ಶೋಷಣೆಯಿಂದ ದಲಿತರ ಮುಕ್ತಗೊಳಿಸಿದ ಅಂಬೇಡ್ಕರ್
ಕ.ಪ್ರ. ವಾರ್ತೆ, ಸಿಂಧನೂರು, ಏ.14
ಭಾರತೀಯ ಸಮಾಜದಲ್ಲಿ ನೆಲೆಯೂರಿದ್ದ ಅಸಮಾನತೆ, ಜಾತೀಯತೆಯನ್ನು ಹೋಗಲಾಡಿಸಿ ದಲಿತರನ್ನು ಶೋಷಣೆಯಿಂದ ಮುಕ್ತಗೊಳಿಸಿದ ಕೀರ್ತಿ ಡಾ. ಅಂಬೇಡ್ಕರರಿಗೆ ಸಲ್ಲುತ್ತದೆ. ಅವರ ತತ್ವ ಸಿದ್ಧಾಂತಗಳನ್ನು, ಹೋರಾಟ ಮನೋಭಾವನೆಗಳನ್ನು ಪ್ರತಿಯೊಬ್ಬರು ರೂಢಿಸಿಕೊಂಡು ಮುನ್ನಡೆದಾಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಬಳಗಾನೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಶ ಅಭಿಪ್ರಾಯಪಟ್ಟರು.
ತಾಲೂಕಿನ ಬಳಗಾನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ದಲಿತ ಮುಖಂಡ ಬಿ.ತಿಕ್ಕಯ್ಯ, ಪತ್ರಕರ್ತ ಡಾ. ಎಸ್.ಎಸ್. ಜಾಗೀರದಾರ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಎಚ್.ಮಹಾಬಳೇಶ, ಸದಸ್ಯರಾದ ಗಣೇಶ ಡಿಶ್, ಹನುಮೇಶ ಹೂಗಾರ, ಮಹೆಬೂಬಪಾಷ, ಟಿ.ಅಮರೇಶ ನಾಯಕ, ಇಸ್ಮಾಯಿಲ್ಸಾಬ ಚೌದ್ರಿ, ತಿಪ್ಪಣ್ಣ ನಾಯಕ, ನಾಗಬುಸ್ಸಪ್ಪ, ಮರಿಯಪ್ಪ ಮೂಲಿಮನಿ, ಕಾರ್ಯದರ್ಶಿ ಸಂಗಪ್ಪ ಸವಡಿ, ಉಮಾಪತಿ ನಾಯಕ, ಮಲ್ಲಿಕಾರ್ಜುನ ಹಾಲಾಪುರ ಇನ್ನಿತರರಿದ್ದರು.
ಅಂಬೇಡ್ಕರ್ ಯುವಕ ಮಂಡಳಿ: ಗ್ರಾಮದ ವಾರ್ಡ್ ನಂ.1ರ ಅಂಬೇಡ್ಕರ್ ನಗರದಲ್ಲಿ ಅಂಬೇಡ್ಕರ್ ಯುವಕ ಮಂಡಳಿಯಿಂದ ಅಂಬೇಡ್ಕರ್ ಜನ್ಮದಿನವನ್ನು ಆಚರಿಸಲಾಯಿತು. 3ನೇ ವಾರ್ಡ್ನ ಅಂಬೇಡ್ಕರ್ ವೃತ್ತದ ನಾಮಫಲಕಕ್ಕೆ ಮುಖಂಡ ವಿರುಪಣ್ಣ ಗುತ್ತೇದಾರ್, ಡಾ. ರುದ್ರಪ್ಪ ಪಲ್ಲೇದ್ ಮಾಲಾರ್ಪಣೆ ಮಾಡಿದರು.
ಕೆಲವಡೆ ನಿರ್ಲಕ್ಷ್ಯ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೃಷಿ ಇಲಾಖೆಯ ಕಾರ್ಯಾಲಯ, ಸಾರ್ವಜನಿಕ ಗ್ರಂಥಾಲಯ ಹಾಗೂ ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸದೆ ಇರುವುದು ಕಂಡುಬಂತು. ಪ್ರತಿಯೊಂದು ಸರ್ಕಾರಿ ಇಲಾಖೆ, ಕಚೇರಿಗಳಲ್ಲಿ ಜಯಂತಿಯನ್ನು ಆಚರಿಸಬೇಕೆಂದು ನಿಯಮವಿದ್ದರೂ ನಿರ್ಲಕ್ಷ್ಯ ವಹಿಸಿದ ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿಎಸ್ಎಸ್ ಮುಖಂಡ ಎಂ.ಸುರೇಶ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

