ಪಕ್ಷಕಿಂತ ವ್ಯಕ್ತಿ ದೊಡ್ಡವರಲ್ಲ, ಕಾಂಗ್ರೆಸ್ಗೆ ಋಣಿ
ಪ್ರಚಾರ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು
ಸಿಂಧನೂರು: ನಮ್ಮ ಕುಟುಂಬದವರು ಮೊದಲಿನಿಂದಲೂ ಕಾಂಗ್ರೆಸ್ನಲ್ಲಿದ್ದವರು. ಈ ಕ್ಷೇತ್ರದ ಕೆಲ ಮುಖಂಡರು ರಾಜ್ಯದಲ್ಲಿ ರಾಜಕೀಯ ಬದಲಾವಣೆಯ ಪರಿಸ್ಥಿತಿಗನುಗುಣವಾಗಿ ಪಕ್ಷವನ್ನು ಬಿಟ್ಟು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಆದರೆ ನಾವು ಕಾಂಗ್ರೆಸ್ನು ಬಿಡಲಿಲ್ಲ. ಆ ನಿಯತ್ತಿಗೆ ಕಾಂಗ್ರೆಸ್ ನನ್ನನ್ನು ಗುರ್ತಿಸಿ ಜಿಪಂ ಸದಸ್ಯರನ್ನಾಗಿ ಮಾಡಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯನ್ನಾಗಿಸಿದೆ. ನಾನು ಯಾವತ್ತು ಪಕ್ಷಕ್ಕೆ ಚಿರಋಣಿಯಾಗಿರುತ್ತೆನೆ. ನನ್ನ ದೃಷ್ಟಿಯಲ್ಲಿ ಪಕ್ಷಕಿಂತ ವ್ಯಕ್ತಿ ದೊಡ್ಡವರಲ್ಲ ಎಂದು ಜಿ.ಪಂ. ಅಧ್ಯಕ್ಷೆ ಲಲಿತಮ್ಮ ಲಿಂಗರಾಜ ಹೇಳಿದರು.
ಸಣ್ಣತನ ನಮ್ಮಲ್ಲಿಲ್ಲ: ಅವರು ಜಾಲಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಬಗ್ಗೆ ಆರೋಪ ಮಾಡುವವರು ಯೋಚಿಸಿ ಮಾತನಾಡಬೇಕು. ರಾಜ್ಯದಲ್ಲಿ ತಂದೆ ಮಕ್ಕಳು, ಮಾವ, ಅಳಿಯ, ಅಲ್ಲದೆ ಅಣ್ಣ ತಮ್ಮಂದಿರೂ ಚುನಾವಣೆಗೆ ಸ್ಪರ್ಧಿಸಿದ್ದನ್ನು ನೋಡಿದ್ದೇವೆ. ನಮ್ಮ ಸಂಬಂಧಿಗಳು ಬೇರೆ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾತ್ರಕ್ಕೆ ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡುವಷ್ಟು ಸಣ್ಣತನದ ವಿಚಾರ ನಮ್ಮಲಿಲ್ಲ. ಹಿರಿಯರಾದ ವಿರುಪಾಕ್ಷಪ್ಪನವರು ಬಗ್ಗೆ ನಮಗೆ ತುಂಬಾ ಗೌರವವಿದೆ. ನಮ್ಮ ಯಜಮಾನರಂತಹವರೆಂದು ನಮಗಿಂತಲೂ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ತಮ್ಮ ಘನತೆಗೆ ತಕ್ಕಂತೆ ಟೀಕಿ ಮಾಡಬೇಕೆಂದು ಅವರು ಹೇಳಿದರು.
ದ್ರೋಹ ಮಾಡುವುದಿಲ್ಲ: ತಮ್ಮ ಜಿಪಂ ಅಧ್ಯಕ್ಷ ಸ್ಥಾನ ದೊರೆಯುವಲ್ಲಿ ಹಂಪನಗೌಡ ಶ್ರಮ ಅಪಾರವಾದುದು. ಕೆಲವರು ವಿರೋಧದ ನಡುವೆಯೂ ನಮಗೊಂದು ಸ್ಥಾನ ಕೊಟ್ಟಿದ್ದಾರೆ. ನಾವೆಂದಿಗೂ ಅವರಿಗಾಗಲಿ, ಪಕ್ಷಕ್ಕಾಗಲಿ ದ್ರೋಹ ಮಾಡುವುದಿಲ್ಲ. ಕಾಂಗ್ರೆಸ್ ಪರ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಗೆಲುವಿಗೆ ಶ್ರಮಿಸುತ್ತೇವೆ. ಅನಾರೋಗ್ಯದ ಕಾರಣ ಒಂದು ವಾರ ವಿಶ್ರಾಂತಿ ಪಡೆಯುತ್ತಿದ್ದೆ. ಅದನ್ನೇ ಕಾರಣವಾಗಿಟ್ಟುಕೊಂಡು ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ ಎನ್ನುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಸದಸ್ಯೆ ಶೈಲಜಾ ರಾಗಲಪರ್ವಿ, ಗೌರಮ್ಮ ಸಾಲಗುಂದಾ, ಸುವರ್ಣಮ್ಮ ಜಾಲಿಹಾಳ, ಹಂಪನಗೌಡರ ಪುತ್ರಿ ವೈ. ಹೇಮಾ, ಸುಜಾತ ಸೋಮನಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಜಾನಮ್ಮ, ಸದಸ್ಯರಾದ ಜಿ. ವೀರೇಶಪ್ಪ, ಜಿ. ಯಂಕಪ್ಪ ಸಾಹುಕಾರ, ನಿಂಗಪ್ಪ, ಕಾಂಗ್ರೆಸ್ ಮುಖಂಡ ಲಿಂಗರಾಜ ಹಂಚಿನಾಳ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

