ಸಮಾಜಕ್ಕೆ ಪೂರಕವಾದಲ್ಲಿ ಜೀವನಕ್ಕೆ ಅರ್ಥ
ಕನ್ನಡಪ್ರಭ ವಾರ್ತೆ ಕೆಂಭಾವಿ ಏ.22
ಸಂತರ ಹಾದಿ ಸಾರ್ವಜನಿಕರಿಗೆ ನೆರಳಾಗದಿದ್ದರೆ ಪ್ರಯೋಜನವಿಲ್ಲ. ಆಗ ಅಂಥವರ ಜೀವನ ವ್ಯರ್ಥ. ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ಪೂರಕವಾಗಿ ನಡೆದುಕೊಂಡರೆ ಮಾತ್ರ ಜೀವನಕ್ಕೆ ಅರ್ಥ ಬರುತ್ತದೆ ಎಂದು ಗಂವಾರದ ತ್ರಿವಿಕ್ರಮಾನಂದ ಮಠದ ಸೋಪಾನನಾಥ ಸ್ವಾಮೀಜಿ ಹೇಳಿದರು.
ಸಮೀಪದ ನಡಕೂರಿನ ಸಿದ್ಧಾರೂಢ ಮಠದಲ್ಲಿ ಪ್ರಾರಂಭಗೊಂಡ ಸತ್ಸಂಗ ಸಮ್ಮೇಳನವನ್ನು ಉದ್ಘಾಟಿಸಿ ಪ್ರವಚನ ನೀಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ಪೂರಕವಾಗುವಂತೆ ನಡೆದುಕೊಂಡಾಗ ಮಾತ್ರ ನಮ್ಮ ಜೀವಕ್ಕೆ ಒಂದು ಅರ್ಥ ಸಿಗುತ್ತದೆ. ಮರವಿದ್ದು ಫಲವೇನು ನೆರಳಿಲ್ಲದೆಡೆ ಎಂಬ ಮಾತಿನಂತೆ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಇನ್ನೊಬ್ಬರಿಗೆ ಆಸರೆಯಾಗದಿದ್ದರೆ ಅದು ತೃಣಕ್ಕೆ ಸಮಾನ ಎಂದರು.
ಒಂದು ಮರ ಏನನ್ನೂ ಬಯಸದೆ ನಿಂತವರಿಗೆಲ್ಲ ನೆರಳನ್ನು ನೀಡುತ್ತದೆಯೋ ಹಾಗೆ ಸಮಾಜದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಪ್ರತಿಫಲ ಬಯಸದೇ ನೆರಳಾದಾಗ ಭಗವಂತನ ಕೃಪೆಯಾಗಲು ಸಾಧ್ಯ ಎಂದು ಹೇಳಿದರು.
ಪಲ್ಲಕ್ಕಿ, ಕಳಸ ಮೆರವಣಿಗೆ: ಇದಕ್ಕೂ ಮೊದಲು ಸಿದ್ಧಾರೂಢ ಜಾತ್ರಾ ಮಹೋತ್ಸವದ ನಿಮಿತ್ತ ಪಲ್ಲಕ್ಕಿ ಹಾಗೂ ಕಳಸ ಮೆರವಣಿಗೆ ವಿಜೃಂಭಣೆಯಿಂದ ಪ್ರಾರಂಭಗೊಂಡಿತು. ಪಲ್ಲಕ್ಕಿ ಮೆರವಣಿಗೆಯಲ್ಲಿ ಸುಮಂಗಲೆಯರಿಂದ ಕುಂಭ ಮೇಳ, ಆರತಿ, ಡೊಳ್ಳು ಕುಣಿತ, ಭಜನಾ ಮಂಡಳಿಗಳಿಂದ ಕಾರ್ಯಕ್ರಮ ಗಮನ ಸೆಳೆಯುವಂತಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಲ್ಲಕ್ಕಿ ಮೆರವಣಿಗೆಯು ಸಿದ್ಧಾರೂಢರ ಮಠದಲ್ಲಿ ಅಂತ್ಯಗೊಂಡಿತು.
ಜಾತ್ರಾ ಮಹೋತ್ಸವದ ಹಿನ್ನೆಯಲ್ಲಿ ಗ್ರಾಮವು ನವ ವಧುವಿನಂತೆ ಕಂಗೊಳಿಸುತ್ತಿತ್ತು. ಮಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ, ಬೋರಗಿ ಪುರದಾಳ ವಿಶ್ವರಾಧ್ಯ ಮಠದ ಮಹಾಲಿಂಗೇಶ್ವರ ಸ್ವಾಮೀಜಿ, ಮರ್ತೂರು ವಿರಕ್ತಮಠದ ಶ್ರೀಶೈಲ ಸ್ವಾಮೀಜಿ, ಜಲಪುರ ಮಹಾಲಿಂಗೇಶ್ವರ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಪ್ರವಚನ ನೀಡಿದರು.
ಗಣಪತಿ ಪೂಜೆ, ರುದ್ರಹೋಮ, ನವಗ್ರಹ ಹೋಮ, ಧಾನ್ಯವಾಸ, ಜಲವಾಸ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಪದ್ಮನಾಭ ಜೋಷಿ ನೇತೃತ್ವದಲ್ಲಿ ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

