ರಾಯಚೂರು

ಮೌಲ್ಯಾಧಾರಿತ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ ಪ್ರಮುಖ

Published On :

ಕನ್ನಡಪ್ರಭ ವಾರ್ತ್ಣೆ ಬೀದರ್ಣ್ ಆ. 19
ಮೌಲ್ಯಾಧಾರಿತ ಶಿಕ್ಷಣ ನೀಡುವುದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಬೀದರ್ನ ಮಂಗಲಾ ಭಾಗವತ ನುಡಿದರು.
ಸದುಪಯೋಗ:  ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಚರಣೆ ಅಂಗವಾಗಿ ಆಯೋಜಿಸಲಾದ ಸಂವರ್ಧಿನಿ ಕಾರ್ಯಕ್ರಮದಡಿ ಹುಮನಾಬಾದಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚಿಗೆ ಆಯೋಜಿಸಲಾದ ಪ್ರಬುದ್ಧ ಮಹಿಳಾ ಸಂಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳಿಗೆ ಆರೋಗ್ಯ, ಒಳ್ಳೆಯ ನಡತೆ, ಸಂಸ್ಕಾರಗಳನ್ನು ನೀಡುವುದಕ್ಕಾಗಿ ಮಹಿಳೆಯರು ತಮ್ಮಲ್ಲಿನ ಸಾಮರ್ಥ್ಯದ ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸಂಸಾರದಲ್ಲಿ ಹತ್ತಾರು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಶಕ್ತಿಯುಳ್ಳ ಹೆಣ್ಣು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಆದರೆ ಸಿಕ್ಕಿರುವ ಸ್ವಾತಂತ್ರ ಸ್ವೇಚ್ಛೆಯಾಗದಿರಲಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಹಿರಿಯರಾದ ಮಾಣಿಕಪ್ಪ ಗಾದಾ ಮಾತನಾಡಿ, ಮಹಿಳೆಯರು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಬೇಕು. ಸ್ವದೇಶಿ ಅಭಿಯಾನವನ್ನು ಪ್ರಾರಂಭಿಸಬೇಕು. ಉತ್ತಮ ಸಂಸ್ಕಾರ ಕೊಡಬೇಕೆಂದು ಕಿವಿಮಾತು ಹೇಳಿದರು.
ಕರ್ತವ್ಯ: ಸಮಾರಂಭ ಉದ್ಘಾಟಿಸಿದ ಬಸವಕಲ್ಯಾಣದ ಮಧುಕರ ಮಹಾಜನ ವಕೀಲರು ವಿವೇಕಾನಂದರ ಆದರ್ಶ ಕುರಿತು ಉಪನ್ಯಾಸ ನೀಡಿದರು. ಸ್ವಾಮಿ ಪ್ರಣಯಾನಂದರು ಆಶೀರ್ವಚನ ನೀಡಿ ಮಹಿಳೆಯರ ಕರ್ತವ್ಯಗಳನ್ನು ಮಹಿಳೆಯರಿಗೆ ಮನದಟ್ಟು ಮಾಡಿಕೊಟ್ಟರು. ವಿವೇಕಾನಂದರ ಕನಸಿನ ಯುವಶಕ್ತಿ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ, ಭಾರತೀಯ ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯ ಪಾತ್ರ, ವೃತ್ತಿ ಜೀವನ ಮತ್ತು ಸಂಸಾರದ ಸಮರ್ಥ ನಿರ್ವಹಣೆ, ಸ್ತ್ರೀಶಕ್ತಿ ಜಾಗೃತಿ ಮುಂತಾದ ವಿಷಯಗಳ ಕುರಿತು ಗುಂಪು ಚರ್ಚೆ ನಡೆಯಿತು. ಸಮಾರಂಭದಲ್ಲಿ ಸುಮಾರು 85ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರದ ಕುರಿತು ಚಿಂತನೆ ಮಾಡಿದರು.
ಮೀರಾ ಮಂಠಾಳಕರ್ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮಿ ನಿರೂಪಿಸಿದರು. ಬಸವಕಲ್ಯಾಣದ ಸಂವರ್ಧಿನಿ ಕಮಿಟಿಯ ಪದಾಧಿಕಾರಿಗಳು, ಹುಮನಾಬಾದಿನ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಬುದ್ಧ ಮಹಿಳೆಯರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.