ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಪ್ರಭು ಬಡಿಗೇರ
ಆಳಂದ: ಸ್ವಾರ್ಥ ಜೀವನದಲ್ಲಿ ನಾವೆಲ್ಲ ಪರಿಸರವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಜೀವಿಗಳ ಉಳಿವಿಗೆ ಅದರ ಸಂರಕ್ಷಣೆ ಮಾಡುವುದು ಪ್ರತಿಯೋಬ್ಬರ ಜವಾಬ್ದಾರಿಯಾಗಿದೆ. ಸಸಿಗಳನ್ನು ನೆಟ್ಟರೆ ಸಾಲದು ಅವುಗಳ ಪಾಲನೆ, ಪೋಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜೆಎಂಎಫ್ಸಿ ನ್ಯಾಯಾಧೀಶ ಪ್ರಭು ಎನ್. ಬಡಿಗೇರ ಹೇಳಿದರು.
ಸ್ಥಳೀಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು, ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ರಕ್ಷಣೆಯಿಂದ ಉತ್ತಮ ಗಾಳಿ, ಬೆಳಕು, ಆಮ್ಲಜನಕ ದೊರೆಯುವುದು. ಗಿಡಮರಗಳನ್ನು ಹೆಚ್ಚು ಬೆಳೆಸುವುದು ತುಂಬಾ ಅಗತ್ಯವಾಗಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಕಾನೂನಿನಲ್ಲಿ ನಿಯಮಗಳು ಜಾರಿಯಲ್ಲಿವೆ ಎಂದರು.
ಸೌಲಭ್ಯ ಹೊಂದಿ: ಇಂದು ಮಹಿಳೆಯರ ಮೇಲೆ ಅನೇಕ ಅಹಿತಕರ ಘಟನೆಗಳು ನಡೆಯುತ್ತಿದ್ದು. ಇದನ್ನು ತಡೆಯಲು ಕಾನೂನು ಅರಿವು, ನೆರವು ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಮಹಿಳೆಯರು ಶಿಕ್ಷಣ ಪಡೆದು ಮುಂದೆ ಬರಬೇಕು. ಕಾನೂನಿನ ಮೂಲಕ ಅನೇಕ ಸೌಲಭ್ಯಗಳು ಮಹಿಳೆಯರಿಗಾಗಿಯೇ ಮೀಸಲಾಗಿದ್ದು, ಇದರ ಲಾಭವನ್ನು ಪಡೆದುಕೊಳ್ಳಬೇಕೆಂದರು.
ಕಾಲೇಜಿನ ಪ್ರಾಚಾರ್ಯ ಸುಧೀರ ಹೆಬ್ಬಾಳಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಗಾಳಿ, ಬೆಳಕಿನಷ್ಟೇ ಕಾನೂನುಗಳು ಮುಖ್ಯವಾಗಿವೆ. ಅವುಗಳನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮಗಳು ಸ್ತುತ್ಯಾರ್ಹವಾಗಿವೆ ಎಂದರು.
ನ್ಯಾಯವಾದಿ ಬಿ.ಎ. ದೇಶಪಾಂಡೆ, ಮಹಾದೇವ ಹತ್ತಿ ಕಾನೂನು ಅರಿವು ನೆರವು ಕುರಿತು ಉಪನ್ಯಾಸ ನೀಡಿದರು. ಸಂಘಧ್ಯಾಕ್ಷ ಎಸ್.ಡಿ. ಭೋಸಗೆ, ಕಾರ್ಯದರ್ಶಿ ಸ್ವಾಮಿರಾವ ಚೆನ್ನಗೊಂಡ, ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀಶೈಲ್ ಮಾಳಗೆ ಮತ್ತಿತರರು ಪಾಲ್ಗೊಂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

