ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ: ಎಎಸ್ಪಿ
ಸಿಂಧನೂರು: ಪೊಲೀಸ್ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿಕೊಂಡು ಜನಸೇವೆಗೆ ಮುಂದಾಗಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಮಹಾಂತೇಶ ಕರೆ ನೀಡಿದರು.
ತಾಲೂಕಿನ ಬಳಗಾನೂರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪರಿವೀಕ್ಷಣೆ ನಡೆಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪೊಲೀಸರಿಗೆ ವೃತ್ತಿ ಗಾಂಭೀರ್ಯತೆ ಮುಖ್ಯ. ಆದರೆ ಅದು ಪೊಲೀಸರ ಬಗೆಗೆ ಜನರು ದೂರ ಉಳಿಯುವ ರೀತಿಯಲ್ಲಿ ಇರಬಾರದು. ಗಾಂಭೀರ್ಯತೆಯೊಂದಿಗೆ ಒಬ್ಬ ಸ್ನೇಹಜೀವಿಯಾಗಿ ನಡೆದುಕೊಂಡಾಗ ಮಾತ್ರ ಪೊಲೀಸರ ವೃತ್ತಿ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಸೌಹಾರ್ದತೆ ಕಾಪಾಡುವಲ್ಲಿ ಶ್ರಮಿಸುವ ಪೊಲೀಸರು ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ದಲಿತ ಮುಖಂಡ ಬಿ.ತಿಕ್ಕಯ್ಯ, ಪಿಎಸ್ಐ ಬಾಳನಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಿಪಿಐ ಶೇಖರಪ್ಪ ವೇದಿಕೆ ಮೇಲಿದ್ದರು.
ಇದೇ ವೇಳೆ ಗ್ರಾಪಂ ಉಪಾದ್ಯಕ್ಷ ಎಚ್.ಮಹಬಳೇಶ, ಸಿದ್ದನಗೌಡ ಬಂಗ್ಲಿ, ಬಸವನಗೌಡ ಮುದಿಗೌಡ್ರು, ಗ್ರಾಪಂ ಸದಸ್ಯರಾದ ಗಣೇಶ ಡಿಶ್, ನಾಗರಾಜ ಕೊಂಡರೆಡ್ಡಿ ಮಲ್ಲಪ್ಪ ಕುಂಬಾರ್, ಮುಖಂಡರಾದ ಎಂ.ಬಸಣ್ಣ, ಡಾ. ಎಸ್.ಎಸ್. ಜಾಗಿರದಾರ್, ಟಿ.ಅಮರೇಶ ನಾಯಕ್, ಉಮೇಶ ನಾಯಕರ್, ಬಸವರಾಜ ಜೂಚನಿ, ಮಹಿಬೂಬಪಾಷ, ಸಿದ್ದನಗೌಡ ಚಳ್ಳೂರು, ಯಂಕನಗೌಡ ಗದ್ದಿ, ಶೇಖರಗೌಡ, ಮಂಜುನಾಥ ಗದ್ದಿ, ಬುಳ್ಳನಗೌಡ ಶಂಕರಬಂಡಿ ಸೇರಿದಂತೆ ಅನೇಕರು ಇದ್ದರು.
ಸನ್ಮಾನ: ಇತ್ತೀಚೆಗೆ ತಮ್ಮ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪ್ರಶಸ್ತಿ ಪದಕ ಪಡೆದ ಎಎಸ್ಪಿ ಬಿ.ಮಹಾಂತೇಶ ಅವರನ್ನು ಠಾಣಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

