ರಾಯಚೂರು

ಭಗವಂತನ ಅನುಗ್ರಹಕ್ಕೆ ಭಕ್ತಿ ಮುಖ್ಯ ಸಾಧನ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.18
ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ವಸಂತ ಧಾರ್ಮಿಕ ಶಿಕ್ಷಣ ಶಿಬಿರವನ್ನು ರಾಮೋಹಳ್ಳಿ ಮಠದ ಯತಿಗಳಾದ ವಿಶ್ವಭೂಷಣ ತೀರ್ಥರು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಭಗವಂತ ಅನುಗ್ರಹವಾಗಬೇಕಾದರೆ ಭಕ್ತಿ ಮುಖ್ಯ ಸಾಧನ. ಭಕ್ತಿಗೆ ನಾವು ನಿತ್ಯ ಮಾಡುವ ಕರ್ಮಗಳು ಸಾಧನ. ಅಂತಹ ಕರ್ಮಗಳನ್ನು ಮಾಡಲು ಇಂತಹ ಧಾರ್ಮಿಕ ಶಿಕ್ಷಣ ಶಿಬಿರಗಳು ಇಂದಿನ ದಿನಗಳಲ್ಲಿ ಬಹಳ ಅವಶ್ಯ ಎಂದು ನುಡಿದರು.
ಕುಮಾರಿ ಶ್ರೇಯಾ ಚನ್ನಳ್ಳಿ ಸ್ವಾಗತ ಗೀತೆ ಹಾಡಿದರು. ಪ್ರಜ್ವಲ್ ಕುಲಕರ್ಣಿ, ಪ್ರಜ್ವಲ್ ಮತ್ತು ಗೋವಿಂದಾಚಾರ್ ಮಠಾಧಿಕಾರ್ ವೇದಘೋಷವನ್ನು ಮಾಡಿದರು. ವ್ಯವಸ್ಥಾಪಕ ಶ್ರೀರಂಗನಾಥಾಚಾರ್ಯ ಸಾಲಗುಂದಾ ಸ್ವಾಗತಿಸಿದರು.
ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ ದಂಪತಿಗಳು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು. ಶ್ರೀಗಳು ನೆರೆದಿದ್ದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ವೆಂಕಣ್ಣಾಚಾರ್ಯ ದೋಟಿಹಾಳ, ವೆಂಕಟೇಶ ಪ್ರಭು, ಗುಂಡೂರಾವ್ ಚನ್ನಳ್ಳಿ, ಕೃಷ್ಣಾಚಾರ್ಯ ಮಸ್ಕಿ, ತಿರುಮಲರಾವ್ ಕುಲಕರ್ಣಿ, ವೆಂಕಟೇಶಾಚಾರ್ಯ ಕೆಂಗಲ್, ಆನಂದ ಗೌರಕರ್, ರಾಮರಾವ್‌ಕಂಬಳಾವತಿ, ತಿರುಮಲರಾವ್ ಚರತನಾಳ್ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.