'ವಾಸ್ತವಿಕ ನೆಲೆಗಟ್ಟಿನ ಕಾವ್ಯ ಸಮಾಜಕ್ಕೆ ದೀಪದಂತೆ'
ಗುಲ್ಬರ್ಗ/ಶಹಾಬಾದ್: ವಾಸ್ತವಿಕ ನೆಲಗಟ್ಟಿನ ಮೇಲೆ ಕಾವ್ಯ ರಚನೆಯಾದಾಗ ಮಾತ್ರ ಅದು ಸಮಾಜಕ್ಕೆ ಸಹಕಾರವಾಗುತ್ತದೆ. ಅಂಥ ಕಾವ್ಯಗಳು ಸಮಾಜಕ್ಕೆ ಮಾರ್ಗದರ್ಶನಕವಾಗಿರುತ್ತವೆ ಎಂದು ಶಹಾಬಾದ್ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಜಿ.ಜಿ. ವಣಕ್ಯಾಳ ಹೇಳಿದರು.
ನಗರದ ವಿಜಯ ಕಂಪ್ಯೂಟರ್ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನೃಪತುಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯಲ್ಲಿ ಸ್ವಾತಂತ್ರೋತ್ಸವದ ಕಾವ್ಯ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕವನಗಳು ಅಂತರಂಗದ ಸೌಂದರ್ಯ ಹೇಳುತ್ತದೆ. ಸಾಹಿತ್ಯ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಕವಿಗಳು ಅಧ್ಯಯನ ಶೀಲರಾಗಬೇಕೆಂದು ಕರೆ ನೀಡಿದರು.
ಎಸ್.ಎಸ್. ಮರಗೋಳ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಂಕರ ಸೋಮಯಾಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವಿಗಳಲ್ಲಿ ಭಾವನೆಗಳು ತುಂಬಿ ಉಕ್ಕಿದಾಗ ಕವನವಾಗುತ್ತವೆ, ಅಂಥ ಕವನಗಳು ಸಮಾಜ ಮುಖಿಯಾಗಿರಬೇಕು. ಹಿರಿಯ ಕವಿಗಳ ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂದು ಹೇಳಿದರು.
ಅತಿಥಿಗಳಾದ ಪ್ರಸನ್ನ ಮಂಡಲಗಿರಿ, ಕೆ.ರಮೇಶ ಭಟ್ಟ, ಕಸಾಪ ಅಧ್ಯಕ್ಷ ಸಂತೋಷಕುಮಾರ್ ಇಂಗಿನಶೆಟ್ಟಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಸೋಮಶೇಖರ ನಂದಿದ್ವಜ, ರವಿಕುಮಾರ್ ಅಲ್ಲಮಶೆಟ್ಟಿ ಉಪಸ್ಥಿತರಿತ್ದರು.
ಯುವ ಕವಿಗಳಾದ ಎನ್.ಸಿ. ವಾರದ, ಮರಲಿಂಗ ಯಾದಗಿರಿ, ಪೂಜಪ್ಪ ಮೇತ್ರೆ, ಪಲ್ಲವಿ ಹಿರೇಮಠ, ಮಡಿವಾಳಪ್ಪ ಹೇರೂರ ವಾಡಿ, ಮಹಾಲಕ್ಷ್ಮೀ ಹೊಸಮನಿ, ದಾಮೋಧರ್ ಭಟ್ಟ, ಶೃತಿ ಮಲ್ಲಿಕಾರ್ಜುನ, ಪ್ರಸನ್ನ ಮಂಡಲಗಿರಿ ಕವನ ವಾಚನ ಮಾಡಿದರು.
ಗಣ್ಯರಾದ ಶರಣಬಸಪ್ಪ ಕೋಬಾಳ, ಗುರು ಇಂಗಿನಶೆಟ್ಟಿ, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ಜೆಡಿಎಸ್ ಮುಖಂಡ ಲೋಹಿತ ಕಟ್ಟಿ, ಬಿಜೆಪಿ ಮುಖಂಡ ನಾಗಣ್ಣ ರಾಂಪುರೆ, ರಾಜು ಕೋಬಾಳ, ಅನೀಲ್ ಮೈನಾಳಕರ್, ಬಸವರಾಜ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆರತಿ ಸ್ವಾಗತಿಸಿದರು. ವಿಶ್ವನಾಥ ಹಡಪದ ಕಾರ್ಯಕ್ರಮ ನಿರೂಪಿಸಿದರು. ವಾಸುದೇವ ಚವ್ಹಾಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

