ರಾಯಚೂರು

ಬಸವ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ

Published On :

ಸಿಂಧನೂರು: ನಗರದ ಪ್ರತಿಷ್ಠಿತ ಬಸವ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಗೋವಿಂದರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ 2012- 13ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ 2013- 2015ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಬಸವರಾಜ ಸಾಹುಕಾರ ತುರ್ವಿಹಾಳ, ಕಾರ್ಯಾಧ್ಯಕ್ಷರಾಗಿ ಮುದ್ದನಗೌಡ ಪಾಟೀಲ್ ಬಸಾಪುರ(ಇಜೆ), ಕಾರ್ಯದರ್ಶಿಯಾಗಿ ಶಂಬನಗೌಡ ನಿಡಿಗೋಳ, ಸಹಕಾರ್ಯದರ್ಶಿಗಳಾಗಿ ವೀರನಗೌಡ ಸಣ್ಣಗೌಡ್ರು ಬಸಾಪುರ(ಇಜೆ), ಮಲ್ಲಪ್ಪ ಶಿಕ್ಷಕರು ಉಪ್ಪಲದೊಡ್ಡಿ, ಖಜಾಂಚಿಯಾಗಿ ಸೋಮಶೇಖರ ಚಿಂಚರಿಕಿ ಆಯ್ಕೆಯಾಗಿದ್ದಾರೆ.
ಆಯವ್ಯಯ ಪತ್ರಕ್ಕೆ ಅನುಮೋದನೆ: ಇದಕ್ಕೂ ಮುನ್ನ 2012- 13ನೇ ಸಾಲಿನ ಲೆಕ್ಕಪತ್ರ ಪರಿಶೀಲನೆ, 2011- 12ನೇ ಸಾಲಿನ ಆಡಿಟ್ ರಿಪೋರ್ಟ ಹಾಗೂ 2013- 14ನೇ ಸಾಲಿನ ಅಂದಾಜು ಆಯವ್ಯಯ ಪತ್ರಿಕೆಗೆ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು. ನಿಕಟಪೂರ್ವ ಅಧ್ಯಕ್ಷ ಬಸನಗೌಡ ಕೆಲ್ಲೂರು, ಗುಂಡೆಗೌಡ ಲಕ್ಕಂಪುರ, ಶರಣೇಗೌಡ ದೇವರೆಡ್ಡಿ, ಪಂಪಾಪತೆಪ್ಪ ಕೆಸರಟ್ಟಿ ಕೆ. ಹೊಸಳ್ಳಿ, ವೀರನಗೌಡ ಸಣ್ಣಗೌಡ, ಸೋಮಶೇಖರ ಚಿಂಚರಿಕಿ ವೇದಿಕೆಯಲ್ಲಿದ್ದರು.
ವೀರಭದ್ರಪ್ಪ ಕುರುಕುಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಜಿ. ಹಂಪಣ್ಣ ನಿರೂಪಿಸಿದರು. ಶಂಬನಗೌಡ ನಿಡಿಗೋಳ ವಾರ್ಷಿಕ ವರದಿ ಓದಿದರು. ಪಂಪನಗೌಡ ಮಲ್ಲಾಪುರ ಸ್ವಾಗತಿಸಿದರು. ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.