ರಾಯಚೂರು

ಪೌರ ನೌಕರರ ಸಂಘಕ್ಕೆ ದುರುಗಪ್ಪ ಅಧ್ಯಕ್ಷ

Published On :

ಸಿಂಧನೂರು:  ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸಿಂಧನೂರು ನಗರಸಭೆಯ ಘಟಕಕ್ಕೆ 2013-18 ಸಾಲಿಗೆ ನೂತನ ಅಧ್ಯಕ್ಷರಾಗಿ ಎಸ್‌ಜೆಆರ್‌ವೈನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದುರುಗಪ್ಪ ಹಸಮಕಲ್ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.
ಮಂಗಳವಾರ ನಗರಸಭೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಈ ಕೆಳಕಂಡಂತೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆ.ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸತ್ಯನಾರಾಯಣ, ಖಜಾಂಚಿಯಾಗಿ ಡಿ.ವೀರೇಶ, ಜಂಟಿ ಕಾರ್ಯದರ್ಶಿಯಾಗಿ ಶೇಖರಪ್ಪ, ಸಂಘಟನಾ ಕಾರ್ಯದರ್ಶಿ ಯಾಗಿ ಕೆ.ಮಂಜು, ಜಿಲ್ಲಾ ಸಮಿತಿ ನಿರ್ದೇಶಕರಾಗಿ ಕೆ.ಗುಂಡಪ್ಪ ಸಾಲಗುಂದಾ, ಬಸವರಾಜ ದೇವರಗುಡಿ, ಅಮರೇಶ, ಯಲ್ಲಮ್ಮ, ಮರಿಸ್ವಾಮಿ, ಕಾನೂನು ಸಲಹೆಗಾರರಾಗಿ ಗುರುರಾಜ ಸೌದಿ, ಅಯ್ಯಪ್ಪ, ಟಿ.ಯಮನಪ್ಪ, ಆಂತರಿಕ ಲೆಕ್ಕ ಪರಿಶೋಧಕರಾಗಿ ಗೌಡಪ್ಪ ಆಯ್ಕೆಯಾದರು.
ಇನ್ನೂ ನಿರ್ದೇಶಕರಾಗಿ ನೈರ್ಮಲ್ಯ ವಿಭಾಗದಿಂದ ಹುಲಗುಪ್ಪ, ಕಂಠೆಪ್ಪ, ಚಿನ್ನಪ್ಪ, ಬಾಲಪ್ಪ, ಶಿವಮಹಾದೇವಮ್ಮ, ಯಲ್ಲಮ್ಮ, ಕಂದಾಯ ವಿಭಾಗದಿಂದ ರಾಮಕೃಷ್ಣ, ಕಚೇರಿ ವಿಭಾಗದಿಂದ ಹೇಮಣ್ಣ, ಅಬ್ದುಲ್, ನೀರಿನ ವಿಭಾಗದಿಂದ ವೀರೇಶ, ಸೇವಕ ವಿಭಾಗದಿಂದ ಪರಶುರಾಮ, ಮಹಿಬೂಬ್, ಡ್ರೈವರ್ ವಿಭಾಗದಿಂದ ಮಹಿಬೂಬ್, ಮಂಜು ಆಯ್ಕೆಯಾದರು. ಕಾಯಂ, ದಿನಗೂಲಿ ನೌಕರರು ಸೇರಿದಂತೆ 200ಕ್ಕೂ ಹೆಚ್ಚು ನೌಕರರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚುನಾವಣಾಧಿಕಾರಿ ಗುರುರಾಜ ಸೌದಿ ಕಾರ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.