ಸಮರ್ಪಕ ಕುಡಿವ ನೀರೊದಗಿಸಲು ಡಿಸಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ,ರಾಯಚೂರು,ಏ.7
ನಗರದಲ್ಲಿ ಕಳೆದ ಮೂರು ತಿಂಗಳಿನಿಂದ ಅಸಮರ್ಪಕ ನೀರು ಪೂರೈಕೆಯಿಂದಾಗಿ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ತಿಮ್ಮಾಪುರಪೇಟೆ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಕಾರ್ಯದರ್ಶಿ ಕೆ.ಟಿ.ಆನಂದ ಮತ್ತಿತರರು, ನಗರಕ್ಕೆ ತುಂಗಭದ್ರಾ ಮತ್ತು ಕೃಷ್ಣಾ ನದಿಯಿಂದ ನೀರೊದಗಿಸಲಾಗುತ್ತದೆ. ಆದರೆ ಎರಡೂ ನದಿಗಳಿಂದ ಸದ್ಯ ಸಮರ್ಪಕ ನೀರು ಒದಗಿಸುವ ಕಾರ್ಯವನ್ನು ಸ್ಥಳೀಯ ಆಡಳಿತ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಕಳೆದ ಮೂರು ತಿಂಗಳಿನಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೂ ಶಾಸಕ, ಸಂಸದ, ನಗರಸಭೆಯ ಆಡಳಿತವು ನಿರ್ಲಕ್ಷ್ಯ ತೋರಿದೆ. ಪರಿಣಾಮ ನಗರದ ಜನತೆ ಪರದಾಡುವಂತಾಗಿದೆ. ನೀರಿಗಾಗಿ ಅಲೆದಾಡುವಂಥ ಸ್ಥಿತಿ. ನೀರೆತ್ತುವ ಘಟಕಗಳಲ್ಲಿ ವಿದ್ಯುತ್ ಮೋಟಾರ್ಗಳು ದುರಸ್ತಿಗೀಡಾಗಿ ತಿಂಗಳು ಕಳೆದರೂ ಅವುಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ರೈಸಿಂಗ್ ಲೈನ್ಗಳಿಂದ ಪ್ರತಿಷ್ಠಿತರಿಗೆ ನೀರು: ನಗರದ ಜನತೆಯಿಂದ ಪ್ರತಿ ತಿಂಗಳು ತಪ್ಪದೇ 120 ನೀರಿನ ಕರ ಸಂಗ್ರಹಿಸುತ್ತಿರುವ ನಗರಸಭೆಯು ಸಮರ್ಪಕ ನೀರೊದಗಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಅಷ್ಟೇ ಅಲ್ಲ ರೈಸಿಂಗ್ ಲೈನ್ಗಳ ಮೂಲಕ ಪ್ರತಿಷ್ಠಿತರಿಗೆ ನೀರಿನ ಸಂಪರ್ಕ ಒದಗಿಸಿದ್ದು, ಬಡವರಿಗೆ ನೀರಿನ ಬವಣೆ ತಪ್ಪಿಲ್ಲ ಎಂದು ದೂರಿದ್ದಾರೆ.
2007ರವರೆಗೆ ನಗರಸಭೆಯ ಅಧ್ಯಕ್ಷರಾಗಿದ್ದ ದಿ.ಎಂ.ಈರಣ್ಣ ಅವರ ಅವಧಿಯಲ್ಲಿ ಒಮ್ಮೆಯೂ ಕುಡಿಯುವ ನೀರಿನ ಅಭಾವ ತಲೆದೋರಿರಲಿಲ್ಲ. ಹಾಗೆಯೇ ನಗರಸಭೆಯಲ್ಲಿ ಅಗತ್ಯ ಸಂಖ್ಯೆಯ ತಾಂತ್ರಿಕ ಸಿಬ್ಬಂದಿಯಿದ್ದು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸದ್ಯ ಸಿಬ್ಬಂದಿ ಕೊರತೆಯ ಜತೆಗೆ ಲಭ್ಯರಿರುವ ಸಿಬ್ಬಂದಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಸಮಸ್ಯೆ ಹೆಚ್ಚಿಸಿದೆ ಎಂದು ಆರೋಪಿಸಿದ್ದಾರೆ.
ಕಾರಣ ಜಿಲ್ಲಾಧಿಕಾರಿ ಕೂಡಲೇ ನಗರಕ್ಕೆ ನೀರೊದಗಿಸುವ ನೀರು ಪೂರೈಕೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ನೀರೆತ್ತುವ ಮೋಟಾರ್ ಮತ್ತಿತರೆ ಅಂಶಗಳನ್ನು ಪರಿಶೀಲಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ತಲಕಾಯಿ ಮಾರೆಪ್ಪ, ದಾಸಪ್ಪ ಯಾದವ್, ನಾಗೇಶ್ ಯಾದವ್, ಚಂದ್ರು, ದಲಾಲಿ ಶರಣಪ್ಪ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

