ಶರಣರ ನುಡಿಗಳ ಆಚರಣೆಯಿಂದ ಜಾತಿ ನಿರ್ಮೂಲನೆ
ಕ.ಪ್ರ. ವಾರ್ತೆ ಸಿಂಧನೂರು ಆ.19
ಶರಣರ ವಿಚಾರಗಳನ್ನು ಬಸವಣ್ಣನ ಅನುಯಾಯಿಗಳು ಆಚಣೆಗೆ ತಂದರೆ ಜಾತಿ ನಿರ್ಮೂಲನೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ಗಂಗಾವತಿ ಸುದ್ದಿಚಿಂತಕ ದಿನಪತ್ರಿಕೆಯ ಸಂಪಾದಕ ಸಿ.ಎಚ್.ನಾರಿನಾಳ ಕರೆ ನೀಡಿದರು.
ಬಸವಕೇಂದ್ರ, ಯುವ ಬಸವಕೇಂದ್ರ ಹಾಗೂ ಮಹಿಳಾ ಬಸವಕೇಂದ್ರದಿಂದ ನಗರಸಭೆ ಸದಸ್ಯ ಶೇಖರಪ್ಪ ನಿವಾಸದಲ್ಲಿ ಭಾನುವಾರ ಮನೆಯಲ್ಲಿ ಮಹಾಮನೆ ವಚನಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಿಂಗಾಯತರು ಮೂರ್ತಿ ಪೂಜೆಯನ್ನು ತಿರಸ್ಕರಿಸಬೇಕು. ಎಲ್ಲಾ ಸಮುದಾಯಗಳಿಗೆ ಶರಣರ ವಚನಗಳನ್ನು ತಿಳಿಸಿ, ಎಲ್ಲರಲ್ಲೂ ಜಾಗೃತಿ ತರುವ ಮೂಲಕ ಸಮಾನತೆಯ ಸಮಾಜವನ್ನು ಕಟ್ಟಲು ಮುಂದಾಗುವಂತೆ ಸಲಹೆ ನೀಡಿದರು.
ಸಂಪ್ರದಾಯ ಧಿಕ್ಕರಿಸಿ: ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವ ಕೆಲ ವ್ಯಕ್ತಿಗಳು ತಿರುಪತಿ, ಧರ್ಮಸ್ಥಳ ಮತ್ತಿತರ ದೇವಸ್ಥಾನಗಳಿಗೆ ಹರಕೆ ಹೊರುವ ಸಂಪ್ರದಾಯವನ್ನು ಧಿಕ್ಕರಿಸಬೇಕಾಗಿದೆ. ವಿವಿಧ ಜಾತಿ, ಉಪಜಾತಿಗಳಲ್ಲಿ ನಂಬಿ ಕೆಡದೆ ಬಸವಣ್ಣ ಹೇಳಿದ ಮಾದಾರಚೆನ್ನಯ್ಯ ನಮ್ಮ ಗೋತ್ರ ಎನ್ನವ ಉದಾತ್ತ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.
ಅನುಕರಣೆ: ಉಪನ್ಯಾಸಕ ಗೋವಿಂದರಾಜ ಬಾರಕೇರ ಮಾತನಾಡಿ, ಶರಣರ ಚಿಂತನೆಗಳು ಸಾರ್ವಕಾಲಿಕೆ ಸತ್ಯವಾಗಿದೆ. ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಬಸವಕೇಂದ್ರದ ಹಿರಿಯರು ನುಡಿದಂತೆ ನಡೆದರೆ ಕಿರಿಯರು ಅನುಸರಿಸುತ್ತಾರೆ. ದಲಿತ ಕೇರಿಗಳಲ್ಲಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದಲಿತರ ಮೇಲಿನ ದೌರ್ಜನ್ಯ ತಡೆಯಲು ಸಹಕರಿಸುವಂತೆ ಮನವಿ ಮಾಡಿದರು.
ದೇವೆಂದ್ರಪ್ಪ ಯಾಪಲಪರ್ವಿ, ಶಿವಣ್ಣ ಹ. ಸಣ್ಣಪ್ಪನವರ್, ಡಾ.ಕೆ.ಶಿವರಾಜ, ಆರ್, ಅಂಬ್ರೂಸ್, ಡಿ.ಎಚ್. ಕಂಬಳಿ, ಸಿ.ಎಚ್. ನಾರಿನಾಳ, ಸಿದ್ರಾಮಪ್ಪ ಮಾಡಶಿರವಾರ, ನಾರಾಯಣಪ್ಪ ಮಾಡಶಿರವಾರ, ಅಮರೇಶ ಅಲಬನೂರು, ಗುಂಡಪ್ಪ ಬಳಿಗಾರ, ಪ್ರಹ್ಲಾದ ಗುಡಿ, ಚಂದ್ರಶೇಖರ ಬೆನ್ನೂರು, ಚಂದ್ರಶೇಖರ ಯರದಿಹಾಳ, ಯಮನಪ್ಪ ಮಲ್ಲಪುರ ಮತ್ತಿತರರನ್ನು ಸನ್ಮಾನಿಸಲಾಯಿತು.
ಎಂ. ಕಾಳಿಂಗಪ್ಪ ವಕೀಲರು, ವೀರಭದ್ರಪ್ಪ ಕುರುಕುಂದಿ, ಎನ್. ಶಿವನಗೌಡ ಗೊರೇಬಾಳ, ಆರ್. ತಿಮ್ಮಯ್ಯ ನಾಯಕ, ತಾ.ಪಂ. ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಸುಭಾಸ್ ಫ್ರಾಂಕ್ಲೀನ್, ದುರಗಪ್ಪ ಹಸ್ಮಕಲ್, ವೀರೇಶಪ್ಪ ಸಿರಗುಂಪಿ, ಅಶೋಕ ಉಮಲೂಟಿ ಮತ್ತಿತರರು ್ಲ ಭಾಗವಹಿಸಿದ್ದರು. ಹುಸೇನಪ್ಪ ಅಮರಾಪುರು ನಿರೂಪಿಸಿದರು. ಶೇಖರಪ್ಪ ಗಿಣಿವಾರ ಸ್ವಾಗತಿಸಿ, ನಿಜಗುಣ ಹಡಪದ ಮತ್ತು ಕಾವೇರಿ ಸಂಗಡಿಸಿದರು ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

