ಅಭಿವೃದ್ಧಿ ಪರ ಹೋರಾಡುವ ಸಿಪಿಎಂಗೆ ಮತ ನೀಡಿ: ರುದ್ರಯ್ಯ
ಸಿಂಧನೂರು: ರಾಜ್ಯದ ನೆಲ, ಜಲ ಖನಿಜ ಸಂಪತ್ತನ್ನು, ಮಾನವ ಶ್ರಮವನ್ನು ಲೂಟಿ ಮಾಡುವ ವಿದೇಶಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳನ್ನು ರಕ್ಷಿಸಲು ಪೈಪೋಟಿಯಲ್ಲಿ ಉದ್ರಿ ವ್ಯಾಪಾರ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳನ್ನು ಧಿಕ್ಕರಿಸಿ ಅಭಿವೃದ್ಧಿ ಪರ ಹೋರಾಡುವ ಸಿಪಿಎಂ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಪಕ್ಷ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಮನವಿ ಮಾಡಿದರು.
ನಗರದ ಖಾಸಗಿ ವಸತಿಗೃಹದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಾಮ್ರಾಜ್ಯಶಾಹಿ, ಜಾಗತೀಕರಣ ಜಾರಿ, ಎಸ್ಇಜಡ್, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಕೃಷಿ ಕ್ಷೇತ್ರದ ಮೇಲೆ ನೇರ ಹಿಡಿತ ಸಾಧಿಸದ ಕಾರಣ ಆಹಾರ ಧಾನ್ಯಗಳ ಬೆಲೆಗಳು ಮೂರು ಪಟ್ಟು ಹೆಚ್ಚಿವೆ. ಈ ಪಕ್ಷಗಳು ಚುನಾವಣೆ ನಂತರ ಅಧಿಕಾರ ಹಂಚಿಕೊಳ್ಳಲು ಭ್ರಷ್ಟಚಾರದಲ್ಲಿ ಪಾಲು ಪಡೆಯಲು ಒಗೂಡುತ್ತಿದ್ದಾರೆ ಎಂದು ಟೀಕಿಸಿದರು. ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿಯ ಆಸೆ ತೋರಿಸುವ ಪಕ್ಷಗಳನ್ನು ದೂರ ಸರಿಸಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಸಿಪಿಎಂನ ಆಟೋ ಗುರುತಿಗೆ ಮತ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿದರು. ಪಕ್ಷದ ಕೇಂದ್ರ ಸಮಿತಿ ಸದಸ್ಯ ಡಿ.ಎಚ್.ಪೂಜಾರ್ ಮಾತನಾಡಿದರು. ಎಚ್.ಎನ್. ಬಡಿಗೇರ್, ಪಕ್ಷದ ಸಿಂಧನೂರು ಅಭ್ಯರ್ಥಿ ರಮೇಶ ಪಾಟೀಲ್ ಭೇರ್ಗಿ, ಮಸ್ಕಿ ಅಭ್ಯರ್ಥಿ ನಾಗರಾಜ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

