ಪ್ರತಿ ತಿಂಗಳು 5ರೊಳಗೆ ವೇತನ ಪಾವತಿ; ಭರವಸೆ
ಕನ್ನಡಪ್ರಭ ವಾರ್ತೆ ಸಿಂಧನೂರು ಆ.2
ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಐದನೇ ತಾರೀಖಿನೊಳಗಾಗಿ ವೇತನ ಪಾವತಿಸುವುದಾಗಿ ಶಿಶು ಅಭಿವೃದ್ಧಿ ಅಧಿಕಾರಿಗಳ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಮೇಲ್ವಿಚಾರಕಿರಾದ ಸರಸ್ವತಿ ಪಾಟೀಲ್ ಮತ್ತು ಸುನಿತಾ ಭರವಸೆ ನೀಡಿದರು.
ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಅಂಗನವಾಡಿ ಫೆಡರೇಶನ್ ಮುಖಂಡರ ಮತ್ತು ವಿವಿಧ ಅಧಿಕಾರಿಗಳ ಸಭೆಯಲ್ಲಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದರು.
ಇನ್ಜಾರ್ಜ್ ಬಿಲ್ನ್ನು ತಕ್ಷಣ ಮಾಡುಕೊಡುವಂತೆ ತಹಸೀಲ್ದಾರ್ ಸಿಡಿಪಿಒ ಕಚೇರಿಯ ಸಿಬ್ಬಂದಿಗೆ ಸೂಚಿಸಿದರು. ಪ.ಜಾತಿ ಜನಾಂಗದ ಮನೆಗಳ ಸಮೀಕ್ಷೆಯ ಗೌರವಧನವನ್ನು ಕೊಡುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಸಮಾಜ ಕಲ್ಯಾಣ ಸಚಿವ ನಾಗರಾಜ ತಿಳಿಸಿದರು. ಈಗಾಗಲೇ 44 ಸಾವಿರ ಸಿಡಿಪಿಒ ಅವರಿಗೆ ಪಾವತಿಸಿರುವುದಾಗಿ ಹೇಳಿದರು.
ತಾಲೂಕಿನಲ್ಲಿರುವ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಪೌಷ್ಠಿಕ ಮಕ್ಕಳ ತಪಾಸಣೆಗೆ ತಜ್ಞ ವೈದ್ಯರ ಕೊರತೆಯಿರುವುದಾಗಿ ತಾಲೂಕ ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನ್ ಅಸಹಾಯಕತೆ ವ್ಯಕ್ತಪಡಿಸಿದರು. ನಗರದಲ್ಲಿ ಆಶಾಕಾರ್ಯಕರ್ತೆಯರು ಇಲ್ಲದಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಂದ ಅಗತ್ಯ ಸೇವೆ ಪಡೆಯುತ್ತಿರುವುದಾಗಿ ತಾಲೂಕ ಆರೋಗ್ಯಾಧಿಕಾರಿ ಹೇಳಿದರು.
ಕಟ್ಟಿಗೆ ಹಣ, ಬಾಡಿಗೆ ಹಣ, ಮತ್ತಿತರ ಮೂಲ ಸಮಸ್ಯೆಗಳನ್ನು ತಕ್ಷಣ ಸರಿಪಡಿಸುವಂತೆ ತಹಸೀಲ್ದಾರ್ ಕುಮಾರಸ್ವಾಮಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು. ಕ್ಷಯರೋಗಕ್ಕೆ ಆನೆ ಕಾಲು ರೋಗಕ್ಕೆ ಮಾತ್ರೆ ನೀಡಿದ್ದಕ್ಕೆ ಗೌರವಧನವನ್ನು ಕೊಡುವಂತೆ ತಿಳಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ರಮೇಶ, ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಅಂಗನವಾಡಿ ಫೆಡರೇಶನ್ ಡಿ.ಎಚ್. ಕಂಬಳಿ, ತಿಪ್ಪಯ್ಯ ಶೆಟ್ಟಿ, ಯಮನಮ್ಮ, ಶಂಸುನ್ನಿಸಾ ಬೇಗಂ, ವೆಂಕನಗೌಡ ಗದ್ರಟಗಿ, ಚಂದ್ರಶೇಖರ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

