ಚಿಂಚೋಳಿ; ಕೊಲೆ ಆರೋಪಿಗಳ ಬಂಧನ
ಕನ್ನಡಪ್ರಭ ವಾರ್ತೆ ಚಿಂಚೋಳಿ ಆ.2
ತಾಲೂಕಿನ ಐನೋಳಿ ಗ್ರಾಮದ ಯುವಕನನ್ನು ಕೊಲೆ ಮಾಡಿ ಶವವನ್ನು ಚಂದ್ರಂಪಳ್ಳಿ ಜಲಾಶಯದ ಮೇಲ್ಭಾಗದ ಅರಣ್ಯಪ್ರದೇಶದಲ್ಲಿ ಹೂತು ಹಾಕಿದ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಚಿಂಚೋಳಿ ಡಿವೈಎಸ್ಪಿ ಪರಶುರಾಮ ಕೋರವಾರ್ ತಿಳಿಸಿದ್ದಾರೆ.
ಸ್ಥಳೀಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಐನೋಳಿ ಗ್ರಾಮದ ಸೈಯದ್ ಅಶ್ಪಾಕ್ ಅಕಿಯಾಸ್ ಗೋರೆಮಿಯಾ ತಂದೆ ಸೈಯದ್ ಇಕ್ಬಾಲ್ ಎಲೆಕ್ಟ್ರಾನಿಕ್ ಮೆಕ್ಯಾನಿಕ್(28)ನನ್ನು ಕೊಲೆ ಮಾಡಿದ ಸುಬ್ಬಣ್ಣ ಮತ್ತು ಈಶಪ್ಪ ಹಾಗೂ ವೆಂಕಟೇಶ ಮತ್ತು ನಾರಾಯಣರನ್ನು ಬಂಧಿಸಲಾಗಿದೆ.
ಚಂದ್ರಂಪಳ್ಳಿ ಗ್ರಾಮದಿಂದ ಐನೋಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದ ಯುವತಿಯನ್ನು ದಿನಾಲು ಚುಡಾಯಿಸಿ ಪೀಡಿಸುತ್ತಿದ್ದ ಈ ವಿಷಯವನ್ನು ತನ್ನ ಅಣ್ಣರಾದ ಸುಬ್ಬಣ್ಣ ಮತ್ತು ಈಶಪ್ಪ ತಿಳಿಸಿದ್ದಾಳೆ ಎಂದರು.
ಕೊಲೆಗೀಡಾದ ಯುವಕ ಅಶ್ಪಾಕನಿಗೆ ಬುದ್ದಿವಾದ ಹೇಳಿದರು, ದಿನಾಲು ಶಾಲೆಗೆ ಬಂದು ಯುವತಿಯನ್ನು ಪೀಡಿಸುತ್ತಿದ್ದನು. ಆಕೆಗೆ ಮದುವೆ ಅಲ್ಲಿಗೆ ಹೋಗಿ ಆಕೆಯ ಗಂಡ ರಮೇಶ ಎಂಬಾತನಿಗೆ ಈಕೆಯನ್ನು ಪ್ರೀತಿಸುತ್ತಿದ್ದೇನೆ. ನಾನು ಎತ್ತಿಕೊಂಡು ಹೋಗುತ್ತೇನೆಂದು ಬೆದರಿಕೆ ಹಾಕಿದ್ದನು ಎಂದರು.
ಕೊಲೆಗೆ ಸಂಚು: ತನ್ನ ತಂಗಿಯನ್ನು ದಿನಾಲು ಪೀಡಿಸುತ್ತಿದ್ದ ಆಶ್ಪಾಕ್ನಿಗೆ ಬೋರವೆಲ್ ದುರಸ್ತಿಗಾಗಿ ಕರೆಯಿಸಿ ಅಲ್ಲಿಯೇ ಮದ್ಯಪಾನ ಮಾಡಿಸಿ (ಪಾರ್ಟಿ)ಸುಬ್ಬಣ್ಣ ಮತ್ತು ಈಶಪ್ಪ ಹಾಗೂ ಗೆಳೆಯರಾದ ವೆಂಕಟೇಶ, ನಾರಾಯಣ ಕೂಡಿಕೊಂಡು ಕೊಡಲಿ ಮತ್ತು ಕಲ್ಲಿನಿಂದ ಹೊಡೆದು ಶವವನ್ನು ಚಂದ್ರಂಪಳ್ಳಿ ಜಲಾಶಯದ ಮೇಲ್ಭಾಗದ ಅರಣ್ಯಪ್ರದೇಶದ ನಾಲಾದಲ್ಲಿ ಹೂತಿದ್ದಾರೆಂದು ವಿಚಾರಣೆಯಲ್ಲಿ ಆರೋಪಿಗಳು ತಿಳಿಸಿದ್ದಾರೆ ಎಂದು ಸಿಪಿಐ ಇಸ್ಮಾಯಿಲ್ ಶರೀಫ್ ತಿಳಿಸಿದರು.
ಚಿಂಚೋಳಿ ಠಾಣೆಯಲ್ಲಿ ಕಳೆದ ಏಪ್ರೀಲ್ 10ರಂದು ಕಾಣೆಯಾಗಿರುವ ಬಗ್ಗೆ ಐನೋಳ್ಳಿ ಗ್ರಾಮದ ಮೃತನ ಸಹೋದರ ಮೊಸೀನ್ ತಂದೆ ಇಕ್ಬಾಲ್ ದೂರು ನೀಡಿದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಮೃತನ ಮೊಬೈಲ್ ಕರೆಯ ಜಾಡು ಹಿಡಿದ ಇಲ್ಲಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುರೇಶ ಬೆಂಡೆಗುಂಬಳ ಮತ್ತು ಸಿಪಿಐ ಇಸ್ಮಾಯಿಲ್ ಶರೀಫ್ ಚಂದ್ರಂಪಳ್ಳಿ ಗ್ರಾಮ 4ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜಾಂಶ ತಿಳಿಸಿದ್ದಾರೆ.
ಆರೋಪಿಗಳಾದ ಸುಬ್ಬಣ್ಣ ಅಂಜಪ್ಪ, ವೆಂಕಟ ವೀರಶೆಟ್ಟಿ, ನಾರಾಯಣ ಬಸಪ್ಪ, ಈಶಪ್ಪ ಅಂಜಪ್ಪ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಜಿಲ್ಲಾ ಎಸ್ಪಿ ಅಮಿತಸಿಂಗ್ ಅವರ ಮಾರ್ಗದರ್ಶನದಲ್ಲಿ ಕಳೆದ 5 ತಿಂಗಳ ಹಿಂದೆ ಜರುಗಿದ ಕೊಲೆ ಪ್ರಕರಣವನ್ನು ಪೊಲೀಸ್ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಡಿವೈಎಸ್ಪಿ ತಿಳಿಸಿದರು.
ಸಿಬ್ಬಂದಿ ಮಂಜುನಾಥ, ನಶೀರ್ ಪಟೇಲ್, ಬಾಬು ದೇಸಾಯಿ, ಗುರುಶಾಂತ ಗೌತಮ್, ಅಪ್ಪರಾವ ಚಾಲಕರು ಸಹಕರಿಸಿದ್ದಾರೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

