ದೇಸಿ ಸಂಸ್ಕೃತಿ ಉಳಿವಿಗೆ ಶ್ರಮಿಸಿ: ಜಗದೀಶ್ ಕರೆ
ಕ.ಪ್ರ.ವಾರ್ತೆ, ಸೇಡಂ, ಆ.21
ಘಟಕಗಳನ್ನು ಸ್ಥಾಪಿಸುವ ಮೂಲಕ ದೇಶದ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕು ಹಾಗೂ ಪಾಶ್ಚಾತ್ಯ ಸಂಸ್ಕೃತಿ ಹೋಗಲಾಡಿಸಿ, ದೇಶಿಯ ಸಂಸ್ಕೃತಿ ಬೆಳೆಸಬೇಕು ಎಂದು ಕ್ಷೇತ್ರಿಯ ಸಂಸ್ಕಾರ ಕಾರ್ಯದರ್ಶಿ ಜಗದೀಶ ಮಳಗಿ ಹೇಳಿದರು.
ಸೇಡಂನ ಮಾತೃಛಾಯಾ ಕಾಲೇಜಿನ ಗ್ರಂಥಾಲಯ ಕೊಠಡಿಯಲ್ಲಿ ನೂತನವಾಗಿ ಭಾರತ ವಿಕಾಸ ಪರಿಷತ್ ರಾಷ್ಟ್ರಕೂಟ ಘಟಕದ ಸಭೆಯ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ದೇಶ ಪರದೇಶದ ಸಂಸ್ಕೃತಿಗೆ ಬಗ್ಗುತ್ತಿದೆ. ಇದು ದೇಶದ ಉನ್ನತಿಗೆ ಮಾರಕ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ ಅವರು, ಜಾತಿ, ಲಿಂಗ ಬಡವ, ಶ್ರೀಮಂತ ಎಂಬ ಭಾವನೆ ಇಲ್ಲದೆ ಸರ್ಕಾರದ ಯಾವುದೇ ಸಹಕಾರವಿಲ್ಲದೆ ಸ್ವಯಂ ಸೇವಾ ಸಂಸ್ಥೆಯಾಗಿ ಪರಿಷತ್ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ 25 ವರ್ಷಗಳಿಂದ ಸಂಸ್ಕೃತಿ, ಜಾನಪದ, ಸಂಗೀತ, ಹಿಂದಿ ಭಾಷೆ ಹಾಗೂ ಸಂಸ್ಕೃತ ಗೀತೆಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಅಧ್ಯಾತ್ಮಿಕ ಭಾವನೆ ತರಲು ಭಜನೆ ಆಯೋಜಿಸಲಾಗುತ್ತಿದೆ. ಪರಿಷತ್ ವತಿಯಿಂದ ವಿಕಲಾಂಗರಿಗೆ, ಗ್ರಾಮೀಣ ಜನರಿಗೆ ಹಾಗೂ ನೆರೆ ಸಂತ್ರಸ್ತರಿಗೆ ಸಹಕಾರವು ಸಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಆಯ್ಕೆ: ಇದೇ ಸಂದರ್ಭ ಭಾರತ ವಿಕಾಸ ಪರಿಷತ್ನ ರಾಷ್ಟ್ರಕೂಟ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ಸಾಹಿತಿ ಲಿಂಗಾರೆಡ್ಡಿ ಶೇರಿ, ಕಾರ್ಯದರ್ಶಿಯಾಗಿ ಕವಯತ್ರಿ ಅನ್ನಪೂರ್ಣ ಭಂಡಾರ್ಕರ್, ಖಜಾಂಚಿಯಾಗಿ ಸೂರ್ಯಕಾಂತ ನಿಂಗದಾಳರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮೀ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಶಿವಯ್ಯ ಮಠಪತಿ ಸ್ವಾಗತಿಸಿದರು. ಅನ್ನಪೂರ್ಣ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

