ರಾಯಚೂರು

ಅಪಘಾತ: ಸ್ಥಳದಲ್ಲೇ ವ್ಯಕ್ತಿ ಸಾವು

Published On :

ಮುದಗಲ್: ಸಮೀಪದ ನಾಗಲಾಪುರ ಬಳಿ ಬುಲೆರೋ ವಾಹನ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ದುರ್ದೈವಿ ಛತ್ರಪ್ಪ ಹೆಗ್ಗಾಪುರ ತಾಂಡಾ ಎಂದು ಗುರುತಿಸಲಾಗಿದೆ.
ಮುದಗಲ್ ಗಂಗಾವತಿ ರಸ್ತೆಯನ್ನು ಕೆಎನ್‌ಆರ್ ಕಂಪನಿಯವರು ನಿರ್ವಹಿಸುತ್ತಿದ್ದು, ನಾಗಲಾಪುರ ಬಳಿ, ಗ್ರಾಪಂ ಹತ್ತಿರ ಒಂದೇ ಕಡೆ ರಸ್ತೆ ನಿರ್ಮಿಸಿದ್ದರಿಂದ ಎದುರು ಬದುರು ವಾಹನಗಳು ಬಂದಿದ್ದರಿಂದ ಅದೇ ಸಮಯದಲ್ಲಿ ದ್ವಿಚಕ್ರ ವಾಹನ ಎದುರು ಬುಲೆರೋ ವಾಹನಕ್ಕೆ ಬಂದಿದ್ದರಿಂದ ಇಕ್ಕಟ್ಟಾದ ರಸ್ತೆಯ ಪಕ್ಕ ಛತ್ರಪ್ಪ ನಾಗಲಾಪುರ ಕಡೆಗೆ ಬರುತ್ತಿದ್ದ. ಅದೇ ಸಮಯದಲ್ಲಿ ಚಾಲಕ ವಾಹನವನ್ನು ಚಾಲಿಸಿದ್ದರಿಂದ ವ್ಯಕ್ತಿ ಮೃತಪಟ್ಟಿದ್ದಾನೆ.
ನಾಗರಿಕರ ಆಕ್ರೋಶ: ನಾಗಲಾಪುರ ಗ್ರಾಪಂ ಬಳಿ ಕೆಎನ್‌ಆರ್ ಕಂಪನಿ ನಿರ್ಮಿಸುತ್ತಿರುವ ರಸ್ತೆಯನ್ನು ಒಂದೇ ಬದಿ ನಿರ್ಮಿಸಿದ್ದು, ಇನ್ನೊಂದು ಬದಿಯನ್ನು ನಿರ್ಮಿಸಿ ಬಹು ತಿಂಗಳಿಂದ ನೆನಗುದಿಗೆ ಬಿಟ್ಟಿರುವದರಿಂದ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಈ ಅಪಘಾತಕ್ಕೆ ಕೆಎನ್‌ಆರ್ ಕಂಪನಿಯವರು ರಸ್ತೆಯನ್ನು ನಿರ್ಮಿಸುವಲ್ಲಿ ನಿರ್ಲಕ್ಷ್ಯ ಭಾವನೆ ತಾಳಿರುವುದೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ.
ಡಿಕ್ಕಿ: ಬೈಕ್ ಸವಾರ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಹಟ್ಟಿ ಬಳಿ ಬೈಕ್‌ಗಳ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ವ್ಯಕ್ತಿ ಸಾವಿಗೀಡಾಗಿದ್ದಾನೆ. ಮೃತನನ್ನು ಶರಣಬಸವ ಎಂದು ಗುರುತಿಸಲಾಗಿದೆ. ಈತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡ ಶರಣಬಸವನನ್ನು ಲಿಂಗಸ್ಗೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದಾನೆಂದು ತಿಳಿಸಿದ್ದಾರೆ. ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಬಾಲಕ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಅನ್ವರಿ ಗ್ರಾಮದ ಹೊರವಲಯದ ಹೊಲದಲ್ಲಿ ಹಾವು ಕಡಿದು ಬಾಲಕ ಸಾವಿಗೀಡಾಗಿದ್ದಾನೆ. ಮೃತನನ್ನು ಶಿವರಾಜ(5) ಎಂದು ಗುರುತಿಸಲಾಗಿದೆ. ಈತ ಹೊಲದಲ್ಲಿನ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಹಾವು ಕಡಿದಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿದರೂ ಫಲಿಸದೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಬಾಲಕಿ ಸಾವು
ದೇವದುರ್ಗ: ತಾಲೂಕಿನ ಮುದಗೋಟ ಗ್ರಾಮದಲ್ಲಿ ಮಂಗಳವಾರ ಸಹೋದರಿಯರಿಗೆ ಹಾವು ಕಚ್ಚಿದ್ದರಿಂದ ತಂಗಿ ಕೊನೆಯುಸಿರೆಳೆದಿದ್ದಾಳೆ. ಆಕೆಯ ಅಕ್ಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೃತಳನ್ನು ರಂಗಮ್ಮ(10) ಎಂದು ಗುರುತಿಸಲಾಗಿದೆ.
   ಈಕೆ ತನ್ನ ಅಕ್ಕ ಗಂಗಮ್ಮ ಎಂಬಾಕೆಯೊಂದಿಗೆ ಮನೆಯಲ್ಲಿದ್ದಾಗ ಹಾವು ಕಚ್ಚಿದ್ದು, ರಂಗಮ್ಮ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ತೀವ್ರ ಅಸ್ವಸ್ಥಗೊಂಡ ಗಂಗಮ್ಮಳನ್ನು ಹಟ್ಟಿ ಆಸ್ಪತ್ರೆಗೆ ದಾಖಲಿಸಿ ನಂತರ ರಾಯಚೂರಿನ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆರೋಪ: ಜಾಲಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಔಷಧಿ ಲಭ್ಯವಿಲ್ಲದ್ದರಿಂದಲೇ ಬಾಲಕಿ ರಂಗಮ್ಮಳ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿ, ಹಾವು ಕಡಿತದಿಂದ ಈಗಾಗಲೇ ಅನೇಕರು ಸೂಕ್ತ ಚಿಕಿತ್ಸೆ ದೊರೆಯದೇ ಪ್ರಾಣ ಕಳೆದುಕೊಂಡಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.