ಲಿಂಗಸ್ಗೂರು 13, ಮಸ್ಕಿ 10 ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಏ.17
ಪ್ರಸಕ್ತ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರು ಸೇರಿದಂತೆ ಲಿಂಗಸ್ಗೂರು ಕ್ಷೇತ್ರದಿಂದ ಸ್ಪರ್ಧಿಸಲು 13 ನಾಮಪತ್ರಗಳು ಹಾಗೂ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಲು 10 ನಾಮಪತ್ರ ಬುಧವಾರ ಸಲ್ಲಿಕೆಯಾಗಿರುತ್ತವೆ.
ಲಿಂಗಸ್ಗೂರು ಕ್ಷೇತ್ರ: ನಾಗರಾಜ ತಿಪ್ಪಣ್ಣ ಪಕ್ಷೇತರ, ಯಶೋಧರ ಭಜಂತ್ರಿ ಪಕ್ಷೇತರ, ಶಿದ್ಧಪ್ಪ ಬಂಡಿ ಬಿಎಸ್‌ಆರ್ ಕಾಂಗ್ರೆಸ್, ಗಂಗಮ್ಮ ಬಂಡಿ ಪಕ್ಷೇತರ, ಡಾ.ರಂಗನಾಥ ಪಕ್ಷೇತರ, ದುರುಗಪ್ಪ ಹುಲಿಗೇರಿ ಕಾಂಗ್ರೆಸ್, ದಾನಮ್ಮ ಶಿವಶಂಕರಪ್ಪ ಪಕ್ಷೇತರ, ಶೇಖರಪ್ಪ ಚಂದಪ್ಪ ಜೆಡಿಯು, ಕಿರಿಲಿಂಗಪ್ಪ ಲಿಂಗಪ್ಪ ಪಕ್ಷೇತರ, ಎಚ್.ಬಿ.ಮುರಾರಿ ಕೆಜೆಪಿ, ಸುಭಾಷ ಕೆಆರ್‌ಆರ್‌ಎಸ್, ಪಂಪಾಪತಿ ದುರುಗಪ್ಪ ಬಿಎಸ್‌ಪಿ, ಬಲರಾಮ ಖೇಮಣ್ಣ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುತ್ತಾರೆಂದು ಲಿಂಗಸ್ಗೂರು ಚುನಾವಣಾಧಿಕಾರಿ ಟಿ.ಯೋಗೇಶ ತಿಳಿಸಿರುತ್ತಾರೆ.
ಮಸ್ಕಿ ಕ್ಷೇತ್ರ: ಶೇಖರಪ್ಪ ತಳವಾರ ಬಿಎಸ್‌ಆರ್ ಕಾಂಗ್ರೆಸ್, ಶಂಕರ ಕುಮಾರ ಮೇದಾರ ಬಿಜೆಪಿ, ಅಮರೇಶ ಸರ್ವ ಜನತಾ ಪಕ್ಷ, ತಿರುಪತೆಪ್ಪ ಪಕ್ಷೇತರ, ಸಿದ್ಧಲಿಂಗಪ್ಪ ಪಕ್ಷೇತರ, ಪ್ರತಾಪಗೌಡ ಕಾಂಗ್ರೆಸ್ (2 ನಾಮಪತ್ರಗಳು ಸಲ್ಲಿಕೆ), ಮಹಾದೇವಪ್ಪ ಗೌಡ ಕೆಜೆಪಿ, ಆಂಜನೇಯ ಜೆಡಿಯು, ರಂಗಪ್ಪ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುತ್ತಾರೆಂದು ಮಸ್ಕಿ ಚುನಾವಣಾಧಿಕಾರಿ ವೈ.ಬಿ.ಶ್ರೀನಿವಾಸ ತಿಳಿಸಿರುತ್ತಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧಿಸೂಚನೆ ಜಾರಿಗೊಂಡ ನಂತರ ಲಿಂಗಸ್ಗೂರು ಕ್ಷೇತ್ರದಿಂದ ಸ್ಪರ್ಧಿಸಲು ಸೋಮವಾರ 7 ಜನ ಅಭ್ಯರ್ಥಿಗಳು ಒಟ್ಟು 8 ನಾಮಪತ್ರಗಳು, ಮಂಗಳವಾರ 2 ಜನ ಅಭ್ಯರ್ಥಿಗಳು 2 ನಾಮಪತ್ರಗಳು ಹಾಗೂ ಕೊನೆಯ ದಿನವಾದ ಬುಧವಾರದಂದು 12 ಜನ ಅಭ್ಯರ್ಥಿಗಳು ಒಟ್ಟು 13 ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ಅದರಂತೆ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಲು ಸೋಮವಾರ 4 ಜನ ಅಭ್ಯರ್ಥಿಗಳು ಒಟ್ಟು 4 ನಾಮಪತ್ರಗಳು, ಮಂಗಳವಾರ 2 ಅಭ್ಯರ್ಥಿಗಳು ಒಟ್ಟು 2 ನಾಮಪತ್ರ ಹಾಗೂ ಬುಧವಾರ 9 ಜನ ಅಭ್ಯರ್ಥಿಗಳು ಒಟ್ಟು 10 ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ.
ಲಿಂಗಸ್ಗೂರು ಮೀಸಲು ಕ್ಷೇತ್ರದಿಂದ ವಿವಿಧ ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಲು ಏ.15ರಿಂದ ಏ.17ರವರೆಗೆ 21 ಜನ ಅಭ್ಯರ್ಥಿಗಳು ಒಟ್ಟು 23 ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ಮಸ್ಕಿ ಕ್ಷೇತ್ರದಿಂದ ಏ.15ರಿಂದ ಏ.17ರವರೆಗೆ 15 ಜನ ಅಭ್ಯರ್ಥಿಗಳು ಒಟ್ಟು 16 ನಾಮಪತ್ರ ಸಲ್ಲಿಸಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

