ಮತಯಂತ್ರ ಉಪಯೋಗದ ಬಗ್ಗೆ ತರಬೇತಿ
ಚಿತ್ತಾಪುರ: ಇಲ್ಲಿಯ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣೆ ಸಿಬ್ಬಂದಿಯಾದ ಮತಗಟ್ಟೆ ಅಧಿಕಾರಿಗಳಿಗೆ ಸೋಮವಾರ ಮತಯಂತ್ರ ಉಪಯೋಗದ ಬಗ್ಗೆ ತರಬೇತಿ ನಡೆಯಿತು ಎಂದು ಚುನಾವಣೆ ಅಧಿಕಾರಿ ಚಂದ್ರಶೇಖರ ದೊಡ್ಮನಿ ಹಾಗೂ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಎಸ್.ಎಫ್. ಸಂಜೀವಣ್ಣನವರು ತಿಳಿಸಿದ್ದಾರೆ. 22 ಜನ ಮಾಸ್ಟರ್ ಟ್ರ್ಯೇನರ್ ಅವರು 266 ಪಿಆರ್ಓ ಅಧಿಕಾರಿಗಳಗೆ ಹಾಗೂ 296 ಎಪಿಆರ್ಓ ಅಧಿಕಾರಿಗಳಿಗೆ ವಿದ್ಯುನ್ಮಾನ ಮತಯಂತ್ರದ ಬಳಕೆಯ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರು. ತರಬೇತಿಯನ್ನು 11 ಕೋಣೆಗಳಲ್ಲಿ ಹಂತ ಹಂತವಾಗಿ ನೀಡಲಾಯಿತು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾ ನಿರ್ದೇಶಕರಾಗಿ ಪ್ರೊ. ಹೊನ್ನಪ್ಪಗೋಳ
ಬೀದರ್: ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ವಿಶ್ರಾಂತ ಕುಲಪತಿ ಪ್ರೊ. ಸುರೇಶ ಹೊನ್ನಪ್ಪಗೋಳ ಅವರು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯಲ್ಲಿ ಶಿಕ್ಷಣ ವಿಭಾಗಕ್ಕೆ ಸಹಾಯಕ ಮಹಾನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಪಶು ವೈದ್ಯಕೀಯ ಕಾಲೇಜಿನಲ್ಲಿ ಮೂರು ದಶಕಗಳ ಹಿಂದೆ ಶಿಕ್ಷಕರಾಗಿ ಸೇವೆ ಆರಂಭಿಸಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಬೀದರ್ನಲ್ಲಿರುವ ಕರ್ನಾಟಕ ಪಶುವೈದ್ಯಕೀಯ ವಿವಿ ಎರಡನೇ ಕುಲಪತಿಗಳಾಗಿ ಯಶಸ್ವಿಯಾಗಿ ತಮ್ಮ ಆಡಳಿತ ಅವಧಿಯನ್ನು ಕಳೆದ ವರ್ಷವೇ ಮುಗಿಸಿದ್ದರು.
ಮೊದಲ ಕನ್ನಡಿಗ ಪಶುವೈದ್ಯ: ಮೂಲತಃ ಬಾಗಲಕೋಟ ಜಿಲ್ಲೆಯವರಾದ ಪ್ರೊ. ಸುರೇಶ ಹೊನ್ನಪ್ಪಗೋಳರು ಬೀದರ್ದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಬೆಳವಣಿಗೆಗೆ ಶ್ರಮಿಸಿದವರು. ಇನ್ನೂ 8 ವರ್ಷ ಸೇವೆ ಹೊಂದಿರುವ ಪ್ರೊ. ಸುರೇಶ ಹೊನ್ನಪ್ಪಗೋಳ ಅವರು ಈಗ ದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಲ್ಲಿ ಸೇವೆ ಸಲ್ಲಿಸಲು ಸಹಾಯಕ ಮಹಾನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿರುವ ಮೊದಲ ಕನ್ನಡಿಗ ಪಶು ವೈದ್ಯರಾಗಿ ಹೊರಹೊಮ್ಮಿದ್ದಾರೆ. ಇಡೀ ದೇಶದಲ್ಲಿನ ಕೃಷಿ ಶಿಕ್ಷಣದ ಸುಧಾರಣೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿ ಇವರ ಆಡಳಿತ ವ್ಯಾಪ್ತಿಗೆ ಬರುತ್ತವೆ. ಕೃಷಿ ಹಾಗೂ ಸಂಬಂಧಪಟ್ಟ ಶಿಕ್ಷಣಕ್ಕಾಗಿ 6 ವಿಶ್ವವಿದ್ಯಾಲಯಗಳು, 30ಕ್ಕೂ ಹೆಚ್ಚು ಕಾಲೇಜು ಹಾಗೂ 100ಕ್ಕಿಂತ ಹೆಚ್ಚು ಸಂಶೋಧನಾ/ವಿಸ್ತರಣಾ ಸಂಸ್ಥೆಗಳನ್ನು ಹೊಂದಿರುವ ರಾಜ್ಯಕ್ಕೆ ಇವರ ಆಯ್ಕೆ ವರದಾನವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

