ಕೂಲಿಕಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಧರಣಿ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಆ.14
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಹಣ ಹಾಗೂ ಕೆಲಸ ನೀಡಬೇಕೆಂಬ ಬೇಡಿಕೆ ಸೇರಿದಂತೆ ಕೂಲಿ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ನೇತೃತ್ವದಲ್ಲಿ ಬುಧವಾರ ತಾಪಂ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು.
ವಿವಿಧ ಕಾಮಗಾರಿ: ತಾಲೂಕಿನ ಮಾವಿನಬಾವಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಹಾಗೂ ಕೃಷಿ ಹೊಂಡ, ಕಳ್ಳಿ ಲಿಂಗಸ್ಗೂರು ಗ್ರಾಮದ ರೇಷ್ಮೆ ಹೊಲದಲ್ಲಿ ಟ್ರಂಚಿಂಗ್ ಮಂಚಿಂಗ್, ಸಸಿ ನೆಡುವುದು, ಒಡ್ಡು ಹಾಕುವುದು. ಕೋಠಾ ಗ್ರಾಪಂ ವ್ಯಾಪ್ತಿಯ ಮೇದಿನಾಪೂರ ಗ್ರಾಮದ ಹೊಲದಲ್ಲಿ ಒಡ್ಡು ಹಾಕುವುದು ಹಾಗೂ ಕೋಠಾ ಗ್ರಾಮದಲ್ಲಿ ಜಂಗಲ್ ಕಟಿಂಗ್ ಕಾಮಗಾರಿ, ಹೊನ್ನಳ್ಳಿ ಗ್ರಾಪಂ ವ್ಯಾಪ್ತಿಯ ಯರಡೋಣಾ ಗ್ರಾಮದ ಹಳ್ಳದವರೆಗೆ ರಸ್ತೆ ಸುಧಾರಣೆ ಮತ್ತು ಕಲ್ಪಿಚ್ಚಿಂಗ್ ಕಾಮಗಾರಿ, ಕನ್ನಾಳ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ ಗ್ರಾಮದ ಹೊಲದಲ್ಲಿ ತೆಂಗಿನ ಸಸಿ ನೆಡುವುದು, ಕೃಷಿ ಹೊಂಡ ನಿರ್ಮಿಸುವುದು. ಮೆದಿಕಿನಾಳ ಗ್ರಾಪಂ ವ್ಯಾಪ್ತಿಯ ಮೆದಿಕಿನಾಳ ಗ್ರಾಮದ ಗುಡ್ಡದಲ್ಲಿ ಸಸಿ ನೆಡುವುದು. ಬಯ್ಯಾಪೂರ ಗ್ರಾಪಂ ವ್ಯಾಪ್ತಿಯ ಕೋಮನೂರ ಗ್ರಾಮದ ಹೊಲದಲ್ಲಿ ಸಸಿ ನೆಡುವುದು ಸೇರಿದಂತೆ ಕೈಗೊಂಡ ಕಾಮಗಾರಿಗಳಿಗೆ ವೇತನ ನೀಡಿಕೆಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮಗಳು: ಮಟ್ಟೂರ ಗ್ರಾಪಂ ವ್ಯಾಪ್ತಿಯ ಮಟ್ಟೂರು, ಕನ್ನಾಳ ಗ್ರಾಪಂ ವ್ಯಾಪ್ತಿಯ ಮೂಡಲದಿನ್ನಿ, ಸುಲ್ತಾನಪೂರ, ಜಕ್ಕೇರಮಡು, ತಿಮ್ಮಾಪೂರ, ವ್ಯಾಸನಂದಿಹಾಳ, ಹೊನ್ನಳ್ಳಿ ಗ್ರಾಪಂ ವ್ಯಾಪ್ತಿಯ ಹೊನ್ನಳ್ಳಿ, ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ನಿಲೋಗಲ್ ಸೇರಿದಂತೆ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸಿದರೂ, ಇದುವರೆಗೆ ಕೆಲಸ ನೀಡುತ್ತಿಲ್ಲ. ಮಾವಿನಬಾವಿ ಗ್ರಾಪಂ ವ್ಯಾಪ್ತಿಯ ಕಳ್ಳಿ ಲಿಂಗಸ್ಗೂರು ಗ್ರಾಮದ ಕೂಲಿ ಕಾರ್ಮಿಕರು ಜಾಬಬ್ಕಾರ್ಡಗೆ ಅರ್ಜಿ ಸಲ್ಲಿಸಿದರೂ ಇದುವರೆಗೆ ನೀಡಿಲ್ಲ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಸದರಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗ್ರಾಕೂಸ್ ಸಂಘಟನೆ ಜಿಲ್ಲಾ ಸಂಚಾಲಕ ಶರಣಗೌಡ, ತಾಲೂಕು ಸಂಚಾಲಕರಾದ ಶಾಂತಮ್ಮ, ಗುಂಡಪ್ಪ ಯರಡೋಣಿ, ಮುಖಂಡರಾದ ಬಸವರಾಜ, ನಾಗರಾಜ, ಆನಂದ, ಛತ್ರಪ್ಪ ಕನ್ನಾಳ, ವೆಂಕನಗೌಡ, ಷಡಕ್ಷರಯ್ಯ, ತಿಮ್ಮಣ್ಣ, ಹನುಮಮ್ಮ, ಅಂಬಮ್ಮ, ಹುಲಿಗೆಮ್ಮ, ರೇಣುಕಾ ಮೇದಿನಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

