ನಗರದ ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಕನ್ನಡಪ್ರಭ ವಾರ್ತೆ , ರಾಯಚೂರು , ಆ.16
ಜಿಲ್ಲೆಯಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸ್ತರಗಳ ಜನಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಕರೆ ನೀಡಿದರು.
ಅವರು ಗುರುವಾರ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಸಾಕ್ಷರತಾ ವಿಧಿ ಬೋಧಿಸಿ ಮಾತನಾಡಿ, ಜಿಲ್ಲೆಯ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವ ಜತೆಗೆ ಮಹಿಳಾ ಸಾಕ್ಷರತೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸುವಂತೆ ಸಲಹೆ ನೀಡಿದರು.
ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ, ತಾಪಂ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಸಿಇಒ ಡಾ.ಮುದ್ದುಮೊಹನ್, ಉಪಕಾರ್ಯದರ್ಶಿ ಮಹ್ಮದ್ ಯೂಸೂಫ್, ಮುಖ್ಯಯೋಜನಾಧಿಕಾರಿ ಡಾ.ಟಿ. ರೋಣಿ, ನಾಗೇಂದ್ರಪ್ಪ ಮಟಮಾರಿ, ಚಾಂದಪಾಷಾ, ಸದಾನಂದ ಪೂಜಾರ್ ಹಾಗೂ ಸಾಕ್ಷರತಾ ಕಾರ್ಯಕರ್ತರು ಇದ್ದರು.
ತರಬೇತಿ ಸಂಸ್ಥೆ: ಸಮೀಪದ ಯರಮರಸ್ ನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಪ್ರಾಚಾರ್ಯ ಡಾ. ಟಿ. ರೋಣಿ ಧ್ವಜಾರೋಹಣ ನೇರವೇರಿ ಸಿದರು. ಉಪ ಪ್ರಾಚಾರ್ಯ ಅಶ್ವಥ ನಾರಾಯಣ ಮತ್ತು ಸಿಬ್ಬಂದಿಯಿದ್ದರು.
ಬಿಜೆಪಿ ಕಚೇರಿ: ನಗರದ ಭಾರತೀಯ ಜನತಾ ಪಾರ್ಟಿ ಪಕ್ಷದ ಕಚೇರಿಯಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಸಂದರ್ಭ ರಾಷ್ಟ್ರ ಧ್ವಜಾರೋಹಣ ಸಮಾರಂಭ ಆಯೋಜಿಸಲಾಗಿತ್ತು. ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ತ್ರಿವಿಕ್ರಮ್ ಜೋಷಿ, ಆರ್. ತಿಮ್ಮಯ್ಯ, ನರಸಪ್ಪ ಎಕ್ಲಾಸಪುರ ಸೇರಿ ಅನೇಕರಿದ್ದರು.
ಲಯನ್ಸ್ ಶಾಲೆ: ನಗರದ ಲಯನ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷ ಅಶೋಕ ಪಾಟೀಲ್ ಅತ್ತನೂರು ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕಲ್ಯಾಣಕರ್ ಶಿವಪ್ರತಾಪ್, ಶಾಲೆಯ ಕಾರ್ಯದರ್ಶಿ ಶರಣಭೂಪಾಲ ನಾಡಗೌಡ, ಎ.ಗುಂಡಪ್ಪ, ಕೆ. ಕೃಷ್ಣ ಮತ್ತು ಶಾಲೆಯ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು.
ವೀರಶೈವ ಸಮಾಜ: ಜಿಲ್ಲಾ ವೀರಶೈವ ಸಮಾಜದಿಂದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಗುಮಗೇರಿ ಮಹಾಂತಗೌಡರು ಧ್ವಜಾರೋಹಣ ನೆರವೇರಿಸಿ ಮಾತ ನಾಡಿ, ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ದೇಶಾಭಿಮಾನ ಬೆಳೆಸಿಕೊಂಡು ದೇಶದ ಪ್ರಗತಿಗೆ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು. ಸಮಾರಂಭದಲ್ಲಿ ಸಮಾಜದ ಗೌರವಾಧ್ಯಕ್ಷ ಡಾ.ಎಸ್.ಬಿ. ಅಮರಖೇಡ್, ಅಮರೇಗೌಡ ಕಾರ್ಲಕುಂಟಿ, ಬಸವರಾಜಪ್ಪ ವಕೀಲರು, ಷಣ್ಮುಖಪ್ಪ ವೆಂಕಟಾಪುರ, ರಾಜೇಂದ್ರ ಪಾಟೀಲ್, ಸಿ.ಬಿ.ಪಾಟೀಲ್, ಪಂಪನಗೌಡ ಹೊಸಪೇಟೆ, ಅಯ್ಯನಗೌಡ ವಕೀಲರು ಸೇರಿ ಅನೇಕರಿದ್ದರು.
ವಾಹನ ಚಾಲಕರ ಸಂಘ: ಜಿಲ್ಲಾ ಲಘು ಮೋಟಾರ್ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನಗರಸಭೆ ಸದಸ್ಯ ಗೋವಿಂದ ಅವರು ಧ್ವಜಾರೋಹಣ ನೆರವೇರಿಸಿದರು. ನೇತಾಜಿ ನಗರದ ಶಾಲೆಯ ಮುಖ್ಯಗುರುಗಳು ಹಾಗೂ ವಿದ್ಯಾರ್ಥಿಗಳಿದ್ದರು. ಸಂಘದ ಅಧ್ಯಕ್ಷ ಎಂಡಿ ಅನೀಫ್ ಇದ್ದರು.
ನಂದಿನಿ ಸ್ಮಾರಕ ಸಂಸ್ಥೆ: ನಗರದ ಡಾ.ನಂದಿನಿ ನರಸಿಂಹಲು ಸ್ಮಾರಕ ಎಜುಕೇಷನಲ್ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ಹಿರಿಯ ಸದಸ್ಯ ಡಾ.ವಿರೂಪಾಕ್ಷಿ ಮಾತನಾಡಿದರು. ಡಾ.ಡಿ.ಎಚ್. ಜಗದೀಶ್, ಶ್ರೀರಾಮುಲು ಸೇರಿ ಉಪನ್ಯಾಸಕರು, ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು.
ಜಯ ಕರ್ನಾಟಕ: ನಗರದಲ್ಲಿ ಗುರುವಾರ ಜಯ ಕರ್ನಾಟಕ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ನಗರದ ಮಾವಿನಕೆರೆ ಹತ್ತಿರ ಧ್ವಜಾರೋಹಣವನ್ನು ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರಾಕೇಶ್ ನೆರೇವರಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾಧ್ಯಕ್ಷ ಶಿವುಕುಮಾರ್ ಯಾದವ್, ರವಿಕುಮಾರ್ ಬಿಂದಲಬಾವಿ, ಈರಣ್ಣ, ನಾಗರಾಜ ಇದ್ದರು.
ಮಮದಾಪುರ: ತಾಲೂಕಿನ ಮಮದಾಪುರ ಗ್ರಾಮದ ಗ್ರಾಪಂನ ಲೋಕಶಿಕ್ಷಣ ಸಮಿತಿವತಿಯಿಂದ ಸ್ವಾತಂತ್ರ್ಯೋತ್ಸವಹಾಗೂ ಸಾಕ್ಷರತಾ ದಿನಾಚರಣೆ ಆಯೋಜಿಸಲಾಗಿತ್ತು. ಗ್ರಾಪಂ ಅಧ್ಯಕ್ಷೆ ಮಹಾದೇವಿ ಲಕ್ಷ್ಮಣ ನೆರವೇರಿಸಿದರು. ಗ್ರಾಪಂ ಸದಸ್ಯ ಬಸವರಾಜ ಗೌಡ ಅವರು ಸಾಕ್ಷರತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಪಂ ಉಪಾಧ್ಯಕ್ಷ ನೀತಿರಾಜ್, ಪಿಡಿಒ ರಾಜೇಶ್ವರಿ, ಸದಸ್ಯ ಗಂಗಣ್ಣ ನಾಯಕ, ಬಸವರಾಜ, ನರಸಿಂಹ, ನಾಗರಾಜ, ಭೀಮ ಸೇರಿ ಅನೇಕರಿದ್ದರು.
ಕ್ಷೇಮಾಭಿವೃದ್ಧಿ ಸಂಘ: ನಗರದ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕಾರ್ಯದರ್ಶಿ ಪ್ರಭು ನಾಯಕ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಮಹಾವೀರ್, ಸದಸ್ಯರಾದ ವಿಜಯಕುಮಾರ್, ಶ್ರೀನಿವಾಸ್, ವೀರೇಶ್, ಅಹ್ಮದ್ ಸೇರಿ ಅನೇಕರಿದ್ದರು.
ವೀರ ಸಾವರ್ಕರ್ ಮಂಡಳಿ: ನಗರದ ವೀರ ಸಾವರ್ಕರ್ ಯುವಕ ಮಂಡಳಿಯಿಂದ ಬುಧವಾರ ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸೂಪರ್ ಮಾರ್ಕೆಟ್ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ನಗರಸಭೆ ಸದಸ್ಯ ನರಸಪ್ಪ ಎಕ್ಲಾಸಪುರ, ಶಶಿರಾಜ್ ಮಸ್ಕಿ, ಸೂರ್ಯಕಾಂತ್, ವಿನಾಯಕ ರಾವ್, ಸಂದೀಪ್ ಸಿಂಗನೋಡಿ, ರವಿಕುಮಾರ್ ಕಾವಲಿ, ರಾಜಕುಮಾರ್, ಗೋವಿಂದ, ತಾಯಪ್ಪ ಸೇರಿ ಅನೇಕರಿದ್ದರು.
ಸೇಂಟ್ ಥಾಮಸ್ ಕಾಲೇಜ್: ನಗರದ ಸೇಂಟ್ ಥಾಮಸ್ ಪದವಿ ಕಾಲೇಜಿನಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕಾಲೇಜು ಅಭಿವೃದ್ಧಿ ಮಂಡಳಿಯ ಥಾಮಸ್ ಅವರು ಧ್ವಜಾರೋಹಣ ನೆರವೇರಿಸಿದರು. ಮಂಡಳಿಯ ಸದಸ್ಯೆ ಸರಳ ಸ್ಯಾಮುವೆಲ್, ಡಾ.ಲಿಯಾಖತ್ ಬೇಗಂ, ಭೀಮಪ್ಪ, ಹನುಮಂತ ಚೌಹಾಣ್, ಗೋವಿಂದ, ಪದ್ಮಶ್ರೀ, ತುಳಸಿ, ಲಕ್ಷ್ಮಿ ಸೇರಿ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು.
ಸಹಕಾರಿ ನಿಯಮಿತ: ವೀರಶೈವ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಕಚೇರಿಯಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಹಕಾರಿಯ ಅಧ್ಯಕ್ಷ ಪಿ.ಮಲ್ಲಪ್ಪ ಅವರು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.ಹಿರಿಯ ನಿರ್ದೇಶಕ ಬಸವಲಿಂಗಪ್ಪ, ಮಾಣಿಕರೆಡ್ಡಿ, ಶಂಬಣ್ಣ ಪಾಟೀಲ್, ಶಿವಪ್ಪ ಪಲ್ಲೇದ್, ಬಿ.ಎಸ್. ಸುರಗಿಮಠ್ ಇದ್ದರು.
ವಿಜ್ಞಾನ್ ಹೈಸ್ಕೂಲ್: ನಗರದ ವಿಜ್ಞಾನ್ ರೆಸಿಡೆನ್ಸಿಯಲ್ ಹೈಸ್ಕೂಲ್ನಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಅಧ್ಯಕ್ಷ ಎಂ.ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶಾಲೆಯ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಹಿಳಾ ಮಹಾವಿದ್ಯಾಲಯ: ನಗರದ ಎಸ್ಸೆಸ್ಸೆಆರ್ಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸ್ ಮಲ್ ಸುಖಾಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಸಪ್ಪ ತಿಪ್ಪಾರೆಡ್ಡಿ, ಮಸ್ಕಿ ನಾಗರಾಜ್ ವಕೀಲರು, ಅಂಬಾಪತಿ ಪಾಟೀಲ್ ಸೇರಿ ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು.
ಉಡುಮಗಲ್-ಖಾನಾಪುರ: ತಾಲೂಕಿನ ಉಡುಮಗಲ್ ಖಾನಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಪಂ ಮಾಜಿ ಸದಸ್ಯ ಮಲ್ಲೇಶನಾಯಕ ಧ್ವಜಾರೋಹಣ ನೆರವೇರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಭೂದಾನಿ ಪಿ. ನರಸಿಂಹನಾಯಕ, ಎಸ್ಡಿಎಂಸಿ ಸದಸ್ಯ ಹನುಮಯ್ಯ ನಾಯಕ, ಬಂದೋಲಿ, ಆರ್.ಪಿ. ಕುಲಕರ್ಣಿ, ಖಾಜಾಹುಸೇನ್ ಎಂ. ಸೇರಿ ಶಾಲೆಯ ಬೋಧಕ, ವಿದ್ಯಾರ್ಥಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

