ವರ್ತನೆ ತಿದ್ದಿಕೊಳ್ಳಲು ಶಿವನಗೌಡಗೆ ಕೈ ಸಲಹೆ
ದೇವದುರ್ಗ: ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದ ವೆಂಕಟೇಶ ನಾಯಕ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಶಾಸಕ ಕೆ.ಶಿವನಗೌಡ ನಾಯಕ ಅವರು ಅಧಿಕಾರ, ಹಣದ ಬಲದಿಂದ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರು ತಮ್ಮ ವರ್ತನೆ ತಿದ್ದಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಶಾಸಕರ ದೌರ್ಜನ್ಯ, ದರ್ಪ, ಅಹಂಕಾರದ ಮಾತುಗಳಿಂದ ತಾಲೂಕಿನ ಜನತೆ ಬೇಸತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಗಾಗಿ ದೊರೆತ 2 ಸಾವಿರ ಕೋಟಿ ಅನುದಾನದ ಸಮರ್ಪಕ ಬಳಕೆಯಾಗಿಲ್ಲ ಎಂದು ಸಾಬೀತು ಮಾಡಲು ಸಾಕಷ್ಟು ಪುರಾವೆಗಳಿವೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಮತದಾರರು ಬದಲಾವಣೆ ಬಯಸಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡ ಬುಡ್ಡನಗೌಡ ಜಾಗಟಗಲ್, ಮಾಜಿ ಶಾಸಕ ಎ.ಪಾಪಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಪಕ್ಷದ ಜಿಲ್ಲಾಧ್ಯಕ್ಷ ಎ.ವಸಂತ ಕುಮಾರ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಜಿಪಂ ಮಾಜಿ ಸದಸ್ಯ ಸಿದ್ದಯ್ಯ ತಾತಾ ಗುರುವಿನ್, ಸದಾಶಿವಯ್ಯ ತಾತಾ ಗಬ್ಬೂರು, ನಾಗಪ್ಪ ಪಾಮರತಿ, ಶಿವುಕುಮಾರ ಎಲಿ, ಖಾಜಾ ಗೌಡ ಗಬ್ಬೂರು, ವಿರುಪಾಕ್ಷಪ್ಪ ಮಸರಕಲ್, ವೀರಶೈವ ಸಮಾಜ ತಾಲೂಕ ಅಧ್ಯಕ್ಷ ಎ.ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ಅನೇಕರಿದ್ದರು.
ಬೆಂಬಲಿಗರಿಂದ ಪಾದಯಾತ್ರೆ: ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದ ಎ. ವೆಂಕಟೇಶ ನಾಯಕ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆ ಬುಧವಾರ ಅವರ ಜಾಲಹಳ್ಳಿ ಗ್ರಾಮದ ಬೆಂಬಲಿಗ 150 ಜನ ಜಾಲಹಳ್ಳಿ ಗ್ರಾಮದಿಂದ ದೇವದುರ್ಗದವರೆಗೆ ಪಾದಯಾತ್ರೆ ಮಾಡಿದರು.
ಜಾಲಹಳ್ಳಿ ಗ್ರಾಮದ ಅಕ್ಬರ್ ಅಲಿ, ರಾಮಪ್ಪ ತವಗಾ, ನಾಗರಾಜ ಜಂಬಲದಿನ್ನಿ, ವೆಂಕಣಗೌಡ ಇವರ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡರು. ಅದೇ ರೀತಿ ದಲಿತ ಮುಖಂಡರಾದ ಹನುಮಂತಪ್ಪ ಕಾಕರಗಲ್ ನೇತೃತ್ವದಲ್ಲಿ ಕಾಕರಗಲ್ ಮತ್ತು ಸುತ್ತಮುತ್ತಲಿನ ಹಳ್ಳಿ ಜನರು ಪಾದಯಾತ್ರೆ ನಡೆಸಿದರು.
ತಾಲೂಕಿನ ನಗರಗುಂಡ, ಕಕ್ಕಲದೊಡ್ಡಿ, ಗ್ರಾಮದ ಯುವಕರು ಕೂಡಾ ಪಾದಯಾತ್ರೆ ಮುಖಾಂತರ ದೇವದುರ್ಗಕ್ಕೆ ಆಗಮಿಸಿದ್ದು ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

