ಶಾಲೆ ಅಭಿವೃದ್ಧಿಗೆ ಎಸ್ಡಿಎಂಸಿ ಸೇವೆ ಅನುಪಮ
ಕನ್ನಡಪ್ರಭ ವಾರ್ತೆ ಸಿಂಧನೂರು ಆ.2
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮುದಾಯನ್ನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದು, ಶಾಲೆಯ ಸಮಗ್ರ ಅಭಿವೃದ್ಧಿಗೆ ಕೇವಲ ಇಲಾಖೆಯೊಂದರಿಂದಲೇ ಸಾಧ್ಯವಿಲ್ಲ. ಶಾಲೆಯಲ್ಲಿನ ಎಸ್ಡಿಎಂಸಿಯ ಸೇವೆ ಅನುಪಮ ಎಂದು ಬಿಆರ್ಸಿ ಸಮನ್ವಯಾಧಿಕಾರಿ ಆದಪ್ಪ ಹೆಂಬಾ ಶ್ಲಾಘಿಸಿದರು.
ಕನಕನಗರ ಸಿಆರ್ಸಿ ವ್ಯಾಪ್ತಿಯ ಮಹೆಬೂಬಿಯಾ ಕಾಲೋನಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮುದಾಯದ ವತಿಯಿಂದ ನಿರ್ಮಾಣವಾದ ಕಾಂಪೌಂಡ್ ಸಮರ್ಪಣ ಸಮಾರಂಭದಲ್ಲಿ ಮಾತನಾಡಿದರು. ಶಾಲೆಯ ಅಭಿವೃದ್ಧಿಗೆ ಸಮುದಾಯವು ಸಕರಾತ್ಮಕವಾಗಿ ಸ್ಪಂದಿಸಿದಾಗ ಶೈಕ್ಷಣಿಕವಾಗಿ ಅಭಿವೃದ್ಧಿಹೊಂದಲು ಸಾಧ್ಯ. ಸರ್ಕಾರಿ ಶಾಲೆಗಳಿಗೆ ದಾನ ಧರ್ಮ ಮಾಡುವಂತಹವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಲ್ಲಿನ ಎಸ್ಡಿಎಂಸಿ ಅಧ್ಯಕ್ಷರು, ಶಿಕ್ಷಣ ಪ್ರೇಮಿಗಳು ಎಸ್ಡಿಎಂಸಿ ಸದ್ಯಸರು ಸೇರಿ ಕಂಪೌಂಡ್ ನಿರ್ಮಿಸಿಕೊಂಡಿರುವುದು ಅಭಿನಂದನೀಯ ಎಂದರು.
ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಹುಸೇನಪ್ಪ ಮಾತನಾಡಿ, ಕೆಲವು ಮೂಲಸೌಲಭ್ಯಗಳ ಕೊರತೆ ಇರುವ ಈ ಶಾಲೆಗೆ ಇಲ್ಲಿಯ ಪಾಲಕರು, ಶಿಕ್ಷಣ ಪ್ರೇಮಿಗಳು, ಎಸ್ಡಿಎಂಸಿಯವರು ಸೇರಿಕೊಂಡು ಶಾಲೆಗೆ ಆಗತ್ಯವಾದ ಸೌಲಭ್ಯಗಳನ್ನು ಒದಗಿಸಿಕೊಡುತ್ತಿರುವುದು ಅನುಕರಣೀಯ ಎಂದರು.
ನಿವೃತ್ತ ತಹಸೀಲ್ದಾರ್ ಮಹಾಬಳೇಶ್ವರಸ್ವಾಮಿ ಮಾತನಾಡಿ, ಇಲಾಖೆಯ ಅಧಿಕಾರಿಗಳು ವಾರ್ಡ್ನ ನಾಗರಿಕರ ಸಹಕಾರದಿಂದ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ ಎಂದರು.
ಕನಕನಗರ ಸಿಆರ್ಪಿ ವೀರೇಶ ಗೋನವಾರ ಮಾತನಾಡಿ, ಕಳೆದ ಸಾಲಿನಲ್ಲಿ ನಡೆದ ಶಾಲೆಗಾಗಿ ನಾವು-ನೀವು ಹಾಗೂ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಮಂಡಿಸಿದ ಶಾಲೆಯಲ್ಲಿರುವ ಕೊರತೆಯನ್ನು ಇಲ್ಲಿನ ಎಸ್ಡಿಎಂಸಿ ಸಮುದಾಯದವರು ನೆರವೇರಿಸಿರುವುದು ಸಂತೋಷಕರ. ಮುಂದಿನ ದಿನಗಳಲ್ಲೂ ಶಾಲೆಯ ಅಭಿವೃದ್ಧಿಗೆ ಸದಾ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಿ.ಶಿವಪ್ಪ ವಹಿಸಿದ್ದರು. ಶಾಲಾ ಎಸ್ಡಿಎಂಸಿ ಸದಸ್ಯರಾದ ಅನ್ವರ್ಬಾಷಾ, ತುಳುಸಮ್ಮ, ಈರಣ್ಣ ಹೂಗಾರ್, ಎಸ್.ಎಂ.ರಾಜು, ಪರಶುರಾಮ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಿವಶರಣಮ್ಮ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕಿ ಭೀಮಬಾಯಿ ವಂದಿಸಿದರು.
ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಟ್ಟ ಮಹನೀಯರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

