ರಾಯಚೂರು

ನಾಯಕತ್ವ ಕಳೆದುಕೊಳ್ಳುತ್ತಿರುವ ದಲಿತರು: ಸಜ್ಜನ್ ವಿಷಾದ

Published On :

ಚಿಂಚೋಳಿ: ದಲಿತ ಸಂಘಟನೆಗಳ ಹೋರಾಟಗಳನ್ನು ದಾರಿ ತಪ್ಪಿಸುವಲ್ಲಿ ದಲಿತ ನಾಯಕರೇ ಕಾರಣೀಭೂತರಾಗಿದ್ದಾರೆ. ನಿಸ್ವಾರ್ಥ ಸೇವೆ ಮಾಡಬೇಕೆ ಹೊರತು ತೋರಿಕೆಗಾಗಿ ಸೇವೆ ಮಾಡಬೇಡಿ. ದಲಿತರು ನಾಯಕತ್ವವನ್ನು ಕಳೆದುಕೊಳ್ಳುತ್ತಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶಿ ಸಜ್ಜನ್ ವಿಷಾದ ವ್ಯಕ್ತಪಡಿಸಿದರು.
ಚಂದಾಪುರ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ದಲಿತರಿಗೆ ಸಂವಿಧಾನಬದ್ಧವಾಗಿರುವ ಹಕ್ಕು ಸಿಗುತ್ತಿಲ್ಲ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ 40 ವರ್ಷಗಳ ಕಾಲ ಅಧಿಕಾರ ನಡೆಸಿದರು ದಲಿತರಿಗೆ ಸರಿ ಸಮಾನತೆಗಾಗಿ ಮೀಸಲಾತಿ ನೀಡಿಲ್ಲ ಎಂದು ಆರೋಪಿಸಿದರು.
ದಲಿತರಿಗೆ ವಿದ್ಯೆಗಾಗಿ ಅವಕಾಶ ಸಿಕ್ಕರು ವಿದ್ಯಾರ್ಜನೆಯಲ್ಲಿ ದಲಿತ ಯುವಕರು ಮುಂದೆ ಬರುತ್ತಿಲ್ಲ, ಮೀಸಲು ವಿಧಾನಸಭಾ ಮತ್ತು ಲೋಕಸಭಾ ಮತಕ್ಷೇತ್ರಗಳಿಂದ ಆಯ್ಕೆಗೊಂಡಿರುವ ಸಂಸದರು ದಲಿತರ ಉದ್ದಾರಕ್ಕಾಗಿ ಶ್ರಮಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಸಂಸ ಗುಲ್ಬರ್ಗ ವಿಭಾಗೀಯ ಸಂಚಾಲಕ ಅರ್ಜುನ ಭದ್ರೆ, ದಲಿತ ಮುಖಂಡ ಗೌತಮ ಬೊಮ್ಮನಳ್ಳಿ ಮಾತನಾಡಿದರು. ಮಲ್ಲಿನಾಥ ಕಳಸ್ಕರ್, ಪ್ರದೀಪ ಮೇತ್ರಿ, ವಾಮನರಾವ ಕೊರವಿ, ಜಗದೇವ ಗೌತಮ, ರಾಜಶೇಖರ ಹೊಸಮನಿ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಮಹಾಂತೇಶ ಕಟ್ಟಿಮನಿ ಸ್ವಾಗತಿಸಿದರು. ಗೋಪಾಲ ರಾಂಪುರೆ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ಲೊಡನೋರ ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.