನ್ನು ಮನದಾಳದಲ್ಲಿ ಅಳವಡಿಸಿಕೊಂಡು ಮುನ್ನಡೆದಲ್ಲಿ ಮಾತ್ರ ಧರ್ಮದ ಪ್ರಗತಿ ಸಾಧ್ಯ ಎಂದರು. ರಾಮಸ್ವಾಮಿ ನುಲಿ ಮಾತನಾಡಿ, ಶರಣರ ವಚನಗಳ ಅಧ್ಯಯನದ ಮೂಲಕ ಆದರ್ಶ ಗುಣಗಳನ್ನು ಹೊರಹಾಕಲು ಸಾಧ್ಯ. ಇಷ್ಟಲಿಂಗಾರ್ಚನೆ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಸಲಹೆ ನೀಡಿದರು. ಅನ್ನಪೂರ್ಣಮ್ಮ ಮೇಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಾಚನೂರು ಶರಣಪ್ಪ ಪಾಟೀಲ್ ವಹಿಸಿದ್ದರು. ರಾಚಗೌಡ ಕೋಳೂರು, ಸಿದ್ದಣ್ಣ ನೆಲೋಗಿ, ಹಣಮಂತ್ರಾಯ ಪಾಟೀಲ್, ಮಲ್ಲಯ್ಯ, ಕುಂಟೆಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವಿಜಯಲಕ್ಷ್ಮಿ ವಚನ ಗಾಯನ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.