ನಿಸ್ವಾರ್ಥ ಸೇವೆಗೆ ಸಂಪಾದನೆ ವಿನಿಯೋಗಿಸಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಆ.5
ಸಮಾಜದಲ್ಲಿ ದೇವರ ಆಶೀರ್ವಾದದಿಂದ ನಾವು ಆಸ್ತಿ- ಅಂತಸ್ತು, ವಜ್ರ ವೈಢೂರ್ಯಗಳನ್ನು ಸಂಪಾದಿಸಬಹುದು. ಆದರೆ ಸಂಪಾದಿಸಿದ್ದರಲ್ಲಿ ಹೆಚ್ಚಿನದನ್ನು ನಿಸ್ವಾರ್ಥದಿಂದ ಸೇವೆ ಮಾಡಬೇಕೆಂದು ಹುಬ್ಬಳ್ಳಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ಮಟ್ಟಿ ಸಾಹುಕಾರ ಹೇಳಿದರು.
ತಾಲೂಕಿನ ಅಂಬಾಮಠದಲ್ಲಿರುವ ಅಂಬಾದೇವಿ ಎಜ್ಯುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ನ ವತಿಯಿಂದ ಅಂಬಾದೇವಿ ದಾಸೋಹ ಮಂಟಪದಲ್ಲಿ ಹಮ್ಮಿಕೊಂಡಿದ್ದ ನೀರು ಶುದ್ಧೀಕರಣ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀರು ಅತ್ಯಮೂಲ್ಯ: ನೀರು ಶುದ್ಧೀಕರಣ ಘಟಕವನ್ನು ದಾನವಾಗಿ ನೀಡಿದ್ದೇನೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳೆಲ್ಲರೂ ಪಡೆದುಕೊಳ್ಳಬೇಕು. ನೀರು ಜೀವನಕ್ಕೆ ಅತ್ಯಮೂಲ್ಯವಾದ ವಸ್ತು. ಆದ್ದರಿಂದ ಹಾಳು ಮಾಡಬೇಡಿ. ಮುಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ವಿದ್ಯಾಥಿಗಳು ಉನ್ನತ ಶಿಕ್ಷಣ ಪಡೆದು ನೀವುಗಳು ಕಲಿತ ಶಾಲೆಗೆ ದಾನದ ರೂಪದಲ್ಲಿ ಏನಾದರೂ ನೀಡಬೇಕೆಂದು ಕಿವಿಮಾತು ಹೇಳಿದರು.
ಗ್ರಾಮದ ಹಿರಿಯ ಮುಖಂಡ ಕಲ್ಯಾಣಪ್ಪ ಮಾತನಾಡಿ, ಗಾಳಿಯನ್ನು ಪ್ರಕೃತಿಯು ಉಚಿತವಾಗಿ ನೀಡುತ್ತದೆ. ಆದರೆ ಶುದ್ಧ ನೀರನ್ನು ನೀಡುವುದಿಲ್ಲ. ಆದರಿಂದ ಚಂದ್ರಶೇಖರ ಮಟ್ಟಿಯವರು 8 ತಾಸಿಗೆ 2 ಸಾವಿರ ಲೀಟರ್ ಶುದ್ಧ ನೀರನ್ನು ನೀಡುವ ಯಂತ್ರವನ್ನು ದಾನವಾಗಿ ನೀಡಿದ್ದಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರ ಸಹೋದರ ರಾಜುಗೌಡ ಬಾದರ್ಲಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಂ.ಕಾಳಿಂಗಪ್ಪ ವಕೀಲರು ವಹಿಸಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ದಾನಿಗಳಾದ ಹುಬ್ಬಳ್ಳಿಯ ಚಂದ್ರಶೇಖರ ಮಟ್ಟಿ ಸಾಹುಕಾರ, ಶಾಸಕರ ಸಹೋದರ ರಾಜುಗೌಡ ಬಾದರ್ಲಿ, ಕಲ್ಯಾಣಪ್ಪ, ಮುದ್ದೇಗೌಡ, ಎಂ.ಕಾಳಿಂಗಪ್ಪ ಸೇರಿದಂತೆ ಇನ್ನಿತರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಸೋಮಲಾಪುರದ ಗ್ರಾಪಂ ಅಧ್ಯಕ್ಷ ವೀರರಾಜು, ಗೌರಮ್ಮ ಶರಣಬಸವ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಮುಕ್ಕುಂದಾ, ಮುಖಂಡರಾದ ಕಲ್ಯಾಣಪ್ಪಗೌಡ ರೌಡಕುಂದಾ ಸೇರಿದಂತೆ ಸೋಮಲಾಪುರ ಗ್ರಾಪಂ ಸರ್ವ ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

