'ಫ್ಲೈಯಿಂಗ್ ಸ್ಕ್ವಾಡ್ ನಿದ್ದೆ'
ದೇವದುರ್ಗ: ತಾಲೂಕಿನಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಕಾರ್ಯಕ್ಕೆ ನೇಮಕಗೊಂಡಿರುವ ಸಂಚಾರಿ ದಳದವರು ಅಕ್ರಮ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದು, ನಿದ್ದೆ ಹೋಗಿದ್ದಾರೆಂದು ಕೆಜೆಪಿ ಅಭ್ಯರ್ಥಿ ಶಾಂತಗೌಡ ಆರೋಪಿಸಿದ್ದಾರೆ. ಮಂಗಳವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮದ್ಯ ಸಾಗಣೆ ತಡೆಗೆ ನಿಯೋಜನೆಗೊಂಡಿರುವ ಫ್ಲೈಯಿಂಗ್ ಸ್ಕಾಡ್ ತಂಡದವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಅವರ ಬೇನಾಮಿ ಹೆಸರಿನಲ್ಲಿ ತಾಲೂಕಿನ ವಿವಿಧೆಡೆ 9 ಮದ್ಯದ ಅಂಗಡಿಗಳಿದ್ದು, ಅವುಗಳನ್ನು ಕೂಡಲೇ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಲು ಒತ್ತಾಯಿಸಿದರು. ಬಿಜೆಪಿ ಅಭ್ಯರ್ಥಿಯ ಮದ್ಯದ ಅಂಗಡಿಗಳಿಂದಲೇ ಕ್ಷೇತ್ರದಾದ್ಯಂತ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದೆ. ಕೊಪ್ಪರ ಗ್ರಾಮದಲ್ಲಿರುವ ಮದ್ಯದ ಅಂಗಡಿಗೆ ಬಿಜೆಪಿ ಧ್ವಜ ಅಳವಡಿಸಿ ಪುಕ್ಕಟೆಯಾಗಿ ಮದ್ಯ ಹಂಚಿಕೆ ಮಾಡಲಾಗುತ್ತಿದೆ. ತಾಲೂಕಿನ ಚುನಾವಣಾಧಿಕಾರಿಗಳು ಮತ್ತು ಪ್ಲೈಯಿಂಗ್ ಸ್ಕ್ವಾಡ್ಗೆ ಗೊತ್ತಿದ್ದೂ ನಿದ್ದೆ ಹೋಗಿದ್ದಾರೆಂದು ಲೇವಡಿ ಮಾಡಿದರು.
ದೂರು ನೀಡಿದರೂ ಕ್ರಮವಿಲ್ಲ: ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ವರ್ಗಾವಣೆಗೊಂಡಿದ್ದರೂ, ಬಿಡುಗಡೆಗೊಂಡಿಲ್ಲ. ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷದವರು ಅವರ ವಿರುದ್ಧ ಜಿಲ್ಲಾಡಳಿತಕ್ಕೆ ದೂರಿತ್ತರೂ, ಕ್ರಮ ತೆಗೆದುಕೊಳ್ಳದಿರುವುದು ಸಮಂಜಸವಲ್ಲ ಎಂದು ಟೀಕಿಸಿದರು.
ಆಸ್ತಿ ಹೆಚ್ಚಳ: ಕಳೆದ ಚುನಾವಣೆಗಿಂತ ಪ್ರಸಕ್ತ ಚುನಾವಣೆ ವೇಳೆಗೆ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೆ. ಶಿವನಗೌಡ ನಾಯಕರ ಆಸ್ತಿ ಪ್ರಮಾಣ ಹತ್ತು ಪಟ್ಟು ಹೆಚ್ಚಳವಾಗಿದೆ. ಇಷ್ಟೊಂದು ಆಸ್ತಿ ಗಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಇದು ಕ್ಷೇತ್ರದ ಅಭಿವೃದ್ಧಿಗೆ ದೊರೆತ ಅನುದಾನ ದುರ್ಬಳಕೆಯಾಗಿರುವುದು ಸಾಬೀತು ಮಾಡುತ್ತದೆ ಎಂದು ದೂರಿದರು. ಆಸ್ತಿ ಹೆಚ್ಚಳಕ್ಕೆ ಸಂಬಂಧಿಸಿ ಶೀಘ್ರದಲ್ಲಿಯೇ ಲೋಕಾಯುಕ್ತರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದ ಅವರು, ಬೇನಾಮಿ ಹೆಸರಿನಲ್ಲಿರುವ ಆಸ್ತಿ, ಮದ್ಯದ ಅಂಗಡಿಗಳ ಸಂಪೂರ್ಣ ಮಾಹಿತಿ ಪಡೆದು ದೂರು ದಾಖಲು ಮಾಡುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

