ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವಕ್ಕೆ ಆಗ್ರಹ
ರಾಯಚೂರು: ನಗರದಲ್ಲಿ 15ರಂದು ನಡೆಯುವ ಸ್ವಾತಂತ್ರೋತ್ಸವ ಪ್ರಮುಖ ಸಮಾರಂಭವನ್ನು ರಾಯಚೂರು ಕೃಷಿ ವಿವಿ ಆವರಣದ ಬದಲಿಗೆ ಎಂದಿನಂತೆಯೇ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸುವಂತೆ ರಾಯಚೂರು ಜಿಲ್ಲಾ ಕ್ರೀಡಾ ಅಸೋಸಿಯೇಷನ್ ಒತ್ತಾಯಿಸಿದೆ.
ಈ ಬಗ್ಗೆ ಬುಧವಾರ ಸಂಘಟನೆಯ ಪ್ರಮುಖರು ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಳೆದ 10ವರ್ಷಗಳಿಂದಲೂ ಸ್ವಾತಂತ್ರೋತ್ಸವ ಸಮಾರಂಭವು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕೇವಲ ಆಗಸ್ಟ್ ಸಂದರ್ಭದಲ್ಲಿ ಮಾತ್ರ ಜಿಲ್ಲಾ ಕ್ರೀಡಾಂಗಣದ ದುಸ್ಥಿತಿಯ ಬಗ್ಗೆ ವಿಷಯ ಪ್ರಸ್ತಾಪಿಸಲಾಗುತ್ತದೆ ಎಂದು ಟೀಕಿಸಿದರು.
ಜಿಲ್ಲಾಡಳಿತ ನಿರ್ಧಾರ: ಪ್ರಸಕ್ತ ವರ್ಷ ಸ್ವಾತಂತ್ರೋತ್ಸವ ಸಮಾರಂಭವನ್ನು ಜಿಲ್ಲಾ ಕ್ರೀಡಾಂಗಣ ಬದಲಿಗೆ ಕೃಷಿ ವಿವಿ ಕ್ರೀಡಾಂಗಣದಲ್ಲಿ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಆಡಳಿತದ ನಿರ್ಧಾರ ಸಮಂಜಸವಲ್ಲ. ಆ. 15 ರಂದು ನಡೆಯುವ ಸಮಾರಂಭದಲ್ಲಿ 5ಸಾವಿರ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ ಮಕ್ಕಳನ್ನು ಕೃಷಿ ವಿವಿವರೆಗೆ ಕರೆದೊಯ್ಯುವುದು ಸರಿಯಾದ ನಿರ್ಧಾರವಲ್ಲ. ಅದರಿಂದ ಸಂಚಾರಿ ದಟ್ಟಣೆ ಆಗುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ಸಂಚಾರ ಸಮಸ್ಯೆ: ಜಿಲ್ಲಾಡಳಿತವು ಮಕ್ಕಳನ್ನು ಕೃಷಿ ವಿವಿಗೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಿರುವುದಾಗಿ ಹೇಳಿದೆ. ಆದರೆ ಬಸ್ ಗಳು ಕೃಷಿ ವಿವಿ ತಲುಪಲು ಸಮಸ್ಯೆಯಿದೆ. ಸದ್ಯ ನಗರದ ಬಸವೇಶ್ವರ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿದ್ದು, ಹಾಗಾಗಿ ಎಲ್ಲ ವಾಹನಗಳು ಸದ್ಯ ವಿದ್ಯಾಭಾರತಿ ಶಾಲೆಯ ಬಳಿಯ ರೇಲ್ವೆ ಗೇಟ್ ಬಳಿಯೇ ಸಾಗಬೇಕಿದೆ. ಅದರಿಂದ ದಿನವೂ ಅನೇಕ ಸಾರಿ ವಾಹನಗಳು ಗೇಟ್ ಬಳಿ ಕಾದು ನಿಲ್ಲುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಸ್ಗಳ ಮೂಲಕ ಮಕ್ಕಳ ಸಾಗಣೆ ಕಷ್ಟವಾಗಲಿದೆ ಎಂದು ದೂರಿದರು.
ನಗರದ ಜಿಲ್ಲಾ ಕ್ರೀಡಾಂಗಣವು ಕಳೆದ ನಾಲ್ಕೈದು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. ಆದರೂ ಮುನ್ನೆಚ್ಚರಿಕೆ ವಹಿಸಿ ಅನೇಕ ಕ್ರೀಡಾಕೂಟ ಆಯೋಜಿಸಲಾಗಿದೆ. ಈಗಲೂ ಮುನ್ನೆಚ್ಚರಿಕೆ ವಹಿಸಿ ಕಾರ್ಯಕ್ರಮ ಆಯೋಜಿಸಬಹುದಾಗಿದೆ ಎಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

