ಕಾಂಗ್ರೆಸ್ ಅಭ್ಯರ್ಥಿ ಹೂಲಗೇರಿ ಮತಯಾಚನೆ
ಮುದಗಲ್: ಲಿಂಗಸ್ಗೂರು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ವಿವಿಧ ಕಸರತ್ತು ನಡೆಸಿದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಬೆಂಬಲಿಗ ಗ್ರಾನೈಟ್ ಉದ್ಯಮಿ ದುರುಗಪ್ಪ ಹುಲಗೇರಿ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ನ ಗಮನ ಸೆಳೆಯುವ ಮೂಲಕ ಟಿಕೇಟ್ ಗಿಟ್ಟಿಸಿಕೊಂಡು ಸಮೀಪದ ಉಪ್ಪಾರನಂದಿಹಾಳ ಗ್ರಾಪಂ ವ್ಯಾಪ್ತಿಯ ಹಿರೇಲಕ್ಕಿಹಾಳ, ಚಿಕ್ಕ ಲಕ್ಕಿಹಾಳ, ಕಿಲಾರಹಟ್ಟಿ, ಉಪ್ಪಾರನಂದಿಹಾಳ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಚುನಾವಣೆ ಪ್ರಚಾರ ಪ್ರಾರಂಭಿಸಿ ಕಾಂಗ್ರೆಸ್ ಪಕ್ಷಕ್ಕೆ ಮತಚಲಾಯಿಸುವಂತೆ ಮತಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ನ ಶಿವಶಂಕರಗೌಡ ಮಾತನಾಡಿ, 5 ವರ್ಷಗಳವರೆಗೆ ಶಾಸಕರಾಗಿ ಅಧಿಕಾರ ನಡೆಸಿದ ಮಾನಪ್ಪ ವಜ್ಜಲ್ ತಾಲೂಕಿನ ಜನರಿಗೆ ಮೋಸ ಮಾಡಿದ್ದಾರೆ. ತಾಲೂಕಿನ ಜನ ಕುಡಿಯುವ ನೀರು, ರಸ್ತೆ, ಶಾಲೆ, ಆರೋಗ್ಯ, ಪಡಿತರ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಪರಿತಪ್ಪಿಸುವಂತಾಗಿದೆ ಎಂದು ಶಾಸಕ ವಜ್ಜಲ್ ವಿರುದ್ಧ ಕಿಡಿಕಾರಿದರು. ಪಕ್ಷದ ಮುಖಂಡರಾದ ಸುರೇಶಗೌಡ ಆದಾಪುರ, ಚೆನ್ನವೀರಪ್ಪಗೌಡ ಪಾಗದ್, ಸಂಗಣ್ಣ ಹಂದ್ರಾಳ, ದೆವರೆಡ್ಡಿ ತುರಡಗಿ, ದುಂಡನಗೌಡ, ಸಿದ್ದನಗೌಡ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

